ಹಿರೇಗುಳಬಾಳ ಗ್ರಾಮ ಪಂಚಾಯಿತಿ ಬಿಜೆಪಿ ಮಡಿಲಿಗೆ

bkt-4-6
ಬಾಗಲಕೋಟೆ ತಾಲೂಕಿನ ಹಿರೇಗುಳಬಾಳ ಪಂಚಾಯಿತಿ ನೂತನ ಅಧ್ಯಕ್ಷೆ ಶನಾಬಾಯಿ ಲಮಾಣಿ, ಹಾಗೂ ಉಪಾಧ್ಯಕ್ಷೆ ಅನುಶಾಭಾಯಿ ಲಮಾಣಿಗೆ ಹರ್ಷ ವ್ಯಕ್ತಪಡಿಸಿದರು.
Published on

ಬಾಗಲಕೋಟೆ: ಹಿರೇಗುಳಬಾಳ ಗ್ರಾಪಂ ಅಧ್ಯಕ್ಷರಾಗಿ ಬಿಜೆಪಿಯ ಶನಾಬಾಯಿ ಲಮಾಣಿ, ಉಪಾಧ್ಯಕ್ಷರಾಗಿ ಅನುಶಾಬಾಯಿ ಲಮಾಣಿ ಆಯ್ಕೆಯಾಗಿದ್ದಾರೆ.

ಬಾಗಲಕೋಟೆ ತಾಲೂಕಿನ ಹಿರೇಗುಳಬಾಳ ಗ್ರಾಮ ಪಂಚಾಯತಿಯ ಅದ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಬುಧವಾರ ಜರುಗಿತು, ೧೨ ಸದಸ್ಯರುಳ್ಳ ಗ್ರಾಮ ಪಂಚಾಯಿತಿಯ ನೂತನ ಅದ್ಯಕ್ಷರಾಗಿ ಶನಾಬಾಯಿ ಸಿದ್ದಪ್ಪ ಲಮಾಣಿ, ಉಪಾಧ್ಯಕ್ಷರಾಗಿ ಅನುಶಾಬಾಯಿ ಗಂಗಾರಾಮ ಲಮಾಣಿ ಅವಿರೋಧವಾಗಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಾಜು ಮುದೇನುರ, ಗ್ರಾಮೀಣ ಅಧ್ಯಕ್ಷ ಸುರೇಶ ಕೊಣ್ಣುರ, ನಗರಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಪ್ರಧಾನ ಕಾರ್ಯದರ್ಶಿ ಮಲ್ಲೇಶ ವಿಜಾಪುರ, ಕಲ್ಲಪ್ಪ ಭಗವತಿ, ಮುಖಂಡರಾದ ಸೋಮಸಿಂಗ ಲಮಾಣಿ, ನಾಗರಾಜ ನಾರಾಯಣಕರ, ಹನಮಂತ ಚಿಮ್ಮಲಗಿ, ಸಿದ್ದು ಲೋಕಾಪುರ, ಗಿರೀಶ ರಾಥೋಡ, ಶಕ್ತಿ ನಾಯಕ್,ಮಲ್ಲೇಶ ಲಮಾಣಿ,ಹನಮಂತ ಮೇಟಿ, ಶಿವಾಜಿ ಚವ್ಹಾಣ, ಈರಮ್ಮ ಕೋಟಿ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು,ಗ್ರಾಮದ ಹಿರಿಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net