ಮದ್ದೂರು: ತಾಲೂಕಿನ ಹುರಗಲವಾಡಿ ಗ್ರಾಮದ ಜಾನಪದ ಗಾಯಕ ಹುರಗಲವಾಡಿ ರಾಮಯ್ಯ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿ 2024ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಲಭಿಸಿದೆ.
ಹುರಗಲವಾಡಿ ಗ್ರಾಮದ ಕುಂಡಯ್ಯ-ಪುಟ್ಟಮ್ಮ ದಂಪತಿ ಪುತ್ರರಾದ ರಾಮಯ್ಯ ಅವರು ಚಿಕ್ಕ ವಯಸ್ಸಿನಿಂದಲೇ ವೃತ್ತಿಯಲ್ಲಿ ವ್ಯವಸಾಯ ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಪ್ರವೃತ್ತಿಯಲ್ಲಿ ಹಾಡುಗಾರ, ಸಾಮಾಜಿಕ ಕಾರ್ಯಕರ್ತರಾಗಿ ಗಮನ ಸೆಳೆದಿದ್ದಾರೆ.
ಜಾನಪದ ಗಾಯನದ ಮೂಲಕ ಗಮನ ಸೆಳೆದಿರುವ ರಾಮಯ್ಯ ಅವರು ಹಲವಾರು ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹಾಡುವ ಮೂಲಕ ಗಮನ ಸೆಳೆದಿದ್ದಾರೆ.
ಸಿಂಗಾರ ಕನ್ನಡ ಸಮ್ಮೇಳನ ಸಿಂಗಾಪುರ, ಹೊರನಾಡು ಉತ್ಸವ, ಸಾರಾನಾಥ್, ಉತ್ತರಪ್ರದೇಶ, ವಾಪಿ ಕನ್ನಡಿಗರ ಸಮ್ಮೇಳನ ಗುಜರಾತ್, ಸುಗಮ ಸಂಗೀತ ಬುದ್ಧಗಯಾ ಬಿಹಾರ್, ಡಾ.ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನ ಬೆಂಗಳೂರು, ಅಂತಾರಾಷ್ಟ್ರೀಯ ಜಾನಪದೋತ್ಸವ ಬೀದರ್ ಸೇರಿದಂತೆ ಹಲವಾರು ಕಡೆಗಳಲ್ಲಿ ಜಾನಪದ ಗೀತೆಗಳನ್ನು ಹಾಡುವ ಮೂಲಕ ಗಮನ ಸೆಳೆದಿದ್ದಾರೆ.
ಲಭಿಸಿರುವ ಪುರಸ್ಕಾರಗಳು: ತಾಲೂಕು, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಜನಪದ ಕೋಗಿಲೆ, ಹಳ್ಳಿಧನಿ, ಗಾನಕೋಗಿಲೆ, ಕ್ರಾಂತಿಗಾಯಕ ರಾಜ್ಯ ಪ್ರಶಸ್ತಿಗಳು, ಮಂಡ್ಯ ಕರ್ನಾಟಕ ಸಂಘದ ರಾಜ್ಯೋತ್ಸವ ಪ್ರಶಸ್ತಿ, ಇನ್ನು ಮುಂತಾದ ಪುರಸ್ಕಾರಗಳು ದೊರೆತಿವೆ.
ಇದೀಗ ಕರ್ನಾಟಕ ಜಾನಪದ ಅಕಾಡೆಮಿ 2024ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಲಭಿಸಿರುವುದು ನಮಗೆ ಅತೀವ ಖುಷಿ ತಂದಿದ್ದು, ಮುಂದೆ ಹೆಚ್ಚಿನ ಮಟ್ಟದಲ್ಲಿ ಸಾಧನೆ ಮಾಡಲು ಸ್ಪೂತಿ ತುಂಬಿದೆ ಎಂದು ಗಾಯಕ ಹುರಗಲವಾಡಿ ರಾಮಯ್ಯ ಹರ್ಷ ವ್ಯಕ್ತಪಡಿಸಿದ್ದಾರೆ.
ಗಾಯಕ ಹುರುಗಲವಾಡಿ ರಾಮಯ್ಯ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿ 2024ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಲಭಿಸಿರುವುದು ತಾಲೂಕು ಮತ್ತು ಜಿಲ್ಲೆಗೆ ಹೆಮ್ಮೆ ಬಂದಂತಾಗಿದೆ. ಕರ್ನಾಟಕ ಜನಾಪದ ಪರಿಷತ್ ತಾಲೂಕು ಅಧ್ಯಕ್ಷ ಚಾಮನಹಳ್ಳಿ ಮಂಜು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.