ಹುಂಡಿ ಹಣ ಕದ್ದಿದ್ದ ನಾಲ್ವರ ಸೆರೆ

Crime news
Published on

ಚಿಂಚೋಳಿ: ಕೊಳ್ಳೂರ ಹೊರವಲಯದ ಪಾರ್ವತಿ ಪರಮೇಶ್ವರ ದೇವಸ್ಥಾನದ ಬೀಗ ಮುರಿದು ಹುಂಡಿಯಲ್ಲಿದ್ದ ಹಣ ದೋಚಿದ ಪ್ರಕರಣಕ್ಕೆ ಸಂಬAಧಿಸಿದAತೆ ಮೂವರು ಅಪ್ರಾಪ್ತರು ಸೇರಿ ನಾಲ್ವರನ್ನು ಚಿಂಚೋಳಿ ಪೊಲೀಸರು ಬಂಧಿಸಿದ್ದಾರೆ. ಕನಕಪುರದ ಸತೀಶ ತಳವಾರ(೨೦)ನನ್ನು ಅರೆಸ್ಟ್ ಮಾಡಿದ್ದು, ಅಪ್ರಾಪ್ತರನ್ನು ಬಾಲ ನ್ಯಾಯಮಂಡಳಿ ಮುಂದೆ ಹಾಜರುಪಡಿಸಲಾಗಿದೆ. ಕೊಳ್ಳೂರ ದೇಗುಲದಲ್ಲಿ ಜು.೯ರಂದು ಹುಂಡಿ ಒಡೆದು ೪೦ ಸಾವಿರ ರೂ. ಕಳ್ಳತನವಾಗಿತ್ತು. ಅರ್ಚಕ ಬಸಯ್ಯ ಮಠಪತಿ ದೂರಿನ ಮೇರೆಗೆ ಡಿವೈಎಸ್‌ಪಿ ಕೆ.ಬಸವರಾಜ, ಸಿಪಿಐ ಅಂಬರಾಯ ಕಾಮನಮನಿ ಮಾರ್ಗದರ್ಶನದಲ್ಲಿ ಪಿಎಸ್‌ಐ ಮಂಜುನಾಥರೆಡ್ಡಿ ನೇತೃತ್ವದಲ್ಲಿ ಸಿಬ್ಬಂದಿ ತನಿಖೆ ನಡೆಸಿ ಗುರುವಾರ ಆರೋಪಿಗಳನ್ನು ಬಂಧಿಸಿ ೪೦ ಸಾವಿರ ರೂ. ವಶಪಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net