ಹೆಚ್ಚು ಮೊಬೈಲ್ ಬಳಕೆಯಿಂದ ಮಾನಸಿಕ ಅನಾರೋಗ್ಯ

4-kollegal photo-1,,,,
Published on

ಕೊಳ್ಳೇಗಾಲ: ಅತಿಯಾಗಿ ಮೊಬೈಲ್ ಬಳಸುವುದರಿಂದ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಹೇಲಿ ಫೌಂಡೇಷನ್ ಮುಖ್ಯಸ್ಥೆ ಅದೀಬಾ ಹೇಳಿದರು.

ಪಟ್ಟಣದ ಮರಡಿಗುಡ್ಡ ಸಮೀಪವಿರುವ ಸರ್ಕಾರಿ ಬುಡಕಟ್ಟು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಅಹೇಲಿ ಫೌಂಡೇಷನ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ಶಿಕ್ಷಣ ಮತ್ತು ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾನಸಿಕವಾಗಿ ಲವಲವಿಕೆಯಿಂದಿರಲೂ ಯೋಗ, ವ್ಯಾಯಾಮ ಸಹಕಾರಿಯಾಗಲಿದೆ. ಇದರಿಂದ ಆರೋಗ್ಯದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಬಹುದು. ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯವಾಗಿದ್ದರೆ ಏನಾದರೂ ಸಾಧನೆ ಮಾಡಬಹುದು.

ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳ ಜ್ಞಾನ ಶಿಕ್ಷಣದ ಕಡೆಗೆ ಹೆಚ್ಚಿರಬೇಕು. ಎಸ್ಸೆಸ್ಸೆಲ್ಸಿ, ಪಿಯುಸಿ ಹಂತಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದೇ ಆದರೆ ಮುಂದಿನ ಶಿಕ್ಷಣ ಭವಿಷ್ಯ ಚೆನ್ನಾಗಿರುತ್ತದೆ. ಉನ್ನತ ವ್ಯಾಸಂಗದಿಂದ ಜ್ಞಾನದ ಜತೆಗೆ ಉತ್ತಮ ಉದ್ಯೋಗ ಲಭಿಸುತ್ತದೆ ಎಂದು ಸಲಹೆ ನೀಡಿದರು.

ಮೊಬೈಲ್ ಅಧಿಕ ಬಳಕೆಯಿಂದ ಮಾನಸಿಕ ಖಿನ್ನತೆ ಉಂಟಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಹವ್ಯಾಸಗಳ ಬಗ್ಗೆ ಕಾಳಜಿ ವಹಿಸಬೇಕು. ಪಠ್ಯ ಪುಸ್ತಕಗಳೊಂದಿಗೆ ಸಮಯ ಕಳೆದರೆ ಮಾಹಿತಿ ಜತೆಗೆ ಉಜ್ವಲ ಭವಿಷ್ಯ ನಿಮ್ಮದಾಗುತ್ತದೆ ಎಂದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ರಾಜೇಶ್, ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್‌ನ ರಮ್ಯಾ, ಗಿರಿಜನ ಮುಖಂಡ ಮಹದೇವಸ್ವಾಮಿ, ರಾಜಪ್ಪ, ನಿಲಯಪಾಲಕಿ ದಾಕ್ಷಾಯಿಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net