ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ

20mnd1(A)
Published on

ಮುಂಡಗೋಡ: ತಾಲೂಕಿನ ಕೊಪ್ಪ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಹಾನಿ ಸಂಭವಿಸಿದೆ.

ರಮೇಶ ಜೀವಣ್ಣವರ ಎಂಬುವರಿಗೆ ಸೇರಿದ ಹುಲ್ಲಿನ ಬಣವೆ ಇದಾಗಿದ್ದು, ನಾಲ್ಕು ಟ್ರ್ಯಾಕ್ಟರ್​ನಷ್ಟು ಹುಲ್ಲಿನ ಬಣವೆಯನ್ನು ತಮ್ಮ ಮನೆಯ ಪಕ್ಕದಲ್ಲಿ ಹಾಕಿದ್ದರು. ಸುಮಾರು ಮೂರು ಟ್ರ್ಯಾಕ್ಟರ್​ನಷ್ಟು ಹುಲ್ಲು ಸುಟ್ಟು ಹೋಗಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ ಅಕ್ಕ-ಪಕ್ಕದ ಮನೆಗಳಿಗೆ ಮತ್ತು ಬೇರೆ ಬಣವೆಗಳಿಗೆ ಬೆಂಕಿ ಆವರಿಸುವ ಮುನ್ನ ನಂದಿಸಿ ಮುಂದಾಗುವ ಅನಾಹುತ ತಪ್ಪಿಸಿದ್ದಾರೆ.

ಅಗ್ನಿ ಶಾಮಕದಳದ ಸಿಬ್ಬಂದಿ ಕೆ.ಆರ್. ಮಾಳಗಿ, ಲಕ್ಷ್ಮಣ ಪಟಗಾರ, ಮಂಜುನಾಥ ಪಟಗಾರ, ಅಡಿವೆಪ್ಪ ಕುರುವಿನಕೊಪ್ಪ, ದುರ್ಗಪ್ಪ ಹರಿಜನ, ಚಮನಸಾಬ ನದಾಫ್, ಉದಯಕುಮಾರ ಬಾಳೆಕಟ್ಟಿ, ಶಿವಾಜಿ ರಾಣಿಗೇರ ಹಾಗೂ ವಿಶ್ವನಾಥ ಮೂಡೂರ ಕಾರ್ಯಾಚರಣೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net