ಹೆಮ್ಮೆಯಿಂದ ನಾವು ಹಿಂದೂ ಎಂದು ಹೇಳಿ

bkt-22-7
ಸೀತಾಮಾತ ದರ್ಶನ.
Published on

ಬಾಗಲಕೋಟೆ: ಪ್ರಭು ಶ್ರೀ ರಾಮ ದೇಶದ ಧಾರ್ಮಿಕ,ಸಾಂಸ್ಕೃತಿಯ ಐಕ್ಯತೆಯ ಸಂಕೇತವಾಗಿದ್ದು ರಾಮ ಮಂದಿರದ ಮೂಲಕ ಭಾರತ ಮತ್ತೆ ಏಕತೆಯನ್ನು ಸಾರಿದೆ, ನಾವು ಹೆಮ್ಮೆಯಿಂದ ಹಿಂದೂ ಎಂದು ಹೇಳಿ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಅವರು ಬಾಗಲಕೋಟೆ ತಾಲೂಕಿನ ಸಿತಿಮನಿ ಹತ್ತಿರ ಸೀತಮ್ಮನಗುಡ್ಡದಲ್ಲಿರುವ ಸೀತಾಮಾತಾ ದೇವಸ್ಥಾನದಲ್ಲಿ ಅಯೋಧ್ಯಪ್ರಭು ರಾಮಲಲ್ಲಾನ ಮೂರ್ತಿ ಪ್ರಾಣ ಪ್ರತಿಷ್ಠಾನ ನಿಮಿತ್ಯ ಸೋಮವಾರ ಭಾರತೀಯ ಜನತಾ ಪಾರ್ಟಿ ಗ್ರಾಮೀಣ ಮಂಡಲ ದಿಂದ ಹಮ್ಮಿಕೊಂಡ ಸೀತಾಮಾತಾದೇವಿಗೆ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಸೀತಾಮಾತೆಗೆ ಪೂಜೆ ಸಲ್ಲಸಿ ಧಾರ್ಮಿಕಸಭೆಯ ಅಧ್ಯಕ್ಷತೆವಹಸಿ ಮಾತನಾಡಿದರು.

ಮಾನ್ಯ ನರೇಂದ್ರಮೋದಿಯವರು ಭಾರತದ ಪ್ರಧಾನಮಂತ್ರಿಯಾದ ನಂತರ ದೇಶದಲ್ಲಿ ಅಟಲ್ ಬಿಹಾರಿ ವಾಜಪಾಯಿ ಹಾಗೂ ಲಾಲ್ ಕೃಷ್ಣ ಅಡ್ವಾನಿಯªವರ ಕನಸಿ ರಾಮರಾಜ್ಯವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ, ಅವರು ಎಲ್ಲ ದೇವಸ್ಥಾನಗಳ ಬೇಟಿ ನೀಡಿ ಸಮುದ್ರ ಸ್ನಾನ ಮಾಡಿ, ೧೧ ದಿನಗಳ ವೃತ ಆಚರಣೆ ಮೂಲಕ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದು ನಮ್ಮ ಭಾರತೀಯ ಧಾರ್ಮೀಕ ಆಚರಣೆಗೆ ಕನ್ನಡಿ ಇದ್ದಂತೆ, ಅವರ ನೇತೃತ್ವದಲ್ಲಿ ಮುಂದೆನೂ ದೇಶ ಮುನ್ನಡೆಯುತ್ತೆ, ಮೋದಿ ಬಂದ ನಂತರ ೧೦ ವರ್ಷದಲ್ಲಿ ೨೫ ಕೋಟಿಜನ ಬಡತನ ರೇಖೆಯಿಂದ ಹೊರಬಂದಿರುವುದು ಹೆಮ್ಮೆಯ ವಿಷಯ, ಜಮ್ಮುಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪಶ್ಚಿಮದ ಗುಜರಾತನಿಂದ ಪೂರ್ವ ಅರುಣಾಚಲದ ವರೆಗೆ ಭಾರತವನ್ನು ಏಕತೆ ಮೂಲಕ ಹಿಂದುಗಳನ್ನು ಒಂದುಗೂಡಿಸುವ ನಾವೇಲ್ಲ ಭಾರತಿಯರು ಎಂದು ಹೇಳುವ ಕೆಲಸವನ್ನು ಪ್ರಧಾನಿ ಮಾಡುತ್ತಿದ್ದಾರೆ ಎಂದರು.
ಸAರ್ಸ ಪಿ.ಸಿ.ಗದ್ದಿಗೌಡರ ಮಾತನಾಡಿ ಅಯೋದ್ಯದಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಯಾಗಿದೆ ಇನ್ನು ಮೋದಿಯವರು ತಮ್ಮ ಅಭಿವೃದ್ಧಿ ಕೆಲಸಗಳ ಮೂಲಕ ರಾಮರಾಜ್ಯದ ಕನಸನ್ನು ನನಸಾಗಿಸುತ್ತಾರೆ, ಶ್ರೀ ರಾಮ ಭಾರತದ ಆದರ್ಶ ಎಂದರು.

ಸಾನಿದ್ಯ ವಹಿಸಿದ ಆಶಿರ್ವಚನ ನೀಡಿದ ಬಿಲ್ ಕೆರೂರಿನ ಬಿಲ್ವಾಶ್ರಮ ಹಿರೇಮಠ ಪೂಜ್ಯರಾದ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಧರ್ಮಕ್ಕೆ ಪೆಟ್ಟು ಬಿದ್ದರೆ ಭಾರತ ಅದನ್ನು ಸಹಿಸುವುದಿಲ್ಲಾ, ಭಾರತೀಯರಾದ ನಾವು ತಂದೆ-ತಾಯಿಯ ಋಣ, ಗುರುವಿನ ಋಣ, ಮತ್ತು ದೇಶದ ಋಣ ತಿರಿಸುವುದ ನಮ್ಮ ಕರ್ತವ್ಯವಾಗಿದೆ, ದೇಶದ ಏಕತೆಗೆ ಹಿಂದೂ ಧರ್ಮದ ಊಳಿಯುವಿಗೆ ನಾವೇಲ್ಲರು ಕಂಕಣಬದ್ದರಾಗೋಣ ಎಂದರು.

ಮುತ್ತತ್ತಿಯ ಹಿರೇಮಠದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಕೊಲ್ಹಾರ ದಿಗಂಬರೇಶ್ವರ ಸಂಸ್ಥಾನಮಠದ ಯೋಗಿಕಲ್ಲಿನಾಟ ದೇವರು, ಗುಳೆದಗುಡ್ಡದ ಅಭಿನವ ಕಾಡಸಿದ್ದೇಶ್ವರ ಮಹಾಸ್ವಾಮಿಗಳು.ಕಮತಗಿ ಹಿರೇಮಠದ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು, ಸಾನಿದ್ಯವಹಿಸಿದ್ದರು. ಕಾರ್ಯಕ್ರಮದಲ್ಲಿ ಮಹಾಂತೇಶ ಶೆಟ್ಟರ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ,ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೊಣ್ಣುರ, ಕಲ್ಲಪ್ಪ ಭಗವತಿ,ಮಲ್ಲೇಶ ವಿಜಾಪುರ, ಮರಳಸ್ವಾಮಿ ವಂದಾಲ,ದುಂಡೇಶ ಕೊಣ್ಣೂರ,ಸಂಗಮೇಶ ಮಂಕಣಿ,ಹನಮಂತ ಗಂಗೂರ, ರಮೇಶ ಅಕಾರೆ,ಮುದಕನ್ನ ಒಡೆಯರ, ಅಪ್ಪಾಜಿ ಜೋಳದ,ಜ್ಷಾನಪ್ಪ ಕಾಳಗಿ, ಮಹಾದೇವ ಅರಿಜನ,ಮಲ್ಲಪ್ಪ ಜಂಬಲದಿನ್ನಿ,ದೀಲಿಪ ಚವ್ಹಾಣ,ಸೋಮಶಿಂಗ ಲಮಾಣಿ,ಹುಲ್ಲುನಗೌಡ ಹೊಸಗೌಡರ,ಕರಿಯಪ್ಪ ಕಟ್ಟಿಮನಿ,ಮುದಕನ್ನ ಕೊಲಾರ,ಯಲ್ಲಪ್ಪ ಅಮಾತಿಗೌಡರ,ಸಿದ್ದು ಲೋಕಾಪುರ, ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net