ಹೇಮರೆಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನ

15Anand2
Published on

ಬೆಳಗಾವಿ: ಇಳೆಯ ಬೆಳಕು (ಸಾದ್ವಿ ಹೇಮರೆಡ್ಡಿ ಮಲ್ಲಮ್ಮ) ನಾಟಕ ನೋಡಲು ಸೇರಿರುವ ಪ್ರೇಕ್ಷಕರನ್ನು ನೋಡಿದರೆ ರಂಗಭೂಮಿಗೆ ಸಾವಿಲ್ಲ ಎನ್ನುವುದು ಸಾಬೀತಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಡಾ.ಬಸವರಾಜ ಜಗಜಂಪಿ ಹೇಳಿದರು.

ನಗರದ ಕನ್ನಡ ಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಇಳೆಯ ಬೆಳಕು ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಜನರು ನಾಟಕ ನೋಡಲು ಬರುತ್ತಾರೆಂದರೆ ರಂಗಭೂಮಿ ಇನ್ನೂ ಆಕರ್ಷಣೆ ಕಳೆದುಕೊಂಡಿಲ್ಲ ಎಂಬುವುದು ತೋರಿಸುತ್ತದೆ ಎಂದರು. ಡಾ.ರಾಮಕೃಷ್ಣ ಮರಾಠೆ ರಚಿಸಿದ ನಾಟಕವನ್ನು ಶಿರೀಶ್ ಜೋಶಿ ನಿರ್ದೇಶನ ಮಾಡಿದ್ದಾರೆ.

ನೀರಾವರಿ ಇಲಾಖೆಯ ಅಭಿಯಂತ ಅಶೋಕ ವಾಸನದ, ರಂಗಸೃಷ್ಟಿ ಅಧ್ಯಕ್ಷ ರಮೇಶ ಜಂಗಲ್, ಉಪಾಧ್ಯಕ್ಷ ಎಂ.ಕೆ.ಹೆಗಡೆ, ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೆ ಮಧುಮತಿ ಹಿರೇಮಠ, ಸರ್ವಮಂಗಳ ಅರಳಿಮಟ್ಟಿ, ಯ.ರು.ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net