ಹೋಳಿ ಸಾಮರಸ್ಯದ ಪ್ರತೀಕ

bkt-13-3
ಬಾಗಲಕೋಟೆ ನಗರದ ವಲ್ಲಭಾಯಿ ಚೌಕ್‌ನಲ್ಲಿ ಬಾಗಲಕೋಟೆ ಹೋಳಿ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ಹೋಳಿ ಉತ್ಸವಕ್ಕೆ ಉದ್ಯಮಿ ಸಂತೋಷ ಹೊಕ್ರಾಣಿ ಹಲಗೆ ಬಾರಿಸುವ ಮೂಲಕ ಚಾಲನೆ ನೀಡಿದರು.
Published on

ಬಾಗಲಕೋಟೆ: ಕರ್ನಾಟಕ, ದೇಶದ ಸಾಂಸ್ಕೃತಿಕ ಲೋಕಕ್ಕೆ ಬಾಗಲಕೋಟೆ ಹೋಳಿ ಬಹು ದೊಡ್ಡ ಕೊಡುಗೆ ನೀಡಿದೆ. ಇಂತಹ ಹೋಳಿ ಅಳಿಸಿ ಹೋಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಹೋಳಿ ಹಬ್ಬವು ಸಾಮರಸ್ಯದ ಪ್ರತೀಕ ಎಂದು ಉದ್ಯಮಿ ಸಂತೋಷ ಹೊಕ್ರಾಣಿ ಹೇಳಿದರು.

ನಗರದ ವಲ್ಲಭಾಯಿ ಚೌಕನಲ್ಲಿ ಬುಧವಾರ ರಾತ್ರಿ ಬಾಗಲಕೋಟೆ ಹೋಳಿ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ಹೋಳಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಖ್ಯಾತಿ ಪಡೆದಿರುವ ಬಾಗಲಕೋಟೆ ಹೋಳಿ ಹಬ್ಬ ಇಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆ ಸಾರುತ್ತದೆ. ಹಬ್ಬದ ಮೂಲಕ ಪರಸ್ಪರ ಪ್ರೀತಿ, ಬಾಂಧವ್ಯ ಬೆಳೆಯುತ್ತದೆ. ಇತ್ತೀಚೆಗೆ ಹಬ್ಬ ಆಧುನಿಕತೆಗೆ ತೆರೆದುಕೊಂಡಿದ್ದು, ರೇನ್ ಡ್ಯಾನ್ಸ್ ಆಕರ್ಷಣೆಯಿಂದ ಯುವಜನತೆ ಹಬ್ಬದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿz್ದÁರೆ. ಮುಂದಿನ ಪೀಳಿಗೆಗೂ ಹಬ್ಬದ ಸಂಪ್ರದಾಯ ವರ್ಗಾವಣೆಯಾಗಲಿ ಎಂದು ತಿಳಿಸಿದರು.

ಪತ್ರಕರ್ತ ರವಿರಾಜ ಗಲಗಲಿ ಮಾತನಾಡಿ, ಬಾಗಲಕೋಟೆ ಹೋಳಿ ಹಲವು ವೈಶಿಷ್ಠತೆ ಹೊಂದಿದೆ. ನೂರಾರು ವರ್ಷಗಳಿಂದ ನಡೆದುಕೊಂಡು ಬಂದ ಪದ್ಧತಿ ಇಂದಿಗೂ ಮುಂದುವರೆದಿದೆ. ಇಲ್ಲಿನ ಹಲಗೆ ಸದ್ದು, ಬಣ್ಣದ ರಂಗು ದೆಹಲಿಯಲ್ಲಿ ಮೊಳಗಿದೆ. ಮುಳಗಡೆಯಾದ ಬಳಿಕ ಕ್ಷಿಣಿಸಿರುವ ಹಬ್ಬದ ಸೊಬಗು ಹೊಸ ನಗರದಲ್ಲಿ ವಿಜೃಂಭಣೆಯಿAದ ಆಚರಿಸುವಂತಾಗಬೇಕು ಎಂದು ಆಶಿಸಿದರು.

ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆಣ್ಣವರ, ಬಸವೇಶ್ವರ ಬ್ಯಾಂಕ್ ನಿರ್ದೇಶಕ ಶರಣು ಹೆರಕಲ್, ಬಾಬುದಾರರಾದ ಎನ್.ಆರ್.ಕುಲಕರ್ಣಿ, ಪ್ರವೀಣ ಖಾತೇದಾರ, ಹೋಳಿ ಆಚರಣೆ ಸಮಿತಿ ಅಧ್ಯಕ್ಷ ಕಳಕಪ್ಪ ಬಾದೋಡಗಿ, ಪ್ರಧಾನ ಕಾರ್ಯದರ್ಶಿ ಮಹಾಬಳೇಶ್ವರ ಗುಡಗುಂಟಿ, ಸಂಘಟನಾ ಕಾರ್ಯದರ್ಶಿ ಸಂಜೀವ ವಾಡಕರ, ರವಿ ಕುಮಟಗಿ ಸದಾನಂದ ನಾರಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net