ತನಿಖಾಧಿಕಾರಿ ಎದುರು ಹಾಜರಾದ ದಿವ್ಯಾ

Published on

ಕುಂಬಳೆ/ಕಣ್ಣೂರು: ಎಡಿಎಂ ನವೀನ್ ಬಾಬು ಆತ್ಮಹತ್ಯೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ

ಕಣ್ಣೂರು ಜಿಪಂ ಅಧ್ಯಕ್ಷೆಯಾಗಿದ್ದ ಪಿ.ಪಿ.ದಿವ್ಯಾ, ತನಿಖಾಧಿಕಾರಿ ಎದುರು ವಿಚಾರಣೆಗಾಗಿ ಮಂಗಳವಾರ ಹಾಜರಾಗಿದ್ದಾರೆ. ದಿವ್ಯಾ ಜತೆ ಸಿಪಿಎಂ ಪಕ್ಷದ ಸ್ಥಳೀಯ ಕಾರ್ಯಕರ್ತರು ಇದ್ದರು. ದಿವ್ಯಾ ವಶದಲ್ಲಿರುವುದನ್ನು ಖಚಿತಪಡಿಸಿರುವ ಪೋಲೀಸ್ ಆಯುಕ್ತರು, ಶೀಘ್ರದಲ್ಲೇ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net