

ಸಂತೋಷ ದೇಶಪಾಂಡೆ ಬಾಗಲಕೋಟೆ: ದೇಶದಲ್ಲಿಯೇ ಖ್ಯಾತಿ ಪಡೆದಿರುವ ಬಾಗಲಕೋಟೆ ಹೋಳಿಯಲ್ಲಿ ಕೇವಲ ಸಂಭ್ರಮ, ಸಂತಸಕ್ಕೆ ಸಿಮೀತವಾಗಿಲ್ಲ. ಕಾಮದಹನ, ತುರಾಯಿ ಹಲಗೆ, ನಿಶಾನೆ ಪ್ರತಿಯೊಂದಕ್ಕೂ ಅರ್ಥವಿದೆ. ಅದರಲ್ಲೂ ಐದು ದಿನಗಳ ಕಾಲ ಪ್ರತಿ ದಿನ ರಾತ್ರಿ ಒಂದೊAದು ಪೇಟೆಯಿಂದ ನಡೆಯುವ ಸೋಗಿನ ಮೆರವಣಿ ಸಾಮಾಜಿಕ, ದೇಶ, ದೈವ ಭಕ್ತಿ ಭಾವಗಳ ಸಂದೇಶ ಸಾರುತ್ತವೆ.
ಈಚೆಗಿನ ವರ್ಷಗಳಲ್ಲಿ ನಾನಾ ಕಾರಣಗಳಿಂದ ಕ್ಷಣಿಸಿದ ಸೋಗಿನ ಮೆರವಣಿಗೆ ಈಚೆಗಿನ ದಿನಗಳಲ್ಲಿ ಮತ್ತೆ ವಿಜೃಂಭಣೆಯಿAದ ಜರುಗುತ್ತಿದೆ. ಪ್ರಸಕ್ತ ವರ್ಷದ ಹೋಳಿ ಹಬ್ಬದ ಅಂಗವಾಗಿ ನಡೆಯುತ್ತಿರುವ ಸೋಗಿನ ಮೆರವಣಿಗೆ ಹೋಳಿ ಸೊಬಗು ಹೆಚ್ಚಿಸಿದೆ. ರಾತ್ರಿ ಜನರು ತಂಡೋಪ ತಂಡವಾಗಿ ಆಗಮಿಸಿ ವೀಕ್ಷಣೆ ಮಾಡಿದರು.
ಮೊದಲನೇ ದಿನ ಕಿಲ್ಲಾ ಗಲ್ಲಿಯ ನರೇಂದ್ರ ಯುವಕ ಮಂಡಳಿಯವರು ಚಂದ್ರಶೇಖರ ಆಝಾದ್ ಬಲಿದಾನ, ವಿಕ್ರಮ ಯುವಕ ಮಂಡಳಿಯವರು ಛತ್ರಪತಿ ಶಂಭು ಮಹಾರಾಜ, ಬಂಝೂರಿ ಕಂಡೋಬಾ ಹಾಗೂ ಎರಡನೇ ದಿನ ಹಳಪೇಟೆಯ ಕುಂಬಾರ ಮಡು ತಂಡದವರು ವೀರರಾಣಿ ಕಿತ್ತೂರ ರಾಣಿ ಚನ್ನಮ್ಮನ ಸಂಸ್ಥಾನ ದರ್ಬಾರ್, ಆರ್‌ಎಸ್‌ಎಸ್ ನೂರು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಸಂಘ ಶಕ್ತಿ ಶತಮಾನದ ಸಂಭ್ರಮ, ಮಹಾಕುಂಭ ಮೇಳದ ಅಂಗವಾಗಿ ನಾಗಾಸಾಧುಗಳ ವೇಷದಲ್ಲಿ ಚಿಕ್ಕಮಕ್ಕಳು ಪಾದಯಾತ್ರೆ ಮೂಲಕ ಹೆಜ್ಜೆ ಹಾಕಿದ್ದು ಭಕ್ತಿ ಭಾವದಲ್ಲಿ ತೇಲುವಂತೆ ಮಾಡಿತು, ಗಜಾನನ ಯುವಕ ಮಂಡಳಿಯಿAದ ಬಡ್ಡಿಂಗ್ ವಿಧ್ ಕಂಡಿAಗ್ ಮಹಾಕುಂಭದ ದರ್ಶನ ಆಕರ್ಷಕವಾಗಿತ್ತು.
ಒಟ್ಟಾರೆ ಬಾಗಲಕೋಟೆ ಹೋಳಿ ಹಬ್ಬ ಕೇವಲ ಬಣ್ಣದಾಟಕ್ಕೆ ಸಿಮೀತವಾಗಿಲ್ಲ. ದೇಶಭಕ್ತಿ, ಆಧ್ಯಾತ್ಮ, ಸ್ವಾತಂತ್ರ‍್ಯ ಹೋರಾಟಗಾರ ಕೊಡುಗೆ ಸೇರಿದಂತೆ ಅನೇಕ ಬಗೆಯ ಸೋಗುಗಳು ಐದು ದಿನಗಳ ಕಾಲ ರಾತ್ರಿ ನಡೆಯುತ್ತದೆ. ಬಾಗಲಕೋಟೆ ಹೋಳಿ ಹಬ್ಬದಲ್ಲಿ ಬಣ್ಣದಾಟ ಐದು ದಿನದಿಂದ ಮೂರು ದಿನಕ್ಕೆ ಇಳಿಸಲಾಗಿದೆ.
ಆದರೇ ಐದು ದಿನಗಳ ಕಾಲ ಪ್ರತಿ ರಾತ್ರಿ ಸೋಗಿನ ಮೆರವಣಿಗೆ ಹಳೇ ಪದ್ಧತಿಯಂತೆ ನಡೆಯುತ್ತದೆ. ಬಣ್ಣದಾಟವಾಡುವ ಮುನ್ನಾ ದಿನ ಆಯಾ ಓಣಿಯವರು ರಾತ್ರಿ ಈಡೀ ಸೋಗಿನ ಮೆರವಣಿಗೆ ಮಾಡುತ್ತಾರೆ. ಸಾಮಾಜಿಕ, ದೇಶಭಕ್ತಿ, ಪೌರಾಣಿಕ, ರಾಮಾಯಣ, ಮಹಾಭಾರತದ ಸನ್ನಿವೇಶ ಸೃಷ್ಟಿಸುತ್ತಾರೆ. ಅಲ್ಲದೆ ನಾಡಿನ ಸಾಧಕರು, ಸಂತರ ಪಾತ್ರಗಳನ್ನು ಮಾಡಿ ಅವರ ಕಾರ್ಯ, ಕಾಯಕ ನೆನಪಿಸುವ ಪ್ರಯತ್ನ ಮಾಡಲಾಗುತ್ತದೆ. ಇಂತಹ ಸೋಗಿನ ಮೆರವಣಿಗೆ ಜೊತೆಗೆ ತುರಾಯಿ ಹಲಗೆ, ನಿಶಾನೆ ಜೊತೆಗೆ ಸಾಗುವುದು ವಾಡಿಕೆ. ಮೆರವಣಿಗೆಯೂ ಹಳೇ ಬಾಗಲಕೋಟೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತದೆ. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸಿ ವೀಕ್ಷಣೆ ಮಾಡುತ್ತಾರೆ.