

ಸಂತೋಷ ದೇಶಪಾಂಡೆ
ಬಾಗಲಕೋಟೆ: ನಾನಾ ಕಾರಣಗಳಿಂದ ಕೆಲವು ವರ್ಷಗಳಿಂದ ಮರೆಯಾಗುತ್ತಿರುವ ಕೋಟೆನಗರಿ ಐತಿಹಾಸಿಕ ಹೋಳಿ ಗತ ವೈಭವ ಪುನರ್ ಸ್ಥಾಪಿಸುವ ಗಂಭೀರ ಚಿಂತನೆ ಕಳೆದ ಒಂದು ದಶಕಗಳಿಂದ ಆರಂಭಗೊAಡಿತ್ತು. ಸಾಂಸ್ಕೃತಿಕ ರೂಪ ನೀಡುವ ಚಿಂತನೆಗೆ ಮತ್ತೋಮ್ಮೆ ಆಘಾತ ಎದುರಾಗಿದೆ...!!!
ಹೌದು, ಬಾಗಲಕೋಟೆ ಹೋಳಿ ಉತ್ಸವಕ್ಕೆ ಬಿಡುಗಡೆಯಾಗಿದ್ದ ಅನುದಾನ ಸರ್ಕಾರ ವಾಪಸ್ ಪಡೆದುಕೊಂಡಿದೆ. ಕೋಟೆನಗರಿ ಐತಿಹಾಸಿಕ ಹೋಳಿ ಉತ್ಸವಕ್ಕೆ ೨೦೨೧ ರಲ್ಲಿ ಬಾಗಲಕೋಟೆ ಮೂಲದವರಾದ ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ೧೦ ಲಕ್ಷ ರೂ. ಬಿಡುಗಡೆ ಮಾಡಿದ್ದರು. ಆರಂಭದಲ್ಲಿ ಕೋವಿಡ್ ಅಡ್ಡಿಯಾಗಿತ್ತು, ನಂತರ ನಾನಾ ಕಾರಣಗಳಿಂದ ಅನುದಾನ ಬಳಕೆ ಮಾಡಿರಲಿಲ್ಲ. ತನ್ಮೂಲಕ ಹೋಳಿ ಹೊಸ ಸ್ವರೂಪದ ಆಶಯಕ್ಕೆ ಭಗ್ನ ಉಂಟಾಗಿದೆ.
ದೇಶದಲ್ಲಿ ಕೊಲ್ಕತ್ತಾ ನಗರ ನಂತರ ಬಾಗಲಕೋಟೆ ನಗರ ಬಣ್ಣದೋಕುಳಿಗೆ ಹೆಚ್ಚು ಖ್ಯಾತಿ ಪಡೆದಿದೆ. ಕೇವಲ ರಂಗೀನಾಟಕ್ಕೆ ಮಾತ್ರ ಹೋಳಿ ಸಿಮೀತವಾಗದೇ ಅಸ್ಪÈಶ್ಯತೆ ವಿರುದ್ಧ ರಣಕಹಳೆ ಮೊಳಗಿಸಿದ್ದ ಹೆಗ್ಗಳಿಕೆ ಪಡೆದಿದೆ. ಇಂತಹ ಐತಿಹಾಸಿಕ ಹೋಳಿಗೆ ಹೊಸ ಸ್ವರೂಪ ನೀಡಲು ಹಾಗೂ ಕೇರಳದ ಓಣಂ, ಮಹರಾಷ್ಟçದ ಗಣೇಶ ಉತ್ಸವ, ಮೈಸೂರು ದಸರಾ ಮಾದರಿಯಲ್ಲಿ ಹೋಳಿಯ ಭವ್ಯ ಸಾಂಸ್ಕೃತಿಕ ಹಿರಿಮೆ, ಗರಿಮೆ ಮತ್ತೊಮ್ಮೆ ಸ್ಥಾಪಿಸುವ ಮಹದಾಸೆ ನಗರದ ಜನತೆ, ಆಚರಣಾ ಸಮಿತಿ ಮುಖಂಡರು, ಬಾಬುದಾರರಲ್ಲಿ ಮನೆ ಮಾಡಿತ್ತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವ ಅವಕಾಶಗಳು ಇದ್ದವು. ಹೋಳಿ ಆಚರಣಾ ಸಮಿತಿ ನಿರ್ಲಕ್ಷ್ಯ ಧೋರಣೆ, ಜನ ಪ್ರತಿನಿಽಗಳ ನಿಸ್ಸಕಾಳಜಿಯಿಂದ ಸಾರ್ವಜನಿಕರ ನಿರೀಕ್ಷೆಗೆ ತಣ್ಣೀರು ಎರಚಿಸಿದಂತಾಗಿದೆ. ಬಾಗಲಕೋಟೆ ಹೋಳಿಗೆ ಸಾಂಸ್ಕೃತಿಕ ಮೆರಗು ನೀಡಬೇಕು ಎನ್ನುವ ಕನಸು ನುಚ್ಚು ನೂರಾಗಿದೆ. ಒಟ್ಟಾರೆ ಬಹು ವರ್ಷಗಳ ನಂತರದ ಪ್ರಯತ್ನಕ್ಕೆ -Àಲ ಸಿಗಲಿಲ್ಲ. ಉತ್ತರ ಕರ್ನಾಟಕ ಅದರಲ್ಲೂ ಮುಳಗಡೆ ನಗರಿ, ಜಿಲ್ಲೆ ಬಗ್ಗೆ ಎಲ್ಲ ಸರ್ಕಾರಗಳು ತಾತ್ಸಾರ ಭಾವನೆ ತಾಳುತ್ತವೆ ಎನ್ನುವುದಕ್ಕೆ ಇದೊಂದು ಜ್ವಲಂತ ಉದಾಹರಣೆ.