

ಕಾರವಾರ: ಇಲ್ಲಿನ ಕದಂಬ ನೌಕಾನೆಲೆಯ ಸಿವಿಲಿಯನ್ ನೌಕರರ ವರ್ಕ್ ಕಮಿಟಿ ಚುನಾವಣೆಯಲ್ಲಿ ಸಂಘ ಪರಿವಾರ ಹಿನ್ನೆಲೆಯ ಭಾರತೀಯ ಪ್ರತಿ ರಕ್ಷಾ ಮಜ್ದೂರ್ ಸಂಘ(ಬಿಪಿಎಂಎಸ್) ಸಂಯೋಜಿತ ಕಾರವಾರ ನೇವಲ್ ಸಿವಿಲಿಯನ್ ಮಜ್ದೂರ್ ಸಂಘ (ಕೆಎನ್ಸಿಎಂಎಸ್) ಅತಿ ಹೆಚ್ಚು ಸ್ಥಾನಗಳಲ್ಲಿ ಜಯಶಾಲಿಯಾಗಿದೆ.
ಶುಕ್ರವಾರ ನೇವಲ್ ಶಿಪ್ ರಿಪೇರ್ ಯಾರ್ಡ್ನಲ್ಲಿ ಚುನಾವಣೆ ನಡೆಯಿತು. ಸಾವಿರಕ್ಕೂ ಅಧಿಕ ನೌಕರರು ಮತದಾನ ಮಾಡಿದ್ದರು. 6 ಸ್ಥಾನಗಳಲ್ಲಿ 4 ಸ್ಥಾನಗಳನ್ನು ಕೆಎನ್ಸಿಎಂಎಸ್ ಪಡೆದಿದೆ. ಎದುರಾಳಿ ಸಿಐಟಿಯು ಸಂಯೋಜಿತ ಸಂಘಟನೆ 2 ಸ್ಥಾನಗಳಲ್ಲಿ ಗೆದ್ದಿದೆ.
ಸುಬ್ರಹ್ಮಣ್ಯ ಹರಿಕಂತ್ರ, ವಿಶ್ವನಾಥ ಯು. ನಾಯ್ಕ, ಮನೋಜ ಕುಮಾರ ಚೌಗಲೆ, ಜಯಶೇಖರ ಪಂಡಿತ ಆಯ್ಕೆಯಾದರು. ಅಲ್ಲದೆ, ಕ್ಯಾಂಟೀನ್ ಸಮಿತಿಗೆ ಬಿಎಂಎಸ್ನ ಮಂಗಲದಾಸ ನಾಯ್ಕ ಮತ್ತು ದಾಮೋದರ, ಸುರಕ್ಷಾ ಸಮಿತಿಗೆ ಮಂಜುನಾಥ ಟಿ.ಬಿ.ಯೋಗೇಶ ಶೆಟ್ಟಿ ಆಯ್ಕೆಯಾದರು ಎಂದು ಕಾರವಾರ ನೇವಲ್ ಸಿವಿಲಿಯನ್ ಮಜ್ದೂರ್ ಸಂಘದ ಕಾರ್ಯಾಧ್ಯಕ್ಷ ಅಮೃತ ಮುದ್ಗೇಕರ್ ಹಾಗೂ ಪ್ರಧಾನ ಕಾರ್ಯದರ್ಶಿ ವಿನಾಲ ರತ್ನಾಕರ ನಾಗೇಕರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.