ಹೋಂ ಗಾರ್ಡ್ಸ್ ಸೇವೆಗೆ ಜನರ ಶ್ಲಾಘನೆ

4sdp4
Published on

ಸಿದ್ದಾಪುರ: ಕರೊನಾ ಲಾಕ್​ಡೌನ್ ಸಂದರ್ಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸಿದಂತೆ ಹೋಂ ಗಾರ್ಡ್​ಗಳು ಸಹ ಹಗಲಿರುಳು ಶ್ರಮ ವಹಿಸುತ್ತಿದ್ದಾರೆ. ಕರ್ತವ್ಯಕ್ಕೆ ಎಲ್ಲಿಯೇ ನಿಯೋಜನೆ ಮಾಡಿದರೂ ಅಲ್ಲಿಗೆ ತೆರಳಿ ಕಾರ್ಯನಿರ್ವಹಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಸಾರ್ವಜನಿಕ ಕಾರ್ಯಕ್ರಮ, ಸಚಿವರ ಆಗಮನ ಸಂದರ್ಭದಲ್ಲಿ ಸೂಕ್ತ ಬಂದೋಬಸ್ತ್ ನೀಡುವುದಕ್ಕಾಗಿ ಹೋಂ ಗಾರ್ಡ್​ಗಳನ್ನು ನೇಮಕ ಮಾಡುವ ರೀತಿಯಲ್ಲಿಯೇ ಕರೊನಾ ಲಾಕ್​ಡೌನ್ ಸಂದರ್ಭದಲ್ಲಿಯೂ ನೇಮಕ ಮಾಡಲಾಗಿದೆ.

ತಾಲೂಕಿನಲ್ಲಿ 1984-85ನೇ ಇಸವಿಯಿಂದಲೂ ಕಾರ್ಯನಿರ್ವಹಿಸುತ್ತಿರುವ ಹೋಂ ಗಾರ್ಡ್​ಗಳಿದ್ದಾರೆ. ಅವರೆಲ್ಲ ಸಂಬಳಕ್ಕೆ ಹೆಚ್ಚು ಮಹತ್ವ ನೀಡದೇ ತಾವು ನಿರ್ವಹಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಹೆಚ್ಚುವರಿಯಾಗಿ 10 ಜನ ಹೋಂ ಗಾರ್ಡ್​ಗಳನ್ನು ಜಿಲ್ಲಾಡಳಿತ ನೇಮಕ ಮಾಡಿದೆ.

ಲಾಕ್​ಡೌನ್ ಸಂದರ್ಭ ದಲ್ಲಿ ಹೋಂ ಗಾರ್ಡ್​ಗಳು ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಓಡಾಡಿ ಕರೊನಾ ಕುರಿತು ಜನರಲ್ಲಿ ಜಾಗೃತಿ ಮೂಡಿಸಿರುವುದು ಶ್ಲಾಘನೀಯ.| ಗಣಪತಿ ನಾಯ್ಕ ವಾಹನ ಚಾಲಕ ಸಿದ್ದಾಪುರ

ಸಿದ್ದಾಪುರದಲ್ಲಿ ಹೋಂ ಗಾರ್ಡ್​ಗಳು ಪೊಲೀಸ್ ಸಿಬ್ಬಂದಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಊಟ, ನಿದ್ರೆ ಇಲ್ಲ. ಲಾಕ್​ಡೌನ್ ಆದಾಗಿನಿಂದಲೂ ಮತ್ತಷ್ಟು ಜವಾಬ್ದಾರಿ ಅವರಿಗೆ ವಹಿಸಿದ್ದೇವೆ. ಜನರು ಮೆಚ್ಚುವಂತೆ ಅವರು ಕಾರ್ಯನಿರ್ವಹಿಸಿದ್ದಾರೆ.| ಪ್ರಕಾಶ ಸಿಪಿಐ ಸಿದ್ದಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net