ಬೆಂಗಳೂರು: ನಮ್ಮ ಮೆಟ್ರೋ ಹಸಿರು ಮಾರ್ಗದ ವಿಸ್ತರಿತ ಪ್ರದೇಶದಲ್ಲಿ ಸಿಗ್ನಲಿಂಗ್ ಪರೀಕ್ಷೆಗಳನ್ನು ಹಮ್ಮಿಕೊಂಡಿರುವುದರಿಂದ ಆ.13ರಿಂದ 15ರವರೆಗೆ ಪೀಣ್ಯ ಇಂಡಸ್ಟ್ರೀ-ನಾಗಸಂದ್ರ ನಡುವೆ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ಇದನ್ನೂ ಓದಿ: ಜಾರ್ಖಂಡ್: 3 ವರ್ಷದ ಬಾಲಕಿ ಮೇಲೆ ಸ್ಕೂಲ್ ವ್ಯಾನ್ ಚಾಲಕನಿಂದ ಅತ್ಯಾಚಾರ! ಪೋಕ್ಸೊ ಪ್ರಕರಣ ದಾಖಲು
ಆಗಸ್ಟ್ 13ರಂದು 14 ರಂದು ರಾತ್ರಿ ನಾಗಸಂದ್ರದಿಂದ ರಾತ್ರಿ 11.05ರ ಬದಲು ರಾತ್ರಿ 10 ಗಂಟೆವರೆಗೆ ಮೆಟ್ರೋ ಸಂಚಾರ ಸೇವೆ ಇರಲಿದೆ. ನಾಗಸಂದ್ರಕ್ಕೆ ರಾತ್ರಿ 9.34ಕ್ಕೆ ಕೊನೆ ರೈಲು ಸಂಚರಿಸಲಿದೆ. ಇನ್ನು ಆ.14ರಂದು 15 ರಂದು ಬೆಳಗ್ಗೆ 5ರ ಬದಲು 6 ಗಂಟೆಯಿಂದ ನಾಗಸಂದ್ರ-ರೇಷ್ಮೆ ಸಂಸ್ಥೆ ರೈಲು ಸೇವೆ ಆರಂಭವಾಗಲಿದೆ.
ಪೀಣ್ಯ ಇಂಡಸ್ಟ್ರಿಯಿಂದ, ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ಮೊದಲ ರೈಲು ಸೇವೆಯು ಆಗಸ್ಟ್ 14 ಮತ್ತು 15 ರಂದು ಬೆಳಿಗ್ಗೆ 5 ಗಂಟೆಗೆ ಸಂಚಾರ ಪ್ರಾರಂಭವಾಗುತ್ತದೆ. ಇನ್ನು ನೇರಳೆ ಮಾರ್ಗದ ಮೆಟ್ರೋ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.