೨೧ ಸಾವಿರ ದೀಪ ಬೆಳಗಿದ ಮಹಿಳೆಯರು

1102 ard 03
Published on

ಔರಾದ್: ಕನ್ನಡಿಗರ ಹಬ್ಬ ರಾಜ್ಯೋತ್ಸವವನ್ನು ಪಟ್ಟಣದ ಸಾಯಿ ಮಂದಿರದಲ್ಲಿ ೨೧ ಸಾವಿರ ದೀಪ ಬೆಳಗುವ ಮೂಲಕ ವಿಭಿನ್ನವಾಗಿ ಸಡಗರ ಸಂಭ್ರಮದೊಂದಿಗೆ ಆಚರಿಸಲಾಯಿತು.

ಪ್ರತಿ ವರ್ಷದಂತೆ ಕಾರ್ತಿಕ ಮಾಸ ಮತ್ತು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದು, ಮುಂಚಿತವಾಗಿಯೇ ನೋಂದಣಿ ಮಾಡಿಕೊಂಡ ವಿವಿಧ ಗ್ರಾಮಗಳ ಮಹಿಳೆಯರು ದೀಪ ಬೆಳಗಿ ಸಂಭ್ರಮಿಸಿದರು. ದೀಪೋತ್ಸವ ಮುಂಚಿತವಾಗಿ ನೋಂದಣೆ ಮಾಡಿಕೊಂಡ ತಾಲೂಕಿನ ವಿವಿಧ ಗ್ರಾಮದ ಮಹಿಳೆಯರು ದೀಪ ಬೆಳಗುವ ಮೂಲಕ ಸಂಭ್ರಮಿಸಿದರು.

ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೀಪೋತ್ಸವದಂತಹ ಕಾರ್ಯಕ್ರಮಗಳಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ. ಎಲ್ಲರಲ್ಲೂ ಬಾಂಧವ್ಯ ಬೆಳೆಯುತ್ತದೆ ಎಂದರು.

ಪ್ರಮುಖರಾದ ಗುಂಡಯ್ಯ ಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಘುನಾಥ ಬಿರಾದಾರ, ಮಲ್ಲಿಕಾರ್ಜುನ ಸ್ವಾಮಿ, ಪ್ರಭುರಾವ ಕಸ್ತೂರೆ, ಡಾ.ಮನ್ಮಥ ಡೋಳೆ, ಪಿಎಸ್‌ಐ ಉಪೇಂದ್ರ, ಪ್ರಮುಖರಾದ ಶಿವಾನಂದ ಮೊಕ್ತೇದಾರ್, ಕಸಾಪ ತಾಲೂಕು ಅಧ್ಯಕ್ಷ ಡಾ.ಶಾಲಿವಾನ ಉದಗೀರೆ, ಬಾಲಾಜಿ ಅಮರವಾಡಿ, ವಿಶ್ವನಾಥ ಸಾಹುಕಾರ, ಸುಭಾಷರಡ್ಡಿ, ನವೀನ ಬಿರಾದಾರ, ನಾಗನಾಥ ಜೀರ್ಗೆ ಇತರರಿದ್ದರು.

ಅಶೋಕ ಶೆಂಬೆಳ್ಳಿ ಸ್ವಾಗತಿಸಿದರು. ಅಂಬಾದಾಸ ನೇಳಗೆ ನಿರೂಪಣೆ ಮಾಡಿದರು. ಮಲ್ಲಿಕಾರ್ಜುನ ಟೇಕರಾಜ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net