

ನಂಜನಗೂಡು: ತಾಲೂಕಿನ ಹೆಗ್ಗಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ರೇವಮ್ಮ ಆಯ್ಕೆಯಾಗಿದ್ದಾರೆ.
ಬುಧವಾರ ಗ್ರಾಪಂನಲ್ಲಿ ಚುನಾವಣೆ ಪ್ರಕ್ರಿಯೆ ನಿಗದಿಯಾಗಿತ್ತು. ರೇವಮ್ಮ ಮತ್ತು ರಾಣಿ ಸ್ಪರ್ಧಿಸಿದ್ದರು. ರಾಣಿ 8 ಮತಗಳನ್ನು ಪಡೆದು ಪರಾಭವಗೊಂಡರು. ರೇವಮ್ಮ 10 ಮತಗಳನ್ನು ಪಡೆದು ಜಯಗಳಿಸಿದರು. ಒಟ್ಟು 19 ಸದಸ್ಯರ ಬಲ ಹೊಂದಿರುವ ಗ್ರಾಮ ಪಂಚಾಯಿತಿಯಲ್ಲಿ 18 ಸದಸ್ಯರು ಹಾಜರಿದ್ದು, ಒಬ್ಬರು ಗೈರಾಗಿದ್ದರು. ಚುನಾವಣಾಧಿಕಾರಿಯಾಗಿ ಚಂದ್ರು ಕಾರ್ಯನಿರ್ವಹಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠನಾಯಕ, ಸಿ.ಎಂ.ಶಂಕರ್, ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ನಾಗರಾಜು, ಗ್ರಾಪಂ ಸದಸ್ಯರಾದ ರಂಗಸ್ವಾಮಿ, ಅಶೋಕ್, ಬಸವರಾಜು, ಪುಟ್ಟ ಸಿದ್ದಮ್ಮ, ಗೀತಾ, ಜ್ಯೋತಿ, ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ಮುಖಂಡರಾದ ಶಿವಶಂಕರ್, ಕೃಷ್ಣ ಶೆಟ್ಟಿ, ಮಹದೇವ ಶೆಟ್ಟಿ, ಲೋಕೇಶ್, ಶೇಖರ್, ಕೂಡ್ಲಾಪುರ ರಾಜು, ಚಂದ್ರು, ಸೋಮಣ್ಣ ಭಾಗವಹಿಸಿದ್ದರು.