ಹಿರಿಯ ಪತ್ರಿಕಾ ಛಾಯಾಗ್ರಾಹರಿಗೆ ಸನ್ಮಾನ

Published on

ಹಾಸನ: ವಿಶ್ವ ಛಾಯಾಗ್ರಹಕರ ದಿನಾಚರಣೆ ಅಂಗವಾಗಿ ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ ಆಶ್ರಯದಲ್ಲಿ ಭಾನುವಾರ ನಗರದ ಗೆಂಡೆಕಟ್ಟೆ ಅರಣ್ಯಧಾಮ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕರನ್ನು ಸನ್ಮಾನಿಸಲಾಯಿತು.

ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ ಅಧ್ಯಕ್ಷ ಬಿ.ಕೆ.ಗಂಗಾಧರ್ ಮಾತನಾಡಿ, ಹಲವು ವರ್ಷಗಳ ಕಾಲ ಎಲೆಮರೆ ಕಾಯಿಯಂತೆ ಕೆಲಸ ನಿರ್ವಹಿಸುವ ಪತ್ರಿಕಾ ಛಾಯಾಗ್ರಾಹಕರನ್ನು ಗೌರವಿಸಲಾಗುತ್ತಿದೆ. ಬದುಕಿನ ಅತ್ಯಮೂಲ್ಯ ಕ್ಷಣಗಳನ್ನು ಛಾಯಾಗ್ರಾಹಕರು ಸೆರೆ ಹಿಡಿದು ನೆನಪಿನಲ್ಲಿ ಉಳಿಯುವಂತೆ ಮಾಡುತ್ತಿದ್ದಾರೆ ಎಂದರು.

ಹಿರಿಯ ಛಾಯಾಗ್ರಾಹಕ ಅತೀಖ್ ಉರ್ ರೆಹಮನ್ ಮಾತನಾಡಿ, ಬೆಳಕು ಮತ್ತು ಕನ್ನಡಿ ಮಧ್ಯೆ ಬ್ಯಾಕ್ ಆ್ಯಂಡ್ ವೈಟ್ ಛಾಯಾಗ್ರಹಣ ಆರಂಭವಾಯಿತು. ಅಂದಿನಿಂದ ಈವರೆಗೆ ಸಾಕಷ್ಟು ಬದಲಾವಣೆಗಳಾಗಿವೆ. ಈಗ ಡಿಜಿಟಲ್ ಕಾಲಘಟ್ಟದಲ್ಲಿದ್ದೇವೆ. ಈಗ ಕೈ ಬೆರಳ ತುದಿಯಲ್ಲೇ ಫೋಟೋ ದೊರಕುತ್ತಿದೆ. ಯಾವುದೇ ಘಟನೆಗೆ ಸಾಕ್ಷಿಯಾಗಿ ಉಳಿದುಕೊಳ್ಳಲು ಫೋಟೋ ಸಹಕಾರಿಯಾಗಿದೆ ಎಂದರು.

ಹಿರಿಯ ಛಾಯಾಗ್ರಾಹಕರಾದ ಅತೀಖ್ ಉರ್ ರೆಹಮನ್, ನಟರಾಜ್, ಪ್ರಕಾಶ್, ಪಿ.ಎ.ಶ್ರೀನಿವಾಸ್, ಶರತ್ ಅವರನ್ನು ಸನ್ಮಾನಿಸಲಾಯಿತು. ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ ಕಾರ್ಯದರ್ಶಿ ಪಿ.ರವಿಕುಮಾರ್, ಖಜಾಂಚಿ ಎಚ್.ಕೆ. ದಿಲೀಪ್ ಕುಮಾರ್, ಎಸ್. ಯೋಗೇಶ್, ಡಾ.ಬಿ.ವಿಕ್ರಂ, ಹರ್ಷ, ಗಿರೀಶ್, ನವೀನ್, ಹರೀಶ್, ನಿತ್ಯಾನಂದ್, ಅನಿಲ್ ರೈ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net