ಹುತಾತ್ಮನಾದ ಮಹಾಲಿಂಗಪುರದ ಯೋಧ ಮಹೇಶ್

f89b9b9b-1400-411f-bcce-b2a8746abb13
ಹುತಾತ್ಮ ಯೋಧ ಮಹೇಶ್ ಮರಿಗೊಂಡ
Published on

ಬಾಗಲಕೋಟೆ: ಜಮ್ಮು ಕಾಶ್ಮೀರದಲ್ಲಿ ಸೈನಿಕರು ತೆರಳುತ್ತಿದ್ದ ವಾಹನವೊಂದು ಮಂಗಳವಾರ ಸಂಜೆ ಪ್ರಪಾತಕ್ಕೆ ಉರುಳಿ ಬಿದ್ದು ಐವರು ಯೋಧರು ಸಾವನ್ನಪ್ಪಿದ್ದು, ಇವರಲ್ಲಿ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರದ ಯೋಧ ಮಹೇಶ್ ಮರಿಗೊಂಡ(೨೫) ಸಹ ಹುತಾತ್ಮರಾಗಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹೇಶ್ ಗೆ ಜಮ್ಮು ಕಾಶ್ಮೀರಕ್ಕೆ ವರ್ಗಾವಣೆ ಆಗಿತ್ತು. ಹೀಗಾಗಿ ಅಲ್ಲಿಗೆ ತೆರಳುವ ವೇಳೆ Ã ದುರಂತ ಸಂಭವಿಸಿದೆ. ೧೧ನೇ ಮರಾಠ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹೇಶ್ ಸೇನೆಗೆ ಸೇರಿ ೬ ವರ್ಷ ೬ ತಿಂಗಳಾಗಿತ್ತು.

ಮೂರು ವರ್ಷಗಳ ಹಿಂದಷ್ಟೆ ಲಕ್ಷಿ÷್ಮÃ ಎಂಬ ಯುವತಿ ಜೊತೆ ಮದುವೆ ಆಗಿತ್ತು. ಕಳೆದ ಆಗಸ್ಟ್ ತಿಂಗಳಲ್ಲಿ ಮಹಾಲಿಂಗಪುರಕ್ಕೆ ರಜೆಗೆ ಬಂದಿದ್ದ ಮಹೇಶ್, ಇತ್ತೀಚಿಗೆ ಮೂರು ತಿಂಗಳ ಹಿಂದೆ ಪತ್ನಿಯು ಸಹ ಹಿಮಾಚಲ ಪ್ರದೇಶದಲ್ಲಿ ಮಹೇಶ್ ಜೊತೆ ವಾಸ ಇದ್ದರು. ಇದೀಗ ಜಮ್ಮು ಕಾಶ್ಮೀರಕ್ಕೆ ವರ್ಗಾವಣೆ ಆಗಿದ್ದರಿಂದ ಪತ್ನಿಯನ್ನು ವಾಪಸ್ಸು ಊರಿಗೆ ಕಳುಹಿಸಿ ತಾನು ವರ್ಗಾವಣೆಯಾದ ಜಾಗಕ್ಕೆ ಹೊರಟಿದ್ದರು.

ಮಂಗಳವಾರ ಬೆಳಗ್ಗೆ ಪತ್ನಿ ಲಕ್ಷಿ÷್ಮÃ ಅವರು ಊರಿಗೆ ಬಂದಿದ್ದು, ಅದೇ ರಾತ್ರಿ ನಡೆದ ಅಪಘಾತದಲ್ಲಿ ಯೋಧ ಮಹೇಶ್ ಸಾವನ್ನಪ್ಪಿದ್ದಾರೆ. ಮೃತ ಯೋಧನಿಗೆ ತಾಯಿ, ಓರ್ವ ಸಹೋದರ ಹಾಗೂ ಓರ್ವ ಸಹೋದರಿ ಇದ್ದಾರೆ. ವಾಹನ ಪ್ರಪಾತಕ್ಕೆ ಬಿದ್ದು ಮಹೇಶ್ ಸಾವನ್ನಪ್ಪಿರುವ ಸುದ್ದಿಯನ್ನು ಆತನ ಜೊತೆ ಕೆಲಸ ಮಾಡುತ್ತಿದ್ದ ಅಥಣಿಯ ಸ್ನೇಹಿತನಿಂದ ಇವರಿಗೆ ಸುದ್ದಿ ತಲುಪಿದೆ. ಮಂಗಳವಾರ ವಾಹನ ಅಪಘಾತವಾದ ಸುದ್ದಿ ಗೊತ್ತಾಗಿತ್ತಾದರೂ ಈ ಬಗ್ಗೆ ಮಾಹಿತಿ ಪಡೆಯಲು ಕುಟುಂಬದವರು ಮುಂದಾದರೂ ಅವರಿಗೆ ಖಚಿತ ಮಾಹಿತಿ ಸಿಕ್ಕಿರಲಿಲ್ಲ. ರಜೆಯ ಮೇಲೆ ಅಥಣಿಗೆ ಬಂದಿದ್ದ ಮಹೇಶ್ ಸ್ನೇಹಿತ ಬುಧವಾರ ಬೆಳಗ್ಗೆ ಮಹಾಲಿಂಗಪುರಕ್ಕೆ ಬಂದು ಮಹೇಶ್ ಇನ್ನಿಲ್ಲ ಎನ್ನುವ ಮಾಹಿತಿ ನೀಡಿದರು ಎಂದು ಯೋಧನ ಚಿಕ್ಕಪ್ಪ ಮಹಾಲಿಂಗಪ್ಪ ಮರಿಗೊಂಡ ವಿಜಯವಾಣಿಗೆ ತಿಳಿಸಿದರು.

ಮೃತ ಯೋಧನ ಮರಣೋತ್ತರ ಪರೀಕ್ಷೆ ಬುಧವಾರ ನಡೆಯಲಿದ್ದು, ಸಂಜೆ ಹೊತ್ತಿಗೆ ಜಮ್ಮು ಕಾಶ್ಮೀರದಿಂದ ಬೆಳಗಾವಿಗೆ ವಿಮಾನದ ಮೂಲಕ ಪಾರ್ಥಿವ ಶರೀರವೂ ಬೆಳಗಾವಿಗೆ ಬರಲಿದ್ದು, ಅಲ್ಲಿಂದ ರಸ್ತೆ ಮಾರ್ಗವಾಗಿ ಗುರುವಾರ ಬೆಳಗ್ಗೆ ಅಥವಾ ಮಧ್ಯಾಹ್ನದ ಹೊತ್ತಿಗೆ ಮಹಾಲಿಂಗಪುರಕ್ಕೆ ಬರಲಿದೆ. ಇಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net