ದಿವ್ಯಾ ಉರುಡುಗ ಬಿಗ್​ಬಾಸ್​ನಿಂದ ಹೊರಗೆ? ಸ್ನೇಹಿತೆಯನ್ನು ನೆನೆದು ಕಣ್ಣೀರಿಟ್ಟ ಅರವಿಂದ್

divya
Published on

ಬೆಂಗಳೂರು: ಬಿಗ್​ಬಾಸ್​ ಸೀಸನ್​ 8ರಲ್ಲಿ ಎಲ್ಲರ ಗಮನ ಸೆಳೆದ ಜೋಡಿ ದಿವ್ಯಾ ಉರುಡುಗ ಹಾಗೂ ಅರವಿಂದ್​. ಆದರೆ ಇದೀಗ ಆ ಜೋಡಿಗೂ ದೃಷ್ಟಿ ತಾಕಿರುವ ಸಾಧ್ಯತೆಯಿದೆ. ಇದ್ದಕ್ಕಿದ್ದಂತೆ ದಿವ್ಯಾ ಉರುಡುಗ ಅನಾರೋಗ್ಯಕ್ಕೆ ತುತ್ತಾಗಿ ಮನೆಯಿಂದ ಹೊರಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಬಿಗ್​ಬಾಸ್​ ಮತ್ತೊಂದು ಶಾಕ್​ ನೀಡಿದ್ದಾರೆ.

ಮನೆಯ ಸ್ಟೋರ್​ ರೂಂಗೆ ಪತ್ರವೊಂದು ಬರುತ್ತದೆ. ಅದರಲ್ಲಿ, ದಿವ್ಯಾ ಉರುಡುಗ ಅವರ ಬಟ್ಟೆಯನ್ನು ಪ್ಯಾಕ್​ ಮಾಡಿ ಈ ಕೂಡಲೇ ಸ್ಟೋರ್​ ರೂಂಗೆ ತಂದಿಡಿ ಎಂದು ಹೇಳಲಾಗುತ್ತದೆ. ಇದನ್ನು ಕೇಳಿದ ಮನೆ ಮಂದಿಯೆಲ್ಲ ಶಾಕ್​ ಆಗುತ್ತಾರೆ. ಅವಳು ಬರುವುದೇ ಇಲ್ಲವೇ ಎನ್ನುವ ಮಾತುಗಳನ್ನು ಆಡಿಕೊಳ್ಳಲಾರಂಭಿಸುತ್ತಾರೆ.

ದಿವ್ಯಾಳಿಗೆ ಅತಿ ಆಪ್ತವಾಗಿದ್ದ ಅರವಿಂದ್​ ಎಲ್ಲರಿಗಿಂತ ಹೆಚ್ಚು ಬೇಸರವಾಗುತ್ತಾರೆ. ಪ್ರತಿದಿನ ಬೆಳಗ್ಗೆಯಿಂದ ರಾತ್ರಿಯವರೆಗೆ ಜತೆಗಿರುತ್ತಿದ್ದ ಜೀವ ಈಗ ಹೀಗೆ ಹೋಗುತ್ತಿದೆಯಲ್ಲಾ ಎಂದು ಬೇಸರದಿಂದ ಕಣ್ಣೀರು ಹಾಕುತ್ತಾರೆ. ಅರವಿಂದ್​ ನಿನ್ನೆಯಿಂದ ತುಂಬಾ ನೊಂದಿದ್ದಾರೆ ಎಂದು ಪ್ರಶಾಂತ್​ ಸಂಬರಗಿ ಹೇಳಿದರೆ, ಅರವಿಂದ್​ನ್ನು ನನ್ನಿಂದ ನೋಡಲಾಗುತ್ತಿಲ್ಲ ಎಂದು ಮಂಜು ಹೇಳುತ್ತಾರೆ.

ದಿವ್ಯಾ ಅವರಿಗೆ ಯುರೈನ್​ ಇನ್ಫೆಕ್ಷನ್​ ಆಗಿರುವುದಾಗಿ ವೀಕ್ಷಕರಿಗೆ ಬಿಗ್​ಬಾಸ್​ ತಿಳಿಸಿದ್ದರು. ಆದರೆ ಅವರ ಸ್ಥಿತಿ ಹೇಗಿದೆ? ಅನಾರೋಗ್ಯದಿಂದ ಚೇತರಿಸಿಕೊಂಡು ಮತ್ತೆ ವಾಪಾಸು ಬರುತ್ತಾರೆಯೇ? ಎನ್ನುವುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net