೩೫ ಲಕ್ಷಕ್ಕಿಂತ ಪ್ರಕರಣಗಳು ಬಾಕಿ

7e86b2ad-a21e-42e8-8a95-6fa7ac34bc40
Published on

ಬಾಗಲಕೋಟೆ: ರಾಜ್ಯದಲ್ಲಿರುವ ಎಲ್ಲ ನ್ಯಾಯಾಲಯಗಳಲ್ಲಿ ಒಟ್ಟು ೩೫ ಲಕ್ಷಕ್ಕಿಂತ ಹೆಚ್ಚಿನ ಪ್ರಕರಣಗಳು ಬಾಕಿ ಉಳಿದಿವೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಹೇಳಿದರು.

ನಗರದ ವಕೀಲ ಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಹಾಗೂ ನ್ಯಾಯವಾದಿಗಳ ಸಂಘದಿಂದ ಹಮ್ಮಿಕೊಂಡಿದ್ದ ಕಾನೂನು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದ ಜನಸಂಖ್ಯೆಯೇ ೭ ಕೋಟಿ. ಅದರಲ್ಲಿ ಶೇ ೫೦ ರಷ್ಟು ಯುವಕರಿದ್ದು, ಉಳಿದ ೩.೫ ಕೋಟಿ ಜನರ ೩೫ ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ. ಇದರ ಬಗ್ಗೆ ನಾವು ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ಕೋರ್ಟ್ಗೆ ಬರುವ ವ್ಯಕ್ತಿಯನ್ನು ತುಚ್ಛವಾಗಿ ನೋಡುವ ಸಂಸ್ಕೃತಿ ಬ್ರಿಟಿಷರ್ ಕಾಲದಿಂದ ಬಂದಿದೆ. ಕೋರ್ಟ್‌ಗೆ ಆಗಮಿಸುವ ಹಿರಿಯ ವ್ಯಕ್ತಿ ಸಾಕ್ಷಿದಾರರು ಸೇರಿದಂತೆ ಪ್ರತಿಯೊಬ್ಬರನ್ನು ಸರಿಯಾದ ದೃಷ್ಟಿಕೋನದಲ್ಲಿ ನೋಡುವ ಕೆಲಸವಾಗಬೇಕು. ಎರಡು ನೀತಿಯ ಮನಸ್ಥಿತಿ ಬದಲಾಗಬೇಕಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net