

ಔರಾದ್: ವಾಹನ ಸವಾರರು ಮನೆಯಿಂದ ಹೊರ ಬರಬೇಕಾದರೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ವಾಹನ ಚಲಾಯಿಸಬೇಕು. ಪ್ರಾಣಕ್ಕೆ ಕುತ್ತು ಬರದಂತೆ ಎಚ್ಚರಿಕೆ ವಹಿಸಬೇಕು ಎಂದು ಅಪರಾಧ ವಿಭಾಗದ ಪಿಎಸ್‌ಐ ರೇಣುಕಾ ಸಲಹೆ ನೀಡಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ `ಬೀದರ್ ಧೊರಿ ಹೆಲ್ಮೆಟ್ ಹಾಕೋ ಬೇಟಾ' ಘೋಷವಾಕ್ಯದೊಂದಿಗೆ ಕಾನೂನು ಅರಿವು ಮತ್ತು ಹೆಲ್ಮೆಟ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ವಾಹನ ಸವಾರರು ರಸ್ತೆ ನಿಯಮ ಪಾಲಿಸಬೇಕು. ನಿಮ್ಮ ಜೀವವನ್ನು ನೀವೆ ರಕ್ಷಿಸಿಕೊಳ್ಳಬೇಕು. ವಾಹನ ಸವಾರರು ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸಿ ಅಪಘಾತಗಳನ್ನು ಸಂಭವಿಸಿ, ಸಾವು ಆಗುತ್ತವೆ ಎಂದರು.
ವಾಹನದ ಎಲ್ಲ ದಾಖಲೆ ಸಮೇತ ರಸ್ತೆ ಮೇಲೆ ಬರಬೇಕು. ಚಿಕ್ಕ ವಯಸ್ಸಿನ ಮಕ್ಕಳಿಗೆ ವಾಹನಗಳನ್ನು ಚಲಾಯಿಸಲು ನೀಡುವುದು ದೊಡ್ಡ ಅಫರಾಧವಾಗಿದೆ. ನಿಯಮ ಪಾಲಿಸದಿದ್ದರೆ ದಂಡದ ಎಚ್ಚರಿಕೆ ನೀಡಲಾಗುತ್ತದೆ ಎಂದರು.
ಎಸ್‌ಎಸ್‌ಐ ಶಿವಾಜಿ, ವಿಜಯಕುಮಾರ, ಮಾರುತರೆಡ್ಡಿ, ಜ್ಞಾನೇಶ್ವರ ಗೌಡಾ, ಅನೀಲ್ ದೇವಕತ್ತೆ, ಅನೀಲ್ ಹೇಡೆ, ಶಂಕು ನಿಷ್ಪತೆ ಇತರರಿದ್ದರು.