ಹಿರಿಯ ನಾಗರಿಕರ ರಕ್ಷಣೆಗೆ ಆದ್ಯತೆ ನೀಡಿ

bkt-16-3
ಬಾಗಲಕೋಟೆ ಜಿಲ್ಲಾಡಳಿತ ಭವನ ಎದುರು ಹಿರಿಯ ನಾಗರಿಕರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ವಿ.ಜಿ.ಮಠಪತಿ, ಜಿ.ಎನ್.ಪಾಟೀಲ, ಡಾ.ಸಿ.ಎಸ್.ಪಾಟೀಲ, ಶ್ರೀಶೈಲ ಕರಿಶಂಕರಿ ಸೇರಿದಂತೆ ಇತರರು ಇದ್ದರು.
Published on

ಬಾಗಲಕೋಟೆ: ದೇಶದಲ್ಲಿ ಹಿರಿಯ ನಾಗರಿಕರ ಮೇಲೆ ದೌರ್ಜನ್ಯ ಹೆಚ್ಚುತ್ತಿದ್ದು ಕೂಡಲೇ ಅದನ್ನು ತಡೆಗಟ್ಟಲು ಕಾನೂನಿಗೆ ಬಲಿಷ್ಠ ಶಕ್ತಿ ನೀಡಬೇಕು ಎಂದು ಆಗ್ರಹಿಸಿ ಹಿರಿಯ ನಾಗರಿಕರು ಬಾಗಲಕೋಟೆ ಜಿಲ್ಲಾಡಳಿತ ಭವನ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಮೆರವಣಿಗೆ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಹಿರಿಯ ನಾಗರಿಕರು, ನಮಗೆ ರಕ್ಷಣೆ ಇಲ್ಲದಂತಾಗಿದೆ. ಜೀವಿತಾ ಅವಽಯ ಕೊನೆ ಕ್ಷಣದಲ್ಲಿ ನೆಮ್ಮದಿ ಬದುಕು ಕಾಣಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.

ಈ ಸಂದರ್ಭದಲ್ಲಿ ಮಹಾಬಳೇಶ್ವರ ಗುಡಗುಂಟಿ ಮಾತನಾಡಿ, ದೇಶದಲ್ಲಿ ದಿನದಿಂದ ದಿನಕ್ಕೆ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ವಿಷಯ ಕಳವಳಕಾರಿಯಾಗಿದ್ದು, ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ದೌರ್ಜನ್ಯಗಳು, ಕೌಟು ಂಬಿಕವಾಗಿ ಸಾರ್ವಜನಿಕ ವಂಚನೆ, ಮೋಸದಿಂದಾಗಿ ನಡೆಯುತ್ತಿದ್ದು, ಇವುಗಳನ್ನು ತಡೆಗಟ್ಟಲು ಸರ್ಕಾರ ಕೆಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗÀ್ರಹಿಸಿದರು.

ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಕಾನೂನು-೨೦೦೭ ರಲ್ಲಿ ಸೂಚಿತ ಕೆಲವು ಕ್ರಮಗಳು ಸರ್ಕಾರ ೧೫ ವರ್ಷ ಕಳೆದರೂ ಅನುಷ್ಠಾನಗೊಳಿಸಿಲ್ಲದಿರುವುದು ವಿಷಾದನೀಯ ಸಂಗತಿಯಾಗಿದೆ. ಇದು ಹಿರಿಯ ನಾಗರಿಕರ ಸರ್ಕಾರದ ನೀತಿಯನ್ನು ಮರೆತಿರುವ ಸಂಗತಿಯಾಗಿದೆ ಎಂದು ಆರೋಪಿಸಿದರು.

ರಾಷ್ಟçದ ಆರ್ಥಿಕ ಸಂಸ್ಥೆಯಾದ ಸಾಕ್ಷರತಾ ಅರ್ಥಕ್ರಾಂತಿ ಮಂಚ, ಪೂನಾ ಇವರು ರಾಷ್ಟçದ ೨೦ ಕೋಟಿ ಹಿರಿಯ ನಾಗರಿಕರ ಸಂರಕ್ಷಣೆ, ಸೌಲಭ್ಯ ಹಾಗೂ ದೌರ್ಜನ್ಯಗಳನ್ನು ತಡೆ ಹಿಡಿಯಲು ಕೇಂದ್ರ ಸರ್ಕಾರಕ್ಕೆ ಮೂರು ಅಂಶಗಳ ವರದಿ ನೀಡಿದ್ದು, ಈ ವರದಿ ಅನುಷ್ಠಾನದಿಂದ ಹಿರಿಯ ನಾಗರಿಕರು ಸುಖವಾಗಿರಲು ಹಾಗೂ ದೇಶದ ಅಭಿವೃದ್ಧಿಗಾಗಿ ಬೆಂಬಲ ನೀಡುವ ಕಾರ್ಯಕ್ರಮವಾಗಿದೆ. ಕಾರಣ ಆರ್ಥಿಕ ಕ್ರಾಂತಿ ನೀಡಿರುವ ಮೂರು ಅಂಶಗಳನ್ನು ತಕ್ಷಣ ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರಾಷ್ಟçದ ಎಲ್ಲ ಹಿರಿಯ ನಾಗರಿಕರು ರಾಷ್ಟçದ ಸಂಪತ್ತು ಎಂದು ಘೋಷಣೆ ಮಾಡಬೇಕು. ಆರ್ಥಿಕವಾಗಿ ದುರ್ಬಲರಾದ ಎಲ್ಲ ಹಿರಿಯ ನಾಗರಿಕರಿಗೆ ಮಾಸಿಕ ೧೦,೦೦೦ ವೃದ್ಧಾಪ್ಯವೇತನ ನೀಡಬೇಕು. ಕೇಂದ್ರ ಹಾಗೂ ಎಲ್ಲ ರಾಜ್ಯ ಸರ್ಕಾರಗಳಲ್ಲಿ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಸಚಿವಾಲಯ ರಚಿಸಿ ಸಚಿವರನ್ನು ನೇಮಿಸಬೇಕು, ತಡೆ ಹಿಡಿದಿರುವ ಹಿರಿಯ ನಾಗರಿಕರ ರೇಲ್ವೆ ಪ್ರಯಾಣ ರಿಯಾಯಿತಿ ತಕ್ಷಣ ಆರಂಭಿಸಬೇಕು. ಹಿರಿಯ ನಾಗರಿಕರ ಆಯುಷ್ಮಾನ ಭಾರತ ಆರೋಗ್ಯ ವಿಮೆ ಕಾರ್ಡ್ ಕರ್ನಾಟಕ ರಾಜ್ಯ ನಿಷ್ಕಿçಯವಾಗಿದ್ದು ಇದನ್ನು ತಕ್ಷಣ ಸರಿಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಿ.ಜಿ.ಮಠಪತಿ, ಜಿ.ಎನ್.ಪಾಟೀಲ, ಡಾ.ಸಿ.ಎಸ್.ಪಾಟೀಲ, ಶ್ರೀಶೈಲ ಕರಿಶಂಕರಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net