

ಕುಮಟಾ: ಪಟ್ಟಣದ ರಾಷ್ಟಿ್ರಯ ಹೆದ್ದಾರಿ 66ರಲ್ಲಿ ಜೀವ ವಿಮಾ ನಿಗಮದ ಕಚೇರಿ ಎದುರು ಗಟಾರ ಸ್ವಚ್ಛಗೊಳಿಸಿದ ಕಲ್ಲು ಮಣ್ಣನ್ನು ಮೂರು ತಿಂಗಳಿಂದ ತೆರವುಗೊಳಿಸದೇ ಹಾಗೆಯೇ ಬಿಡಲಾಗಿದೆ.
ಗಟಾರದಲ್ಲಿ ಮಳೆ ನೀರು ಸರಾಗವಾಗಿ ಹರಿಯಲೆಂದು ತುರ್ತು ಕಾಮಗಾರಿಯಡಿ ಹಿಟಾಚಿ ಬಳಸಿ ಗಟಾರದ ಕಲ್ಲು ಮಣ್ಣು ತೆಗೆದು ಪಕ್ಕದಲ್ಲೇ ಡಾಂಬರು ರಸ್ತೆಗೆ ತಾಗಿ ರಾಶಿ ಹಾಕಲಾಗಿತ್ತು. ಬಳಿಕ ಉಳಿದ ಎಲ್ಲ ಕಡೆಗಳಲ್ಲಿ ಗಟಾರದಿಂದ ತೆಗೆದ ಹೂಳನ್ನು ತೆರವುಗೊಳಿಸಿದರೂ ಜೀವ ವಿಮಾ ನಿಗಮದ ಎದುರು ಮಾತ್ರ ಹಾಗೆಯೇ ಬಿಡಲಾಗಿದೆ. ಇದರಿಂದ ರಾ. ಹೆದ್ದಾರಿಯ ಅಂಚಿಗೆ ಪಾದಚಾರಿ ಮಾರ್ಗವೇ ಇಲ್ಲದಂತಾಗಿದೆ. ವಾಹನಗಳು ಓವರ ಟೇಕ್ ಮಾಡುವ ಸಂದರ್ಭದಲ್ಲಿ ಪಾದಚಾರಿ ಮಾರ್ಗಕ್ಕೆ ಇಳಿಯುವ ವಾಹನಗಳು ಅಪಘಾತಕ್ಕೆ ಈಡಾಗುತ್ತಿವೆ. ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು ಹಗಲಿನಲ್ಲೂ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇದನ್ನೆಲ್ಲ ಪ್ರತಿನಿತ್ಯ ನೋಡಿಕೊಂಡು ತಿರುಗುತ್ತಿದ್ದರೂ ಸ್ವಚ್ಛಗೊಳಿಸುವ ಪ್ರಯತ್ನ ಮಾಡಿಲ್ಲ.
ಮಳೆಗಾಲದ ಆರಂಭದಲ್ಲಿ ತುರ್ತು ಕಾಮಗಾರಿಯಡಿ ಪುರಸಭೆಯಿಂದ ಗಟಾರ ಸ್ವಚ್ಛತೆ ಮಾಡಿದ್ದರು. ಇದು ರಾಷ್ಟಿ್ರಯ ಹೆದ್ದಾರಿ ಪ್ರಾಧಿಕಾರಕ್ಕೆ ಸಂಬಂಧಿಸಿದ ರಸ್ತೆ. ಆದರೂ ಅಲ್ಲಿ ಅಪಘಾತ ತಡೆಯುವ ಉದ್ದೇಶದಿಂದ ತುರ್ತಾಗಿ ರಸ್ತೆಯಂಚಿಗೆ ರಾಶಿ ಬಿದ್ದಿರುವ ಕಲ್ಲು ಮಣ್ಣು ತೆಗೆಸುವ ಪ್ರಯತ್ನ ಮಾಡುತ್ತೇವೆ. | ರಾಜು ಶಾನಭಾಗ ಪಿಡಬ್ಲ್ಯು್ಯ ಇಂಜಿನಿಯರ್