

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನಾ ಸಂತ್ರಸ್ತರ ಬಾಽತ ಹೋರಾಟವು ದಿನೇ ದಿನೇ ಕಾವು ಪಡೆದುಕೊಳ್ಳುತ್ತಿದ್ದು, ವಿವಿಧ ಸಂಘಟನೆ, ಸಂಘ, ಸಂಸ್ಥೆಗಳು, ವಿದ್ಯಾರ್ಥಿಗಳು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಅನ್ನದಾತರು ಭಾನುವಾರ ಎತ್ತಿನ ಬಂಡಿಯೊAದಿಗೆ ಆಗಮಿಸಿದರೇ, ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಧಾವಿಸಿ ಧ್ವನಿಗೂಡಿಸಿದರು.
ಇಲ್ಲಿನ ಜಿಲ್ಲಾಽಕಾರಿ ಕಚೇರಿ ಎದುರು ಕೃಷ್ಣಾ ಸಂತ್ರಸ್ತರ ಅಹೋರಾತ್ರಿ ಹೋರಾಟಕ್ಕೆ ಭಾನುವಾರ ಬಾಗಲಕೋಟೆ ವ್ಯಾಪಾರಸ್ಥರು ಯೂನಿಯನ್ ಆ-ï ಬಾಗಲಕೋಟೆ ಮರ್ಚಂಟ್ಸ್ ಅಸೋಸಿಯೇಷನ್ಸ್ ನೇತೃತ್ವದಲ್ಲಿ ಎಪಿಎಂಸಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಯುಕೆಪಿ ವಿಷಯದಲ್ಲಿ ತಾರತಮ್ಯ ಸಹಿಸಲು ಸಾಧ್ಯವಿಲ್ಲ ಅಂತ ಗುಡುಗಿದರು.
ನಂತರ ಶಾಂತಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ನವನಗರದ ತಹಸೀಲ್ದಾರ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಹೋರಾಟ ಭಾಗವಹಿಸಿದರು. ಅನೇಕ ವಿದ್ಯಾರ್ಥಿಗಳು ಮಾತನಾಡಿ ನಾವು ಸಂತ್ರಸ್ತರು, ರೈತರು ಮಕ್ಕಳು ಇದ್ದೇವೆ. ನಮ್ಮ ಭಾಗದ ಯೋಜನೆಗಳ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯ ವಹಿಸುವುದು ತರವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ಉತ್ತರ ಕರ್ನಾಟಕದ ನೀರಾವರಿ ಬಗ್ಗೆ ಚರ್ಚೆಯಾಗಬೇಕೆಂದು ಸಭಾಪತಿಗಳಿಗೆ ಮನವಿ ಮಾಡಿದ್ದೇನೆ. ಡಿ.೧೧ ರಂದು ಸಭೆ ಕರೆದಿದ್ದಾರೆ. ಸಭೆ ವಿಜಯಪುರ ಹಾಗೂ ಬಾಗಲಕೋಟೆ ಶಾಸಕರುಗಳು ಹಾಗೂ ವಿಪ ಸದಸ್ಯರುಗಳಿಗೆ ಮಾತ್ರ ಅವಕಾಶವಿದೆ. ಆದರೆ, ಸರ್ಕಾರ ೭ ಜಿಲ್ಲೆಯ ಶಾಸಕರ ಸಭೆ ಕರೆಯಬೇಕಿತ್ತು. ಏನೇ ಇರಲಿ ಸರ್ಕಾರ ಇನ್ನಾದರೂ ಯುಕೆಪಿ ಪೂರ್ಣಗೊಳಿಸುವ ಬಗ್ಗೆ ಕಾಲಹರಣ ಮಾಡುವುದನ್ನು ಬಿಟ್ಟು ಶೀಘ್ರವಾಗಿ ಯೋಜನೆ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ನಾಯಕ ಸಂತೋಷ ಹೊಕ್ರಾಣಿ ಮಾತನಾಡಿ, ಉತ್ತರ ಕರ್ನಾಟಕದವರಿಗೆ ಮಲತಾಯಿ ಧೋರಣೆ ಮುಂದುವರೆದಿದೆ. ಉತ್ತರ ಕರ್ನಾಟಕದ ಹೋರಾಟಕ್ಕೆ ಯಾವುದೇ ರೀತಿಯ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ನಮ್ಮ ಭಾಗದ ಎಲ್ಲ ಶಾಸಕರು ಸದನದಲ್ಲಿ ಇದರ ಬಗ್ಗೆ ಮಾತನಾಡಬೇಕು. ಇಡೀ ಏಷ್ಯಾದಲ್ಲಿ ಹೆಚ್ಚು ಮುಳಗಡೆಯಾದ ನಗರ ಎಂದರೆ ಬಾಗಲಕೋಟೆ. ಬಿಟಿಡಿಎಯಲ್ಲಿದ್ದ ಕಾರ್ಪಸ್ ಫಂಡ್‌ನ್ನು ಸರ್ಕಾರ ತೆಗೆದುಕೊಂಡಿದ್ದು ಅದನ್ನು ವಾಪಸ್ ನೀಡಬೇಕು ಎಂದು ಆಗ್ರಹಿಸಿದರು.
ಶಾಸಕ ಜೆ.ಟಿ.ಪಾಟೀಲ, ವಿಪ ಮಾಜಿ ಸದಸ್ಯ ಪಿ.ಎಂ.ನಾಡಗೌಡ, ಸಮಿತಿಯ ಅಧ್ಯಕ್ಷ ಅದೃಶ್ಯಪ್ಪ ದೇಸಾಯಿ, ಯೂನಿಯನ್ ಆ-ï ಯೂನಿಯನ್ ಆ-ï ಬಾಗಲಕೋಟೆ ಮರ್ಚಂಟ್ಸ್ ಅಸೋಸಿಯೇಷನ್ಸ್ ಅಧ್ಯಕ್ಷ ರವಿ ಕುಮಟಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮುಖಂಡರಾದ ಪ್ರಕಾಶ ಅಂತರಗೊAಡ, ಅಶೋಕ ಲಾಗಲೋಟಿ, ಸಿಂಗ್ ಗೋಡಿ, ನಿಂಗಪ್ಪ ಚೌವ್ಹಾಣ ಸೇರಿದಂತೆ ಇತರರಿದ್ದರು.