ಹುಲಿ ಸೆರೆಗೆ ಕೂಂಬಿಂಗ್ ಕಾರ್ಯ ಆರಂಭ

IMG-20250713-WA0222(1)
Published on

ಹನಗೋಡು: ಸಮೀಪದ ಕೆ.ಜಿ.ಹೆಬ್ಬನಕುಪ್ಪೆಯ ತರಗನ್ ತೆಂಗಿನ ತೋಟದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಪತ್ತೆಗೆ ಭಾನುವಾರ ಕೂಬಿಂಗ್ ಕಾರ್ಯ ಆರಂಭಿಸಿದ್ದಾರೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ತರಗನ್ ತೋಟದಲ್ಲಿ ಶನಿವಾರ ಕಚುವಿನಹಳ್ಳಿಯ ರುಕ್ಮಿಣಿ ಶ್ರೀನಿವಾಸ್ ಅವರಿಗೆ ಸೇರಿದ ಹಸುವಿನ ಮೇಲೆ ಹಾಡಹಗಲೇ ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಭಾನುವಾರ ಹುಣಸೂರು ವಲಯದ ಆರ್‌ಎಫ್‌ಒ ಸುಬ್ರಹ್ಮಣ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹುಲಿ ಪತ್ತೆಗೆ ಮೂರು ಕಡೆ ಸಿ.ಸಿಕ್ಯಾಮರಾ ಹಾಗೂ ಬೋನು ಇಟ್ಟು ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದಾರೆ.

ಈ ಹಿಂದೆಯೂ ಅನೇಕ ಬಾರಿ ಹುಲಿ ದಾಳಿ ನಡೆಸಿದಾಗ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಹುಲಿ ದಾಳಿ ಮಾತ್ರ ನಿಂತಿಲ್ಲ.

ಹುಲಿ ಚಲನವಲನದ ಬಗ್ಗೆ ಗಮನಿಸಲು ಸಿ.ಸಿ.ಕ್ಯಾಮರಾ ಅಳವಡಿಸಲಾಗಿದೆ. ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾದ ಚಿತ್ರಗಳನ್ನಾಧರಿಸಿ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಮತ್ತೆ ಹುಲಿ ಕಾರ್ಯಾಚರಣೆ ನಡೆಸಲಾಗುವುದೆಂದು ಆರ್ ಎಫ್‌ಒ ಸುಬ್ರಮಣ್ಯ ಪತ್ರಿಕೆಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net