ಹುಲಿಕೆರೆ ಗ್ರಾ.ಪಂ.ಗೆ ಶ್ವೇತಾ ಅಧ್ಯಕ್ಷೆ

10-08--krs1
Published on

ಕೆ.ಆರ್.ಸಾಗರ: ಹುಲಿಕೆರೆ ಗ್ರಾ.ಪಂ.ಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಡಿ. ಶ್ವೇತಾ ಅಧ್ಯಕ್ಷರಾಗಿ ಹಾಗೂ ವೈರಮುಡಿ ಉಪಾಧ್ಯರಾಗಿ ಆಯ್ಕೆಯಾಗಿದ್ದಾರೆ.


ಒಟ್ಟು 20 ಸದಸ್ಯರಿರುವ ಗ್ರಾ.ಪಂ.ನಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಡಿ.ಶ್ವೇತಾ ಹಾಗೂ ಜೆಡಿಎಸ್ ಬೆಂಬಲಿತ ಮಂಜುಳಾ ಅವರ ನಡುವೆ ಸ್ಪರ್ಧೆ ಏರ್ಪಟ್ಟು, ಡಿ. ಶ್ವೇತಾ ಅವರು 12 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ, ಮಂಜುಳಾ ಅವರು 7 ಮತಗಳನ್ನು ಪಡೆದು ಪರಾಭವಗೊಂಡರು. ಒಂದು ಮತ ತಿರಸ್ಕೃತಗೊಂಡಿತು.


ಉಪಾಧ್ಯಕ್ಷರ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ವೈರಮುಡಿ 11 ಮತ ಪಡೆದು ಆಯ್ಕೆಯಾದರೆ, ಜೆಡಿಎಸ್ ಬೆಂಬಲಿತ ಬಂಗಾರಪ್ಪ 9 ಮತ ಪಡೆದು ಪರಾಜಿತರಾದರು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವೀಣಾ ರಾಜೇಗೌಡ ಚುನಾವಣಾಧಿಕಾರಿ ಕಾರ್ಯನಿರ್ವಹಿಸಿದರು.


ಆಯ್ಕೆಯಾದ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸದಸ್ಯರಾದ ಹರೀಶ್ ಕುಮಾರ್, ರಾಮು, ಕರೀಗೌಡ, ತಾ.ಪಂ ಮಾಜಿ ಸದಸ್ಯ ಜಯರಾಂ, ಮುಖಂಡರಾದ ಸಂಜಯ ಹೊಸಉಂಡವಾಡಿ, ಕೃಷ್ಣ, ರಾಮಕೃಷ್ಣ, ಮಹದೇವ, ಚಂದ್ರು ಇತರರು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net