ಹೇರ ಡ್ರೈಯರ್ ನಲ್ಲಿತ್ತು ಮರ್ಡರ್ ಸ್ಕೇಚ್..!?

55fa5304-f8ac-4607-9d35-e276b8e0ca40
Published on

ಬಾಗಲಕೋಟೆ: ಚೈನಾ ಮೇಡ್ ಎಂದಿದ್ದ ಹೇರ್ ಡ್ರೈಯರ್  ಬ್ಲಾಸ್ಟ್ ಆಗಿ ಮಹಿಳೆಯೊಬ್ಬರ ಎರಡು ಕೈಗಳ ಹಸ್ತ ಹಾಗೂ ೮ ಬೆರಳು ಛಿದ್ರವಾಗಿದ್ದ ಇಳಕಲ್ಲ ಘಟನೆಯ ಹಿಂದಿನ ಶಡ್ಯಂತ್ರವನ್ನು ಬೇಽಸುವಲ್ಲಿ ಇಳಕಲ್ಲ ಪೊಲೀಸರು ಯಶಸ್ವಿಯಾಗಿದ್ದು, ಘಟನೆಯ ಮಹಿಳೆಯೊಬ್ಬರನ್ನು ಚಾಣಕ್ಷತನದಿಂದ ಕೊಲೆ ಮಾಡುವ ದುರುದ್ಧೇಶ ಇರುವುದು ಇದೀಗ ಬೆಳಕಿಗೆ ಬಂದಿದೆ.

ಹೇರ್ ಡ್ರೈಯರ್  ಬ್ಲಾಸ್ಟ್ ಆಗಿ ಕೈ ಬೆರಳುಗಳನ್ನು ಕಳೆದುಕೊಂಡಿರುವ ಬಸವರಾಜೇಶ್ವರಿ ಯರನಾಳ ಅವರ ಗೆಳತಿ ಶಶಿಕಲಾ ಹಡಪದ ಅವರನ್ನು ಗುರಿಯಾಗಿಸಿ ಈ ಬ್ಲಾಸ್ಟ್ ನಡೆಸುವ ಸಂಚನ್ನು ಆರೋಪಿ ಸಿದ್ದಪ್ಪ ಅಲಿಯಾಸ್ ಶರಣಪ್ಪ ಶೀಲವಂತ ರೂಪಿಸಿದ್ದ. ಆದರೆ, ದುರಾದೃಷ್ಟವಶಾತ್ ಆವತ್ತು ಪಾರ್ಸಲ್ ಬಂದಿದ್ದಾಗ ಶಶಿಕಲಾ ಊರಲ್ಲಿ ಇಲ್ಲದ್ದರಿಂದ ಆರೋಪಿಯ ಪ್ರಿಯತಮೆ, ಪಕ್ಕದ ಮನೆಯ ಬಸವರಾಜೇಶ್ವರಿ ಪಾರ್ಸಲ್ ಪಡೆದು ಅದನ್ನು ಚೆಕ್ ಮಾಡಲು ಹೋಗಿ ಹೇರ್ ಡ್ರೈಯರ್ ಬ್ಲಾಸ್ಟ್ ಆಗಿ ಎರಡು ಕೈ ಬೆರಳುಗಳನ್ನು ಕಳೆದುಕೊಂಡಿದ್ದಾರೆ.

ಪ್ರಕರಣದ ಬೆಳಕಿಗೆ ಬಂದ ಮೇಲೆ ಶಶಿಕಲಾ ಅವರು ತಾವು ಆನ್ ಲೈನ್ ನಲ್ಲಿ ಯಾವುದೇ ಹೇರ್ ಡ್ರೈಯರ್ ಆರ್ಡರ್ ಮಾಡಿಯೇ ಇರಲಿಲ್ಲ ಎಂದು ಹೇಳಿದ್ದರಿಂದ ಪೊಲೀಸರಿಗೆ ಅನುಮಾನ ಬಂದಿತ್ತು. ಅದೇ ಹಿನ್ನಲೆಯಲ್ಲಿ ಪ್ರಕರಣ ಬೆನ್ನತ್ತಿದಾಗ ಹಿಂದಿನ ಶಡ್ಯಂತ್ರ ಬಯಲಿಗೆ ಬಂದಿದೆ. ಇದೀಗ ಆರೋಪಿ ಸಿದ್ದಪ್ಪ ಶೀಲವಂತ ಅವರನ್ನು ಇಳಕಲ್ಲ ಪೊಲೀಸರು ಬಂಽಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾಗಿ ಶುಕ್ರವಾರ ಸಂಜೆ ಬಾಗಲಕೋಟೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಅಮರನಾಥ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇಳಕಲ್ಲ ನಗರದ ನಿವಾಸಿ ಶಶಿಕಲಾ ಹಡಪದ ವಿಳಾಸಕ್ಕೆ ನ. ೧೫ ರಂದು ಬಾಗಲಕೋಟೆ ಡಿಟಿಡಿಸಿ ಕೋರಿಯರ್ ನಿಂದ ಹೇರ್ ಡ್ರೈಯರ್  ಪಾರ್ಸಲ್ ಬಂದಿತ್ತು. ಇಳಕಲ್ಲ ನಗರದ ಡಿಟಿಡಿಸಿ ಆಫೀಸ್ ನಿಂದ ಶಶಿಕಲಾ ಅವರಿಗೆ ಪಾರ್ಸಲ್ ಬಂದಿದ್ದರ ಬಗ್ಗೆ ಫೋನ ಮಾಡಿ ತಿಳಿಸಿದ್ದರು. ಆದರೆ, ಅಂದು ಶಶಿಕಲಾ ಊರಲ್ಲಿ ಇಲ್ಲದ್ದರಿಂದ ಪಕ್ಕದ ಮನೆಯ ಬಸವರಾಜೇಶ್ವರಿ ಯರನಾಳ ಅವರಿಗೆ -ಫೋನ ಮಾಡಿ ಪಾರ್ಸಲ್ ಪಡೆಯುವಂತೆ ತಿಳಿಸಿದ್ದರು. ಅದರಂತೆ ಅವರು ಪಾರ್ಸಲ್ ಪಡೆದುಕೊಂಡು ಮರುದಿನ ನ. ೧೬ ರಂದು ಏನಿದೆ ಎಂದು ತೆರೆದು ನೋಡಿದಾಗ ಹೇರ್ ಡ್ರೈಯರ್ ಇತ್ತು. ಅದನ್ನು ಚೆಕ್ ಮಾಡಲೆಂದು ಪ್ಲಗ್ ಹಾಕಿ ಸ್ವಿಚ್ ಆನ್ ಮಾಡುತ್ತಿದ್ದಂತೆ ಹೇರ್ ಡ್ರೈಯರ್  ಬ್ಲಾಸ್ಟ್ ಆಗಿ ಬಸವರಾಜೇಶ್ವರಿಯ ಎರಡು ಕೈಗಳ ಬಹುತೇಕ ಹಸ್ತ ಹಾಗೂ ಎಂಟು ಬೆರಳುಗಳು ಕಟ್ ಆಗಿದ್ದವು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಜೊತೆಗೆ ಹೇರ್ ಡ್ರೈಯರ್ ಯರ್ ಚೈನಾ ಮೇಡ್‌ನ ಕಿಮೆಯ್ ಕಂಪನಿಯ ವಸ್ತು ಎಂದು ತಿಳಿದು ಕಿಮೆಯ್ ಕಂಪನಿ ವಿರುದ್ಧವೂ ಇಳಕಲ್ಲ ಶಹರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಜೊತೆಗೆ ಬ್ಲಾಸ್ಟ್ ಆದ ಬಳಿಕ ಶಶಿಕಲಾ ಅವರು ತಾವು ಹೇರ್ ಡ್ರೈಯರ್ ಆರ್ಡರ್ ಮಾಡಿರಲಿಲ್ಲ, ಅದಕ್ಕಾಗಿ ಹಣವನ್ನು ಭರಿಸಿಲ್ಲ ಎಂದು ಹೇಳಿಕೆ ನೀಡಿದ್ದರಿಂದ ಘಟನೆ ಬಗ್ಗೆ ಪೊಲೀಸರು ಅನುಮಾನ ಶುರುವಾಗಿ ತನಿಖೆ ಚುರುಕುಗೊಳಿಸಿದ್ದರು.

ಮರ್ಡರ್ ಸ್ಕೆಚ್‌ನ ಹಿಂದಿತ್ತು ಲವ್ ಕಹಾನಿ :

ಬಸವರಾಜೇಶ್ವರಿ ಯರನಾಳ ಮೂಲತಃ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಪುರ್ತಗೇರಿ ಗ್ರಾಮದವರು. ಅದೇ ಗ್ರಾಮದ ಸಿದ್ದಪ್ಪ ಶೀಲವಂತ ಪರಿಚಿತ. ಬಸವರಾಜೇಶ್ವರಿ ಅವರು ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಮದ ಯೋಧನ ಜೊತೆ ಮದುವೆ ಆಗಿದ್ದರು. ೨೦೧೭ರಲ್ಲಿ ಯೋಧ ಪಾಪಣ್ಣ ಕರ್ತವ್ಯದಲ್ಲಿ ಇದ್ದಾಗ ಮೃತಪಟ್ಟಿದ್ದರು. ಆ ನಂತರದ ದಿನಗಳಲ್ಲಿ ಸಿದ್ದಪ್ಪ ಶೀಲವಂತ ಬಸವರಾಜೇಶ್ವರಿ ಜೊತೆ ಸಂಬಂಧ ಇಟ್ಟುಕೊಂಡಿದ್ದ. ಬಸವರಾಜೇಶ್ವರಿ ಇಳಕಲ್ಲ ನಗರದಲ್ಲಿ ಮನೆ ಮಾಡಿ ವಾಸ ಇದ್ದರು. ಪಕ್ಕದ ಮನೆಯಲ್ಲಿ ಶಶಿಕಲಾ ಹಡಪದ ಇದ್ದರು. ಅವರು ಸಹ ಯೋಧನ ಪತ್ನಿಯಾಗಿದ್ದು, ಆ ಯೋಧನು ನಿಧನವಾಗಿದ್ದರು. ಅಕ್ಕಪಕ್ಕದಲ್ಲಿ ಇರುವುದರಿಂದ ಬಸವರಾಜೇಶ್ವರಿ ಹಾಗೂ ಶಶಿಕಲಾ ನಡುವೆ ಒಳ್ಳೆಯ ಸ್ನೇಹ ಬೆಳೆದಿತ್ತು. ಹೀಗೆ ಒಂದು ಸಲ ಬಸವರಾಜೇಶ್ವರಿ ಅವರು ಸಿದ್ದಪ್ಪನ ಜೊತೆ ಸಂಬಂಧ ಇರುವುದು ಗೊತ್ತಾಗಿ ಶಶಿಕಲಾ ಅವರು ಸ್ನೇಹಿತೆ ಬಸವರಾಜೇಶ್ವರಿಗೆ ಈ ಬಗ್ಗೆ ಬುದ್ದಿ ಹೇಳಿ, ಸಂಬಂಧ ನಿಲ್ಲಿಸುವಂತೆ ಸಲಹೆ ನೀಡಿದ್ದರು. ಅದು ಸರಿ ಎನ್ನಿಸಿ, ಇತ್ತೀಚಿಗೆ ಬಸವರಾಜೇಶ್ವರಿ ಸಿದ್ದಪ್ಪನ ಜೊತೆ ಸಂಪರ್ಕ ಕಳೆದುಕೊಂಡಿದ್ದರು. ೨೦೨೪ರ -Éಬ್ರುವರಿ ವರೆಗೂ ಸಂಪರ್ಕ ಇತ್ತು. ಬಳಿಕ ೧೫ ದಿನಗಳ ಕಾಲ ಸಿದ್ದಪ್ಪ ಬಂದರೂ ಹತ್ತಿರ ಬಿಟ್ಟುಕೊಂಡಿರಲಿಲ್ಲ. ಇದರಿಂದ ರೋಸಿ ಹೋದ ಸಿದ್ದಪ್ಪ ತನ್ನ ಸಂಬಂಧಕ್ಕೆ ಅಡ್ಡಿ ಆಗಿದ್ದು, ಈ ಶಶಿಕಲಾ ಎಂದು ತಿಳಿದು ಅವರನ್ನು ಮುಗಿಸಲು ತಾನೇ ಮಾಸ್ಟರ್ ಪ್ಲಾನ್ ಮಾಡಿದ್ದ.

ಸಿದ್ದಪ್ಪ ಪುರ್ತಗೇರಿಯಲ್ಲಿ ಡಾಲಿನ್ ಇಂಟರ್ ನ್ಯಾಶನಲ್ ಸ್ಪೋಟಕ್ ಗ್ರಾನೈಟ್‌ನಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ ಇಳಕಲ್ಲ ನಗರದಲ್ಲಿ ಹೇರ್ ಡ್ರÊೆಯರ್ ಖರೀದಿ ಮಾಡಿ, ಅದಕ್ಕೆ ಡೆನೋಟರ್ ಸ್ಪೋಟಕ ಅಳವಡಿಸಿ, ಬಳಿಕ ಬಾಗಲಕೋಟೆ ಡಿಟಿಡಿಸಿಯಿಂದ ಶಶಿಕಲಾ ಅವರ ಹೆಸರಿಗೆ ಕೋರಿಯರ್ ಮಾಡಿದ್ದ. ಅದರಂತೆ ಶಶಿಕಲಾ ಅದನ್ನು ತೆಗೆದುಕೊಂಡು ಪ್ಲಗ್ ಹಾಕಿ ಸ್ವಿಚ್ ಆನ್ ಮಾಡಿದರೆ ಅವರ ಕಥೆ ಮುಗಿಯುತ್ತದೆ ಎಂದು ಕುತಂತ್ರ ಮಾಡಿದ್ದ. ಆದರೆ, ಕೋರಿಯರ್ ಬಂದಾಗ ಶಶಿಕಲಾ ಊರಲ್ಲಿ ಇಲ್ಲದ್ದರಿಂದು ಅದು ಬಸವರಾಜೇಶ್ವರಿ ಕೈಗೆ ಸೇರಿದ್ದಲ್ಲದೇ ಅವರೇ ಅದನ್ನು ಚೆಕ್ ಮಾಡಲು ಹೋಗಿ ತನ್ನ ಎರಡು ಕೈಬೆರಳು ಕಳೆದುಕೊಳ್ಳುವಂತಾಗಿತ್ತು.

ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆಯನ್ನು ಕೈಗೊಂಡಾಗ ಖದೀಮ ಸಿದ್ದಪ್ಪನ ಕುತಂತ್ರ ಬಯಲಿಗೆ ಬಂದಿದ್ದು, ಇದೀಗ ಸಿದ್ದಪ್ಪ ಪೊಲೀಸರ ಅತಿಥಿಯಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net