ಹೈಟೆಕ್ ಆಗಲಿವೆ ನಾಲ್ಕು ರೈಲು ನಿಲ್ದಾಣ

rail
Published on

ಕಲಬುರಗಿ: ಕಲಬುರಗಿ, ಶಹಾಬಾದ್, ವಾಡಿ ಮತ್ತು ಗಾಣಗಾಪುರ ರೋಡ್ ಸೇರಿ ದೇಶದ ೫೦೮ ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸ ನೆರವೇರಿಸಿದರು. ಇದರೊಂದಿಗೆ ಈ ಮೂರು ಸ್ಟೇಷನ್‌ಗಳಿಗೆ ಹೈಟೆಕ್ ಸ್ಪರ್ಶ ಸಿಗಲಿದೆ.
ರೈಲ್ವೆ ಮಂತ್ರಾಲಯ ಮತ್ತು ರೈಲ್ವೆ ಮಂಡಳಿ ರೂಪಿಸಿರುವ ಅಮೃತ ಭಾರತ್ ನಿಲ್ದಾಣ ಯೋಜನೆಯಡಿ ಕಲಬುರಗಿ (ಜಂಕ್ಷನ್), ಶಹಾಬಾದ್, ವಾಡಿ (ಜಂಕ್ಷನ್), ಬೀದರ್ ಸೇರಿ ರಾಜ್ಯದ ೧೩ ಸ್ಟೇಷನ್‌ಗಳಿಗೆ ಮರು ವಿಕಾಸ ಭಾಗ್ಯ ಲಭಿಸಿದೆ. ವರ್ಚುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರೆ, ಕಲಬುರಗಿ ನಿಲ್ದಾಣದಲ್ಲಿ ಭೌತಿಕವಾಗಿ ಸಂಸದ ಡಾ.ಉಮೇಶ ಜಾಧವ್ ಅವರು ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ. ಪಾಟೀಲ್, ಶಶೀಲ್ ನಮೋಶಿ ಹಾಗೂ ಅಧಿಕಾರಿಗಳ ಜತೆ ಅಡಿಗಲ್ಲು ನೆರವೇರಿಸಿದರು. ಈ ನಾಲ್ಕು ನಿಲ್ದಾಣಗಳನ್ನು ೧೦೦ ಕೋಟಿ ರೂ. ವೆಚ್ಚದಲ್ಲಿ ಮರು ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಹೇಳಿದರು.
ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ. ಪಾಟೀಲ್, ಶಶೀಲ್ ನಮೋಶಿ, ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಪ್ರಯಾಣಿಕರಿಗೆ ಅನುಕೂಲವಾಗುವಂತಹ ಕೆಲಸ ಮಾಡುತ್ತಿರುವುದನ್ನು ಶ್ಲಾಘಿಸಿದರು.
ಶಾಸಕ ಡಾ.ಅವಿನಾಶ ಜಾಧವ್, ಮೇಯರ್ ವಿಶಾಲ್ ದರ್ಗಿ, ಸ್ಟೇಷನ್ ಮಾಸ್ಟರ್ ಪಿ.ಎ. ನರಗುಂದಕರ್, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರz್ಗ, ಮಹಾನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಪ್ರಮುಖರಾದ ಶಂಭು ಪಾಟೀಲ್ ಬಳಬಟ್ಟಿ, ದಯಾಘನ್ ಧಾರವಾಡಕರ್, ಪ್ರಹ್ಲಾದಭಟ್ ಪೂಜಾರಿ, ಸುನೀಲ್ ಕುಲಕರ್ಣಿ, ಶಿವಯೋಗಿ ನಾಗನಹಳ್ಳಿ, ರಾಣೋಜಿ ದೊಡ್ಡಮನಿ, ನರಸಿಂಹ ಮೆಂಡನ್, ರಾಜುಗೌಡ ನಾಗನಹಳ್ಳಿ ಇತರರಿದ್ದರು.
ತಾರ್‌ಫೈಲ್ ಸರ್ಕಾರಿ ಪ್ರೌಢಶಾಲೆ, ಶ್ಲೋಕ ಬಿರ್ಲಾ ಶಾಲೆ, ಮಿಲೇನಿಯಂ ಶಾಲೆ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಅತ್ಯುತ್ತಮ ಪ್ರದರ್ಶನ ನೀಡಿದ ಮಕ್ಕಳಿಗೆ ಸಂಸದರು ಹಾಗೂ ಅತಿಥಿಗಳು ಬಹುಮಾನ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net