

ಬಾಗಲಕೋಟೆ: ಕಿತ್ತೂರು ರಾಣಿ ಚನ್ನಮ್ಮ ನಾಡುಕಂಡ ಅಪರೂಪದ ಸ್ವಾತಂತ್ರ‍್ಯ ಹೋರಾಟಗಾರ್ತಿ. ನಿಜಕ್ಕೂ ಅವರ ಕಾರ್ಯ ಸ್ಮರಣೀಯವಾಗಿದೆ ಎಂದು ಡಾ.ಶೇಖರ ಮಾನೆ ಹೇಳಿದರು.
ನಗರದ ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಅವರ ಜನಸಂಪರ್ಕ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮನವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬ್ರಿಟಿಷರ ವಿರುದ್ಧ ಮೊದಲನೇ ಯುದ್ಧದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಗೆಲುವು ಸಾಽಸಲಿಕ್ಕೆ ಅವರ ವೀರ ಸೇನಾನಿಗಳಾದ ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ ,ಸರ್ದಾರ ಅವರಾದಿ, ಚೆನ್ನಬಸಪ್ಪ ಹಾಗೂ ಇನ್ನೂ ಅನೇಕ ವೀರ ಯೋಧರು ಹೋರಾಟವೇ ಕಾರಣ. ಎರಡನೇ ಯುದ್ಧದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಸೋಲಲು ಅವರ ಸೈನ್ಯದ ಸೋಲಿಗೆ ಅವರ ಹಿತ ಶತ್ರುಗಳೇ ಕಾರಣರಾಗಿದ್ದು, ದುರ್ದೈವದ ಸಂಗತಿ ಎಂದರು.
ಇದೇ ರೀತಿ ಇವತ್ತಿನ ಕಾಲಮಾನದಲ್ಲಿ ಜಾತಿ ಜಾತಿಗಳಲ್ಲಿ ನಾವು ಹೊಡೆದಾಡಿಕೊಳ್ಳುತ್ತಾ ಇದ್ದಲ್ಲಿ ರಾಷ್ಟ್ರದ ರಕ್ಷಣೆ ಮತ್ತು ಹಿಂದೂ ಧರ್ಮದ ರಕ್ಷಣೆ ಅಸಾಧ್ಯ. ಆದ ಕಾರಣ ಜಾತಿ ಜಾತಿಗಳನ್ನು ಮರೆತು ನಾವೆಲ್ಲರೂ ಹಿಂದೂ ಎನ್ನುವ ಭಾವನೆ ನಮ್ಮೆಲ್ಲರಲ್ಲಿ ಮೂಡಬೇಕು ಎಂದು ಕರೆ ನೀಡಿದರು.
ವಿರುಪಾಕ್ಷ ಅಮೃತಕರ ಮಾತನಾಡಿ, ಸೂರ್ಯ ಮುಳುಗದ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸವಾಲ್ ಎಸೆದು ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಸಿಂಹಿನಿಯಂತೆ ರಣಚಂಡಿಯ ಅವತಾರದ ಪ್ರತೀಕವಾಗಿ ಬ್ರಿಟಿಷ ಅಽಕಾರಿ ಮತ್ತು ಸೈನಿಕರ ರುಂಡ ಮುಂಡಗಳನ್ನು ಚಂಡಾಡಿ ವಿಜಯ ದುಂದುಬಿಯೊಂದಿಗೆ ದಿಟ್ಟತನಕ್ಕೆ ಹೋರಾಟಕ್ಕೆ ಮತ್ತೊಂದು ಹೆಸರೇ ವೀರರಾಣಿ ಕಿತ್ತೂರು ಚೆನ್ನಮ್ಮ ಹಾಗೂ ನಾರಿ ಶಕ್ತಿಯ ಅನಾವರಣಕ್ಕೆ ಮತ್ತೊಂದು ಹೆಸರೇ ಚೆನ್ನಮ್ಮಾಜಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಂಭುಗೌಡ ಪಾಟೀಲ, ಕುಮಾರ ಗಿರಿಜಾ, ರಾಜು ಚಿತ್ತವಾಡಗಿ, ಮಲ್ಲಿಕಾರ್ಜುನ ಸುರಪುರ, ಕಳಕಪ್ಪ ಬಾದವಾಡಗಿ, ಸಂಗನಗೌಡ ಗೌಡರ, ರಮೇಶ ಮುರಟಗಿ, ಯಲ್ಲಪ್ಪ ಅಂಬಿಗೇರ, ಶೈಲು ಅಂಗಡಿ, ಅನಂತ ಮಳಗಿ, ವಿನಾಯಕ ದೇಸಾಯಿ, ರಾಘುವೇಂದ್ರ ನಾಗೂರ, ಲಕ್ಷ÷್ಮಣಗೌಡ ಪಾಟೀಲ, ಬಸವರಾಜ ಮಾದರ, ಗುರುಬಸಯ್ಯ ಪೂಜಾರಿ, ಗಣೇಶ ದುz್ದÁನೆ, ಡಾ.ಸುಽÃರ ಜÁಧವ, ಡಾ.ಕೃಷ್ಣ ಚೌಧರಿ, ಯಮನಪ್ಪ ಮಡ್ಡಿಕೇರಿ, ಮುತ್ತಪ್ಪ ಪೂಜÁರಿ ಆರ್.ಆರ್.ಪಾಟೀಲ, ವಿರೂಪಾಕ್ಷ ಬೆನ್ನಾಳ, ಗೋಪಾಲ ಕಟ್ಟಿಮನಿ ಇತರರು ಉಪಸ್ಥಿತರಿದ್ದರು.