ಹೊಸ ಆಶಾ ಕಿರಣ ಮೂಡಿದೆ

bkt-30-1
ಬಾಗಲಕೋಟೆಯ ಮತಕ್ಷೇತ್ರದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಸೋಮವಾರ ಮಾಜಿ ಸಚಿವ ಎಚ್.ವೈ.ಮೇಟಿ ಧ್ವಜಾರೋಹಣ ನೆರವೇರಿಸಿದರು.
Published on

ಬಾಗಲಕೋಟೆ: ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಪಾದಯಾತ್ರೆ ಕಾಶ್ಮೀರದ ಶ್ರೀನಗರದಲ್ಲಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಗರದ ಬಾಗಲಕೋಟೆಯ ಮತಕ್ಷೇತ್ರದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಸೋಮವಾರ ಮಾಜಿ ಸಚಿವ ಎಚ್.ವೈ.ಮೇಟಿ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ನಾಗರಾಜ ಹದ್ಲಿ ಮಾತನಾಡಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮುಂಚೂಣಿ ನಾಯಕತ್ವ ವಹಿಸಿ, ಅಹಿಂಸೆ, ಸತ್ಯಾಗ್ರಹದ ಮೂಲಕ ಸ್ವಾತಂತ್ರ‍್ಯ ತಂದುಕೊಟ್ಟವರು ಮಹಾತ್ಮ ಗಾಂಧೀಜಿ. ತಮ್ಮ ತತ್ವ, ಸಿದ್ಧಾಂತಗಳನ್ನು ಅಕ್ಷರಶಃ ಬದುಕಿ, ನನ್ನ ಜೀವನವೇ ನನ್ನ ಸಂದೇಶ ಎಂದು ಸಾರಿದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಪುಣ್ಯ ಸ್ಮರಣೆ ದಿನದಂತೆ ಐಕ್ಯತಾ ಯಾತ್ರೆ ಸಮಾರೋಪಗೊಳ್ಳುತ್ತಿದೆ. ಭಾರತೀಯರ ಮನಸ್ಸು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ ರಾಹುಲ್ ಗಾಂಽ ಎಂದು ಹೇಳಿದರು.
ಮಹಾತ್ಮ ಗಾಂಧೀಜಿಯವರ ತತ್ವ ಸಿದ್ದಾಂತ ಜೊತೆ ಭಾರತದ ಒಡೆದ ಮನಸ್ಸುಗಳನ್ನು ಬೆಸೆಯುವ ಉದ್ದೇಶದಿಂದ ಕೈಗೊಂಡ ಭಾರತ ಜೋಡೋ ಯಾತ್ರೆಯು ಯಶಸ್ವಿಯಾಗಿದೆ . ದಕ್ಷಿಣದ ಕನ್ಯಾಕುಮಾರಿಯಿಂದ ಪ್ರಾರಂಭಿಸಿ ನಿರಂತರ ೧೫೦ ದಿನಗಳಿಂದ ನಡೆಯುತ್ತಿರುವ ಯಾತ್ರೆಯು ಅಂದಾಜು ೪ ಸಾವಿರ ಕಿ.ಮೀ ಕ್ರಮಿಸಿ ದೇಶದ ೧೨ ರಾಜ್ಯಗಳ ೭೬ ಜಿಲ್ಲೆಯ ಮೂಲಕ ಸಾಗಿ ಕಾಶ್ಮೀರದ ಶ್ರೀನಗರದಲ್ಲಿ ಮುಕ್ತಾಯ ಗೂಂಡಿದೆ. ಅವರ ಈ ಪ್ರಯತ್ನದಿಂದ ದೇಶದ ಜನತೆಯ ಒಂದು ಹೊಸ ಆಶಾಕಿರಣ ಮೂಡಿದೆ. ಕಾಂಗ್ರೆಸ ಪಕ್ಷಕ್ಕೆ ನವ ಚೈತನ್ಯ ಬಂದಿದೆ ಎಂದರು.
ಈ ಸಂದರ್ಭದಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ, ಕೆಪಿಸಿಸಿ ಸಂಯೋಜಕ ಮಂಜುನಾಥ ವಾಸನದ, ಗ್ರಾಮೀಣ ಬ್ಲಾಕ ಅಧ್ಯಕ್ಷ ಎಸ್.ಎನ್.ರಾಂಪೂರ, ಮುಖಂಡರಾದ ರೇಣುಕಾ ನ್ಯಾಮಗೌಡ, ಮಂಜುಳಾ ಭೂಸಾರೆ, ಅನ್ನಪೂರ್ಣ ಗೂಗ್ಯಾಳ, ರೇಣುಕಾ ನಾರಾಯಣಕರ, ಮುಮತಾಜ ಸುತಾರ, ಜೈಬುನಿ ಇಳಕಲ್ಲ ಜಯಶ್ರೀ ಗುಳಬಾಳ, ಕಲಾವತಿ ಕಮತ, ಜಮೆಲಾ ಮನಿಯಾರ, ಗಂಗೂಬಾಯಿ ಚವಾಣ, ಕಸ್ತೂರಿ ಲಮಾಣಿ, ಸಂಶಾದ ಗೋಡೆಸವಾರ, ಸಾವಿತ್ರಿ ಗೋಲಪ್ಪನವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net