

ಯಳಂದೂರು: ತಾಲೂಕಿನ ಗೌಡಹಳ್ಳಿ-ಮಲಾರಪಾಳ್ಯದ ಗ್ರಾಮದ ಸುತ್ತಮುತ್ತಲ್ಲಿನ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಪ್ರಾಣಿಯನ್ನು ಸೆರೆಹಿಡಿಯಲು ಭಾನುವಾರ ಅರಣ್ಯ ಇಲಾಖೆ ಬೋನು ಅಳವಡಿಸಿ ಸೆರೆ ಹಿಡಿಯುವ ಕಾರ್ಯಾಚರಣೆ ಕೈಗೊಂಡಿದೆ.
ಕಳೆದ ಒಂದು ವಾರದಿಂದ ಗ್ರಾಮದ ಹೊರ ಪ್ರದೇಶದ ಜಮೀನಿನಲ್ಲಿ ಕಾಣಿಕೊಂಡಿರುವ ಹುಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವುದು ಜತೆಗೆ ಕರುವನ್ನು ತಿಂದಿರುವುದರ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಗೌಡಹಳ್ಳಿ, ಮಲಾರಪಾಳ್ಯ, ಮದ್ದೂರು ಸುತ್ತಮುತ್ತಲಿನ ರೈತರ ಹೊಲ ಗದ್ದೆಗಳ ಪ್ರದೇಶದಲ್ಲಿ ಭಾನುವಾರ ಕೂಂಬಿಂಗ್ ನಡೆಸಿದರು. ಆದರೆ ಚಿರತೆಯ ಹೆಜ್ಜೆ ಗುರುತು ಕಂಡುಬಂದಿದ್ದು, ಹುಲಿಯ ಹೆಜ್ಜೆ ಗುರುತು ಕಂಡುಬಂದಿಲ್ಲ, ಆದ್ದರಿಂದ ಈ ಪ್ರದೇಶದಲ್ಲಿ ಸುತ್ತಮುತ್ತಲ್ಲಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ಹೆಚ್ಚಿಸುವುದರ ಜತೆಗೆ ಕರುವಿನ ಗುಡ್ಡದಲ್ಲಿ ಬೋನು ಅಳವಡಿಸಿ ಸಾಕು ನಾಯಿ ಕಟ್ಟಿ ಹಾಕಿ ಸೆರೆಯಿಡಿಯುವ ನಿಟ್ಟಿನಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಯಳಂದೂರು ವಲಯದ ಆರ್‌ಎಫ್‌ಒ ಸತೀಶ್ ಮಾಹಿತಿ ನೀಡಿದರು.