

ಮದ್ದೂರು: ತಾಲೂಕಿನ ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ವೀಣಾ ಹಾಗೂ ಉಪಾಧ್ಯಕ್ಷರಾಗಿ ಅಪ್ಪಾಜಿಗೌಡ ಆಯ್ಕೆಯಾಗಿದ್ದಾರೆ. ಗ್ರಾಪಂ ಸಭಾಂಗಣದಲ್ಲಿ ಇತ್ತೀಚೆಗೆ ಚುನಾವಣೆ ನಡೆದು ಅಧ್ಯಕ್ಷ ಸ್ಥಾನಕ್ಕೆ ವೀಣಾ ಅವರು ಅವಿರೋಧವಾಗಿ ಆಯ್ಕೆಯಾದರೆ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಅಪ್ಪಾಜಿಗೌಡ ಅವರು 7 ಮತಗಳನ್ನು ಪಡೆದು ಆಯ್ಕೆಯಾದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾರಾಯಣ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಕೆ. ನಂದೀಶ್ ಗೌಡ, ಸದಸ್ಯರಾದ ಎ.ಸಿ. ಸೌಭಾಗ್ಯ, ಬಿ. ಜ್ಯೋತಿ, ಮಹದೇವಮ್ಮ , ಸಿ.ಎಸ್. ಕಮಲಾಕ್ಷಿ, ಪಿಡಿಒ ಲೀಲಾವತಿ, ಮುಖಂಡರಾದ ಚೆಲುವರಾಜು, ಮಧುಸೂದನ್, ನಟರಾಜು, ಕೆಂಪರಾಜು, ಸತೀಶ್ ಇತರರಿದ್ದರು.