ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರ ಪ್ರತಿಭಟನೆ

hindu
Published on

ಕಲಬುರಗಿ: ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣ ಮರು ತನಿಖೆ ಮಾಡಬೇಕು, ಹಿಂದೂ ಹೋರಾಟಗಾರ ಕೆರೆಹಳ್ಳಿ ಅವರನ್ನು ಬಿಡಗುಡೆಗೊಳಿಸಬೇಕು ಎಂದು ಆಗ್ರಹಿಸಿ ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಸೌಜನ್ಯ ಕೊಲೆ ಪ್ರಕರಣ ನಡೆದು ೧೧ ವರ್ಷ ಗತಿಸಿವೆ. ಈವರೆಗೂ ಆರೋಪಿಗಳನ್ನು ಬಂಧಿಸಿಲ್ಲ. ಮರು ತನಿಖೆ ಮಾಡಿ ಆರೋಪಿಗಳಿಗೆ ಉಗ್ರ ಶಿಕ್ಷೆ ನೀಡಬೇಕು ಮತ್ತು ಸರ್ಕಾರದಿಂದ ಸೌಜನ್ಯ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸಿದರು.
ಬೆಂಗಳೂರಿನ ರಾಷ್ಟç ರಕ್ಷಣಾ ಪಡೆಯ ಹೋರಾಟಗಾರ ಪುನಿತ್ ಕೆರೆಹಳ್ಳಿ ಅವರನ್ನು ಗೂಂಡಾ ಕಾಯಿದೆ ಅಡಿ ಬಂಧಿಸಿರುವುದು ಖಂಡನೀಯ. ತಕ್ಷಣ ಇವರನ್ನು ಬಿಡುಗಡೆಗೊಳಿಸಬೇಕು. ರಾಜ್ಯದಲ್ಲಿ ಹಿಂದೂ ಹೋರಾಟಗಾರರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.
ರಾಜ್ಯಪಾಲರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಸಲ್ಲಿಸಿದರು. ಸಂಘಟನೆ ಅಧ್ಯಕ್ಷ ಲಕ್ಷಿö್ಮÃಕಾಂತ ಸ್ವಾದಿ, ಶಶಿಕಾಂತ ದೀಕ್ಷಿತ್, ಸಂತೋಷ ಸೋನಾವಣೆ, ಸುನಿಲ್ ರಾಠೋಡ್, ದಶರಥ ಇಗೊಳೆ, ಶಂಕರ್ ಚೋಕಾ, ಸಂಗು ಕಾಳನೂರ್, ಹಣಮಂತ ಪೂಜಾರಿ, ಉದಯ್ ಸುಲ್ತಾನ್‌ಪೂರ್, ಸಂಜನಾ ಮಂಗಳಮುಖಿ, ಸೋಮು ತಾಳೀಕೋಟೆ, ಪ್ರಕಾಶ ವಾಘ್ಮೊರೆ, ಚಿದಾನಂದ್ ಸ್ವಾಮಿ, ಸುನೀಲ್ ಶಿರ್ಕೆ, ಮಹಾದೇವ್ ಕೋಟನೂರ್, ವಿಕಾಸ ಸಗರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net