ಹೊಸ ಅನುಭವ ನೀಡಿದ ಸ್ಕೂಬಾ ಡೈವಿಂಗ್

17bkl1 (2)
Published on

ಭಟ್ಕಳ: ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ ಮತ್ತು ಕುಟುಂಬ ಸದಸ್ಯರು ಭಟ್ಕಳದ ಮುರ್ಡೆಶ್ವರದಲ್ಲಿ ಸೂರ್ಯ ನೇತ್ರಾಣಿ ನಡುಗಡ್ಡೆ ಪರಿಸರದಲ್ಲಿ ಶುಕ್ರವಾರ ಬೆಳಗ್ಗೆ ಸ್ಕೂಬಾ ಡೈವಿಂಗ್ ನಡೆಸಿದರು. ಪತ್ನಿ ಹಾಗೂ ಮಕ್ಕಳೊಂದಿಗೆ ಮುರ್ಡೆಶ್ವರಕ್ಕೆ ಆಗಮಿಸಿದ್ದ ಅವರು ಮೊದಲು ದೇವರ ದರ್ಶನ ಪಡೆದರು. ನಂತರ ನೇತ್ರಾಣಿ ಅಡ್ವೆಂಚರ್ಸ್ ನೆರವು ಪಡೆದು ಯಾಂತ್ರೀಕೃತ ದೋಣಿಯ ಮೂಲಕ ನೇತ್ರಾಣಿ ಗುಡ್ಡ ತಲುಪಿದರು. ಅಲ್ಲಿ 40 ನಿಮಿಷ ಸ್ಕೂಬಾ ಡೈವಿಂಗ್ ನಡೆಸಿ ಸಂತಸಪಟ್ಟರು. ‘ಸ್ಕೂಬಾ ಡೈವಿಂಗ್ ಹೊಸ ಅನುಭವ ನೀಡುವುದಲ್ಲದೆ, ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ. ನೇತ್ರಾಣಿ ದ್ವೀಪ ಹೆಚ್ಚಿನ ರೋಮಾಂಚನ ನೀಡುತ್ತದೆ. ನೇತ್ರಾಣಿ ನನಗೆ ಅಚ್ಚುಮೆಚ್ಚಿನ ಪ್ರವಾಸಿ ತಾಣವಾಗಿದೆ’ ಎಂದು ಸಂಜೀವ ಕುಮಾರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net