

ಮಾಗಡಿ: ಪಟ್ಟಣದಲ್ಲಿನ ಗಾಂಧಿ ವೃತ್ತವನ್ನು 1.50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿ, 36 ಲ ರೂ. ವೆಚ್ಚದ ನಿಂತಿರುವ ಭಂಗಿಯ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.
ಇಲ್ಲಿನ ಪುರಸಭೆಯಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ಹೊಸಪೇಟೆ ವೃತ್ತದ ಅಭಿವೃದ್ಧಿಗೂ ಒತ್ತು ನೀಡಲಾಗಿದ್ದು, ಈ ವೃತ್ತಕ್ಕೂ ಸಾಧಕರ ಹೆಸರಿಡಲಾಗುವುದು. ತಿರುಮಲೆ ಶ್ರೀನಿವಾಸಸ್ವಾಮಿ ವೃತ್ತದಲ್ಲಿ ಮಾಂಡವ್ಯ ಮಹರ್ಷಿಗಳ ಪ್ರತಿಮೆ ಸ್ಥಾಪಿಸಿ, ಪುರಸಭೆ ಆವರಣದಲ್ಲಿರುವ ಕೆಂಪೇಗೌಡ ಪ್ರತಿಮೆಯನ್ನು ನಿಯಮಾನುಸಾರ ಬದಲಾವಣೆ ಮಾಡಲಾಗುವುದು. ಇದರಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲ, ಈ ಸಂಬಂಧ ಮುಂಜಾಗ್ರತಾ ಕ್ರಮದಿಂದ ನೋಟಿಸ್ ಬೋರ್ಡ್ನಲ್ಲಿ ಪ್ರಕಟಣೆಗೆ ಅಧಿಕಾರಿಗಳಿಗೆ ತಿಳಿಸಲಾಗಿದೆ.
ನಮಗೂ ಕೆಂಪೇಗೌಡರ ಮೇಲೆ ಅಭಿಮಾನವಿದೆ. ಈ ವಿಚಾರವಾಗಿ ಮತ್ತೊಮ್ಮೆ ಸಭೆ ಕರೆದು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಾಸಕರು ಹೇಳಿದರು. ಈ ವೇಳೆ ಯಾವುದೇ ದುರ್ಟನೆಗೆ ಅವಕಾಶ ಬೇಡ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿಮೆ ಸ್ಥಳಾಂತರಗೊಳಿಸಬೇಕು ಎಂದು ಸದಸ್ಯ ಎಂ.ಎನ್.ಮಂಜುನಾಥ್ ಸಲಹೆ ನೀಡಿದರು. ಹಾಗೆಯೇ ಅಗ್ನಿಬನ್ನಿಗರಾಯಸ್ವಾಮಿ, ಡಾ.ಸಿದ್ದಲಿಂಗಯ್ಯ, ಎಚ್.ಎಂ.ರೇವಣ್ಣ ಅವರ ಹೆಸರನ್ನು ಒಂದೊಂದು ವೃತ್ತಕ್ಕೆ ನಾಮಕರಣ ಮಾಡಲು ಮನವಿ ಮಾಡಿದರು. ಆಗ ಬಾಲಕೃಷ್ಣ ಉದ್ಯಾನವನ್ನು 5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಗೊಳಿಸಲಾಗುತ್ತಿದ್ದು, ಈ ಉದ್ಯಾನವನಕ್ಕೆ ಇಟ್ಟಿರುವ ನನ್ನ ಹೆಸರನ್ನು ತೆಗೆದು ಬೇರೆ ಗಣ್ಯರ ಹೆಸರಿಡಲು ಶಾಸಕರು ಸೂಚಿಸಿದರು.
ಸದಸ್ಯರಾದ ಎಚ್.ಜೆ.ಪುರುಶೋತ್ತಮ್, ಹೇಮಲತಾ, ನಾಗರತ್ನಮ್ಮ, ಕಾಂತರಾಜು, ರಾಮು, ಅನಿಲ್ಕುಮಾರ್, ಜಯರಾಮ್, ರೇಖಾ, ಭಾಗ್ಯಮ್ಮ, ವಿಜಯಲ್ಮ, ಶಿವರುದ್ರಮ್ಮ, ಮಮತಾ, ಇಂಜಿನಿಯರ್ ಪ್ರಶಾಂತ್, ಲೆಕ್ಕಾಧಿಕಾರಿ ನಾಗೇಂದ್ರ, ನಾಗರಾಜು, ಮೋಹನ್, ಜಯಶ್ರೀ ಇದ್ದರು.
ನೀರಿನ ಸಮಸ್ಯೆ ನಿವಾರಣೆಗಿಂತ ಖರ್ಚು ಜಾಸ್ತಿ ಪಟ್ಟಣದಲ್ಲಿ 6 ಸಾವಿರ ನೀರಿನ ಸಂಪರ್ಕಗಳಿವೆ. 9 ಸಾವಿರ ಖಾತೆದಾರರಿದ್ದು, ಕುಡಿಯುವ ನೀರಿನ ಸಮಸ್ಯೆಗಳು ತಪ್ಪಿಲ್ಲ. ಆದರೂ ಮೋಟರ್ ಪಂಪ್ ರಿಪೇರಿಗೆ ಲಾಂತರ ರೂ. ಹಣವನ್ನು ಹೊಳೆಯಂತೆ ಖರ್ಚು ಮಾಡಲಾಗುತ್ತಿದೆ. ಅಧಿಕಾರಿಗಳ ರ್ನಿಲಕ್ಷ$್ಯದಿಂದ ನೀರಿನ ತೆರಿಗೆ ವಸೂಲಿಯೂ ಆಗುತ್ತಿಲ್ಲ, ಟ್ರೇಡ್ ಲೈಸೆನ್ಸ್ ಕೊಡುತ್ತಿಲ್ಲ, ಹೀಗಾದರೆ ಪುರಸಭೆ ವಾರ್ಡ್ಗಳ ಅಭಿವೃದ್ಧಿಗೆ ಎಲ್ಲಿಂದ ಹಣ ಕ್ರೋಡಿಕರಣಗೊಳಿಸುವುದು ? ಎಂದು ಸದಸ್ಯ ಎಂ.ಎನ್.ಮಂಜುನಾಥ್ ಶಾಸಕರನ್ನು ಪ್ರಶ್ನಿಸಿದರು. ಸದಸ್ಯ ರಂಗಹನುಮಯ್ಯ, ಆಶ್ವತ್ಥ ಧ್ವನಿಗೂಡಿಸಿದರು. ನೀರಿನ ಪೈಪ್ಲೈನ್ ಟೆಂಡರ್ ಕೊಟ್ಟ ಮೇಲೆ ಆ ವಾರ್ಡ್ನ ಸದಸ್ಯರ ಗಮನಕ್ಕೆ ತಾರದೆ ಕಾಮಗಾರಿ ನಡೆಸಿದರೇ ಹೇಗೆ? ಎಂದು ಸದಸ್ಯ ಪುರುಶೋತ್ತಮ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ತಾರತಮ್ಯ ಮಾಡುವುದನ್ನು ಬಿಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಧ್ಯೆ ಪ್ರವೇಶಿಸಿದ ಶಾಸಕರು, ವಾರ್ಡ್ವಾರು ನೀರಿನ ಮತ್ತು ಯುಜಿಡಿ ತೆರಿಗೆ ವಸೂಲಿ ಮಾಡಬೇಕು. ಜತೆಗೆ ಉದ್ದಿಮೆದಾರರ ಪರವಾನಿಗೆಯನ್ನು ನವೀಕರಿಸಲು ಕ್ರಮವಹಿಸಬೇಕು ಎಂದು ಮುಖ್ಯಾಧಿಕಾರಿ ಶ್ರೀನಿವಾಸ್ಗೆ ತಾಕೀತು ಮಾಡಿದರು. ಚರ್ಚಿತ ವಿಷಯ ದಾಖಲಾಗಲಿ ಪುರಸಭೆಯಲ್ಲಿನ ಸಭೆಗಳಲ್ಲಿ ನಾವು ಚರ್ಚಿಸಿದ ವಿಷಯಗಳ ಬಗ್ಗೆ ಅಧಿಕಾರಿಗಳು ರೆಕಾರ್ಡ್ ಮಾಡುತ್ತಿಲ್ಲ. ಇದರಿಂದ ಯಾವ್ಯಾವ ವಿಷಯ ಚರ್ಚೆಯಾಯಿತು ಎಂಬುದೇ ಗೊತ್ತಾಗುವುದಿಲ್ಲ. ಸಭೆಯಲ್ಲಿ ಚರ್ಚೆಯಾದ ವಿಷಯಗಳನ್ನು ಕಡ್ಡಾಯವಾಗಿ ರೆಕಾರ್ಡ್ ಮಾಡಿಸಬೇಕೆಂದು ಸದಸ್ಯ ಎಂ.ಎನ್.ಮಂಜುನಾಥ್ ಶಾಸಕರ ಗಮನ ಸೆಳೆದಾಗ, ಎಲ್ಲ ವಿಚಾರಗಳನ್ನು ರೆಕಾರ್ಡ್ ಮಾಡುವಂತೆ ಅಧಿಕಾರಿಗಳಿಗೆ ಶಾಸಕರು ತಾಕೀತು ಮಾಡಿದರು. ಐಡಿಎಸ್ಎಂಟಿ ನಿವೇಶನ ಬಹಿರಂಗ ಹರಾಜು ಪಟ್ಟಣದ ತಿರುಮಲೆಯಲ್ಲಿ ಕಳೆದ 30 ವರ್ಷಗಳ ಹಿಂದೆ ನಿರ್ಮಿಸಿರುವ ಐಡಿಎಸ್ಎಂಟಿ ಬಡಾವಣೆಯ ಖಾಲಿ ನಿವೇಶನಗಳನ್ನು ಸರ್ಕಾರದ ನಿಯಮಾನುಸಾರ ಹರಾಜು ನಡೆಸಲು ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಶಾಸಕರು ತಿಳಿಸಿದರು. ಪಟ್ಟಣದ ಕಲ್ಯಾಗೇಟ್ ಬಳಿ ಚರಂಡಿ ನಿರ್ಮಿಸದಿರುವುದರಿಂದ ಒಳಚರಂಡಿಯ ಕಲುಷಿತ ನೀರು ಒಂದು ತಿಂಗಳಿನಿಂದ ರಸ್ತೆ ಮೇಲೆ ಹರಿಯುತ್ತಿದೆ. ಈ ಸಂಬಂಧ ದುರಸ್ತಿಗೆ ಹಲವು ಬಾರಿ ಅಧಿಕಾರಿಗೆ ಲಿಖಿತ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪರಿಣಾಮ ಈ ಭಾಗದ ಜನ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಇದರಿಂದ ವಾರ್ಡ್ ಸದಸ್ಯನಾದ ನನಗೂ ಜನ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಸದಸ್ಯ ಮಂಜು ಆರೋಪಿಸಿದರಲ್ಲದೇ ಗುತ್ತಿಗೆದಾರ ನಾಪತ್ತೆಯಾಗಿದ್ದಾನೆ. ಆತ ಬಂದ ನಂತರ ಕ್ರಮ ಕೈಗೊಳ್ಳಲಾಗುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಹೀಗಾದರೆ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಕೆ.ಎನ್.ರಾಜಣ್ಣ ಬಿಜೆಪಿಗೆ ಹೋಗಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಅವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಅವರು ಕಾಂಗ್ರೆಸ್ಸಿನಲ್ಲಿಯೇ ಮುಂದುವರೆಯಲಿ.. ಸಂತೋಷ. ನಾವೂ ಕೂಡ ಕಾಂಗ್ರೆಸ್ಸಿನಲ್ಲಿಯೇ ಇರುತ್ತೇವೆ. > ಎಚ್.ಸಿ.ಬಾಲಕೃಷ್ಣ ಶಾಸಕ, ಮಾಗಡಿ