

ಬಂಟ್ವಾಳ: ಸರಪಾಡಿ ಗ್ರಾಮದ ನೀರೊಲ್ಬೆ ನಿವಾಸಿ ದೇವದಾಸ್ ನಾಯ್ಕ, ನವರಾತ್ರಿಯ ಸಂದರ್ಭ ವೇಷ ಹಾಕಿ ಸಂಗ್ರಹಗೊಂಡ ಸುಮಾರು 50 ಸಾವಿರ ರೂ. ಮೊತ್ತವನ್ನು ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ಪ್ರಾರ್ಥಿಸಿ ಎರಡು ಅಶಕ್ತ ಕುಟುಂಬಗಳಿಗೆ ಇತ್ತೀಚೆಗೆ ಹಸ್ತಾಂತರಿಸಿದರು.
ಈ ತನಕ 1.50 ಲಕ್ಷ ರೂ.ಗಳಷ್ಟು ಮೊತ್ತ ಹಸ್ತಾಂತರಿಸಿದ್ದು, ಈ ಬಾರಿ ಸಂಗ್ರಹಗೊಂಡ 59,500 ರೂ.ಗಳಲ್ಲಿ ತಲಾ 25 ಸಾವಿರ ರೂ.ಗಳನ್ನು ಅನಾರೋಗ್ಯದಿಂದ ಬಳಲುತ್ತಿರುವ ಇಬ್ಬರಿಗೆ ಹಾಗೂ ಉಳಿಕೆ ಮೊತ್ತವನ್ನು ದೇವಸ್ಥಾನಕ್ಕೆ ನೀಡಿದರು.
ದೇವಸ್ಥಾನದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ, ಅರ್ಚಕ ಜಯರಾಮ ಕಾರಂತ, ಸರಪಾಡಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಪೂವಪ್ಪ ಪೂಜಾರಿ ಕಡಮಾಜೆ, ದೇವದಾಸ್ ತಾಯಿ ಲಕ್ಷ್ಮೀ, ಗಿರೀಶ್ ನಾಯ್ಕ ನೀರಪಲ್ಕೆ, ಯೋಗೀಶ್ ಗೌಡ ನೀರೊಲ್ಬೆ, ಶೇಖರ್ ಮೇಸ್ತ್ರಿ ಬಲಯೂರು, ದಿನೇಶ್ ಪೂಜಾರಿ ಕೂರ್ಯಾಳ, ಪ್ರದೀಪ್ ಗೌಡ ಕುದ್ಕುಂಜ ಮೊದಲಾದವರು ಉಪಸ್ಥಿತರಿದ್ದರು.