

ಅಶೋಕ ಶೆಟ್ಟರ, ಬಾಗಲಕೋಟೆ: ಬಾಲಿವುಡ್ ಶ್ರೇಷ್ಠ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಸೋನಿ ವಾಹಿನಿಯಲ್ಲಿ ನಡೆಸಿಕೊಡುತ್ತಿರುವ ಪ್ರಸಿದ್ಧ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಬಡ ಕುಟುಂಬದ ಯುವಕ ರಮ್ಜಾನ್ ಮಲಿಕಸಾಬ್ ಪೀರಜಾದೆ ೧೫ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ ೫೦ ಲಕ್ಷ ರೂ.ಗಳನ್ನು ಗೆದ್ದು ಗಮನ ಸೆಳೆದಿದ್ದಾರೆ.
ಕೆಬಿಸಿಯ ಹಾಟ್ ಸೀಟ್ ನಲ್ಲಿ ಕೂಡಬೇಕು ಎನ್ನುವ ತನ್ನ ಬಾಲ್ಯದ ಕನಸು ನನಸು ಮಾಡಿಕೊಳ್ಳಲು ರಮ್ಜಾನ್ ಮೂರು ವರ್ಷಗಳಿಂದ ಸಾಕಷ್ಟು ತಯಾರಿ ನಡೆಸಿದ್ದು, ಒಟ್ಟು ೮ ಸಲ ಕೆಬಿಸಿಗೆ ಸಂದರ್ಶನ ನೀಡಿದ್ದು, ೨೦೨೫ರ ಜನೆವರಿ ೧೦ ರಂದು ಅದು ಈಡೇರಿದೆ. ಅಲ್ಲದೇ ೫೦ ಲಕ್ಷ ರೂ.ಗಳನ್ನು ಗೆದ್ದಿದ್ದಾರೆ. ರಮ್ಜಾನ್ ೫೦ ಲಕ್ಷ ರೂ. ಗೆದ್ದ ಸಂಚಿಕೆ ಇದೇ ೧೩ ರಂದು ರಾತ್ರಿ ೯ ಗಂಟೆಗೆ ಸೋನಿ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ರಮ್ಜಾನ್ ತಂದೆ ಮಲಿಕಸಾಬ್ ಸ್ವಂತ ಗ್ಯಾರೇಜ್‌ನಲ್ಲಿ ಗ್ಯಾಸ್ ವೆಲ್ಡಿಂಗ್ ಹಾಗೂ ಕರೆಂಟ್ ವೆಲ್ಡಿಂಗ್ ಮಾಡುತ್ತಾರೆ. ಮಗ ರಮ್ಜಾನ್ ಕಳೆದ ಒಂದು ವರ್ಷದಿಂದ ಮಹಾಲಿಂಗಪುರದ ಚಹಾದ ಅಂಗಡಿಯೊAದರಲ್ಲಿ ಕೆಲಸ ಮಾಡುತ್ತಿದ್ದ. ಅದಕ್ಕೂ ಮೊದಲು ಪೆಟ್ರೋಲ್ ಹಾಗೂ ವಾಚಮನ್ ಕೆಲಸ ಮಾಡಿದ್ದಾನೆ. ೨೦೨೪ರಲ್ಲಿ ಬಿಎ ಪದವಿ ಮುಗಿಸಿರುವ ೨೧ ವರ್ಷ ರಮ್ಜಾನ್ ಕೆಎಎಸ್ ತರಬೇತಿಗೆಂದು ಜನೆವರಿ ಆರಂಭದಲ್ಲಿ ಧಾರವಾಡಕ್ಕೆ ತೆರಳಿದ್ದ. ಅಲ್ಲಿಗೆ ಹೋದ ಮೂರು ದಿನದಲ್ಲಿ ಕೆಬಿಸಿಗೆ ಆಯ್ಕೆ ಆಗಿದ್ದು, ಮುಂಬೈಗೆ ಬರುವಂತೆ ಕರೆ ಬಂದಿತ್ತು. ಜ. ೧೦ ರಂದು ನಡೆದ -Áಸ್ಟೆಸ್ಟ್ ಪಿಂಗರ್ ನ ಮೊದಲ ಸುತ್ತಿನಲ್ಲಿ ಮೊದಲ ಆಯ್ಕೆಯಾಗಿ ಸಂಭ್ರಮಿಸುತ್ತ ಹಾಟ್ ಸೀಟ್‌ಗೆ ಹೋಗಿ ಅಮಿತಾಬ್ ಬಚ್ಚನ್ ಎದುರು ಕುಳಿತಿದ್ದು ಮರೆಯಲಾಗದ ಕ್ಷಣ ಎನ್ನುತ್ತಾರೆ ರಮ್ಜಾನ್.
ಒಟ್ಟು ೭ ಕೋಟಿ ರೂ. ಬಹುಮಾನದ ಕೆಬಿಸಿ ಆಟದಲ್ಲಿ ೧೭ ಪ್ರಶ್ನೆಗಳು ಇದ್ದವು. ಮೊದಲು ೩.೨೦ ಲಕ್ಷ ರೂ. ಗೆದ್ದಾಗ ಆಗ ಬಚ್ಚನ್ ಸರ್ ಗೆ ನಾನು ಜೀವನದಲ್ಲಿ ಮೊದಲ ಭಾರಿಗೆ ದೊಡ್ಡ ಮೊತ್ತದ ಚೆಕ್ ನೋಡಿದೆ ಎಂದಿದ್ದೆ. ಬಳಿಕ ೫೦ ಲಕ್ಷ ರೂ.ಗಳ ೧೫ ಪ್ರಶ್ನೆಗೆ ಉತ್ತರ ನೀಡಿದೆ. ೧ ಕೋಟಿ ರೂ. ಬಹುಮಾನದ ೧೬ನೇ ಪ್ರಶ್ನೆಗೆ ರಿಸ್ಕ್ ಬೇಡ ಎಂದು ಕ್ವಿಟ್ ಮಾಡಿದೆ ಎಂದು ರಮ್ಜಾನ್ ವಿಜಯವಾಣಿಗೆ ತಿಳಿಸಿದರು.
ಬಾಲ್ಯದಿಂದಲೂ ಕ್ವಿಜ್ ನಲ್ಲಿ ಭಾಗವಹಿಸುವ ಆಸಕ್ತಿ ಹೊಂದಿದ್ದೆ. ನಮ್ಮೂರಿನಲ್ಲಿ ಇರುವ ಕೆಎಲ್‌ಇ ಸಂಸ್ಥೆಯಲ್ಲಿ ಪದವಿಯಲ್ಲಿ ಓದುವಾಗ ಅಲ್ಲಿನ ಗ್ರಂಥಾಲಯ ನನಗೆ ಸಾಕಷ್ಟು ಅನುಕೂಲವಾಯಿತು. ಪುಸ್ತಕ, ದಿನ ಪತ್ರಿಕೆಗಳು, ಮೊಬೈಲ್ ನಲ್ಲಿ ನಿತ್ಯ ರಾಷ್ಟç ಹಾಗೂ ಅಂತಾರಾಷ್ಟಿçÃಯ ವಿದ್ಯಾಮಾನಗಳ ತಿಳಿದುಕೊಳ್ಳುವ ಕಡೆಗೆ ಗಮನ ಹರಿಸುತ್ತಿದ್ದೆ. ಇದೆಲ್ಲವೂ ನನಗೆ ಇವತ್ತು ಕೆಬಿಸಿಯಲ್ಲಿ ೫೦ ಲಕ್ಷ ರೂ. ಗೆಲ್ಲಲು ಸಹಕಾರಿ ಆಯಿತು ಎನ್ನುತ್ತಾರೆ.