ಹೆತ್ತವರರಿಗೆ ಅಗೌರವ ತೋರುತ್ತಿರುವ ಮಕ್ಕಳು

Nimbal Shri
Published on

ಕಲಬುರಗಿ: ಶ್ವಾನಗಳಿಗೆ ತೋರುವ ಪ್ರೀತಿ, ಮಮತೆ ಜನ್ಮ ನೀಡಿದ ತಂದೆ- ತಾಯಿಗೆ ತೋರದಿರುವುದು ಬೇಸರದ ಸಂಗತಿ ಎಂದು ಮೌನಯೋಗಿ ಶ್ರೀ ಜಡೆಯ ಶಾಂತಲಿAಗೇಶ್ವರ ಮಹಾಸ್ವಾಮಿಗಳು ನುಡಿದರು.

ಬೆಂಗಳೂರಿನ ಸಮಾಧಾನ ಆಶ್ರಮದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಯುಗಾದಿ ಮಹೋತ್ಸವದಲ್ಲಿ ಆಶೀರ್ವಚನ ನೀಡಿ, ನಾವು ಮಕ್ಕಳಿಗೆ ಶಿP್ಷÀಣ ನೀಡುತ್ತೇವೆ, ಆದರೆ ಸಂಸ್ಕಾರ ಕೊಡುತ್ತಿಲ್ಲ. ಮಕ್ಕಳು ತಮ್ಮ ಪಾಡಿಗೆ ತಾವಿದ್ದು, ತಂದೆ- ತಾಯಿಯನ್ನು ವೃz್ದÁಶ್ರಮಕ್ಕೆ ಬಿಟ್ಟು ಕಾರಿನಲ್ಲಿ ನಾಯಿಯನ್ನು ಕೂರಿಸಿಕೊಂಡು ಹೋಗುತ್ತಿz್ದÁರೆ. ಹೀಗೆ ನಡೆದುಕೊಳ್ಳುವುದು ಮನುಷ್ಯತ್ವ ಅಲ್ಲ. ನಮ್ಮ ಜೀವನ ಪದ್ಧತಿ ಬದಲಾಯಿಸಿದ ಪರಿಣಾಮ ಪ್ರಕೃತಿಯೂ ಮುನಿಸಿಕೊಂಡು ಬರ, ಅತಿವೃಷ್ಟಿ ಎದುರಿಸಬೇಕಾಗಿದೆ ಎಂದು ಹೇಳಿದರು.
ಮನುಷ್ಯರಾದ ನಾವು ದೊಡ್ಡವರಾಗಬೇಕೆಂದರೆ ಉತ್ತಮ ವಾತಾವರಣ, ಉತ್ತಮ ಗೆಳೆತನ, ಉತ್ತಮ ಮಾತುಕತೆ, ನಿರ್ಮಲ ಮನಸ್ಸು ಹೊಂದಿರಬೇಕು. ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಆದರೂ ತಾಯಿ ಬಳಿ ಬಂದು ಆಗಾಗ ಕೈ ತುತ್ತು ಊಟ ಮಾಡುತ್ತಿದ್ದರು. ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದರು. ನಮ್ಮ ಹಿರಿಯರು ನಡೆದುಕೊಂಡು ಬಂದ ದಾರಿ ಯಾವತ್ತೂ ಮರೆಯಬಾರದು. ಸನಾತನ ಧರ್ಮ ಬಗ್ಗೆ ಕೇವಲ ಬಾಯಿ ಮಾತಿನಲ್ಲಿ ಹೇಳುತ್ತಿz್ದೆÃವೆ. ಆದರೆ ಆಚರಣೆಯಲ್ಲಿ ತರುತ್ತಿಲ್ಲ. ಹಾನಗಲï ಕುಮಾರಸ್ವಾಮಿಗಳು ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸದಿದ್ದರೆ ಲಿಂಗಾಯತ, ವೀರಶೈವ ಸಮುದಾಯ ಸಂಘಟನೆಯಾಗುತ್ತಿರಲಿಲ್ಲ. ಶಿವಯೋಗ ಮಂದಿರ ಸ್ಥಾಪಿಸದಿದ್ದರೆ ನಾಡಿನ ಮಠ, ಮಂದಿರಗಳಿಗೆ ಮಹಾಸ್ವಾಮಿಗಳು ದೊರಕುವುದು ಕಷ್ಟವಾಗುತ್ತಿತ್ತು ಎಂದರು.
ಜಡೆ ಹಿರೇಮಠದ ಶ್ರೀ ಅಮರೇಶ್ವರ ಶಿವಾಚಾರ್ಯರು ಮಾತನಾಡಿ, ನಾವೆಲ್ಲರೂ ಧರ್ಮ ಮಾರ್ಗದಲ್ಲಿ ನಡೆದರೆ ಒಂದು ಶಕ್ತಿ ದೊರೆಯುತ್ತದೆ. ಪ್ರಮುಖವಾಗಿ ಸಮಾಧಾನವೆಂಬ ರಕ್ಷಾ ಕವಚ ಹಾಕಿಕೊಳ್ಳಬೇಕು ಎಂದರು.
ಗೊಗ್ಗೆಹಳ್ಳಿಯ ಶ್ರೀ ಸಂಗಮೇಶ್ವರ ಶಿವಾಚಾರ್ಯರು, ಮೂಡಿಯ ಶ್ರೀ ಸದಾಶಿವ ಮಹಾಸ್ವಾಮೀಜಿ ಮಾತನಾಡಿದರು.
ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ ಕಲಬುರಗಿ ಜಿಲ್ಲಾಧ್ಯP್ಷÀ ಶರಣು ಮೋದಿ, ಹಿರಿಯ ಆಯುರ್ವೇದ ತಜ್ಞ ಡಾ.ಎಚ್.ಹನುಮಂತರಾಯ ಇತರರಿದ್ದರು.
ಶಿವಾನಂದ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಹೇಮಾ ಸಂದೀಪ ಹಾಗೂ ಕೃಷಿ ಅಧಿಕಾರಿ ಮಹೇಶ ನಿರೂಪಣೆ ಮಾಡಿದರು. ವರ್ಷಕ್ಕೊಮ್ಮೆ ಯುಗಾದಿ ದಿನದಂದು ಮಾತ್ರ ಮಾತನಾಡುವ ಪೂಜ್ಯರ ವಾಣಿಯ ಸಂದೇಶ ಕೇಳಲು ದೇಶದ ವಿವಿಧ ರಾಜ್ಯಗಳಿಂದ ಅಸಂಖ್ಯಾತ ಭಕ್ತರು ಪಾಲ್ಗೊಂಡಿದ್ದರು. ಸಮಾಧಾನದಲ್ಲಿ ಪೂಜ್ಯರು ಉಪಯೋಗಿಸಿದ ಸಾಮಾನುಗಳ ವಸ್ತು ಸಂಗ್ರಹಾಲಯ ಹಾಗೂ ಗ್ರಂಥಾಲಯಕ್ಕೆ ಅಡಿಗಲ್ಲು ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net