ಹೊಸ ಮಾರುಕಟ್ಟೆ ಸ್ಥಾಪನೆ ಪರಿಶೀಲನೆ ಸೂಚನೆ

bkt-29-3
Published on

ಬಾಗಲಕೋಟೆ: ಮುಳಗಡೆಯಾಗಿರುವ ಬಾಗಲಕೋಟೆ ನಗರಕ್ಕೆ ನವನಗರ ಯೂನಿಟ್-೩ ಭಾಗದಲ್ಲಿ ವಾಣಿಜ್ಯೋದ್ಯಮ ಚಟುವಟಿಕೆ ಕೈಗೊಳ್ಳಲು ಸೂಕ್ತವಾದ ಸ್ಥಳ ಗುರುತಿಸಲು ಬಿಟಿಡಿಎ ಅಧ್ಯಕ್ಷ, ಶಾಸಕ ಎಚ್.ವೈ.ಮೇಟಿ ಸೂಚನೆ ನೀಡಿದರು.

ನಗರದ ಬಿಟಿಡಿಎ ಸಭಾಭವನದಲ್ಲಿ ಮಂಗಳವಾರ ಅಽಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಈಗಾಗಲೇ ಯೂನಿರ್ಟ-೩ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಬಾಗಲಕೋಟೆ ನಗರದ ವ್ಯಾಪಾರಸ್ಥರು ಮಾರುಕಟ್ಟೆ, ವಾಣಿಜ್ಯ ಚಟುವಟಿಕೆಗಳಿಗೆ ೨೦೦ ಎಕರೇ ಮೀಸಲಿಡುವಂತೆ ಮನವಿ ಮಾಡಿದ್ದಾರೆ. ಅದರಂತೆ ರೋಟರಿ ವೃತ್ತದ ಸಮೀಪ ಭೂಮಿ ಅವಕಾಶವಿದ್ದು, ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಬಿಟಿಡಿಎ ಮುಖ್ಯ ಇಂಜನಿಯರ್ ಡಿ.ಬಸವರಾಜ, ಅಽಕಾರಿಗಳಾದ ವಿಜಯಕುಮಾರ ಹೆಬ್ಬಳ್ಳಿ, ಮುಖಂಡರಾದ ಹೊಳಬಸ್ಸು ಶೆಟ್ಟರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net