

ಬಾಗಲಕೋಟೆ: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಭಾರತೀಯ ಜನತಾ ಪಕ್ಷ ಬಾಗಲಕೋಟೆ ವಿಧಾನ ಸಭಾ ಮತಕ್ಷೇತ್ರದ ನಗರ ಮಂಡಲ ವತಿಯಂದ ನಗರದ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಶಿವಾನಂದ ಜಿನ್‌ನಲ್ಲಿರುವ ಬಿಜೆಪಿ ಕಾರ್ಯಾಲಯದಿಂದ ಪಾದಯಾತ್ರೆ ಮೂಲಕ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಮಾನವಸರಪಳಿ ನಿರ್ಮಿಸಿದ ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಬೆಳಗಾವಿ ಪ್ರಭಾರಿ ಬಸವರಾಜ ಯಂಕAಚಿ ಮಾತನಾಡಿ, ಮಂಗಳೂರಿನಲ್ಲಿ ಗುರುವಾರ ರಾತ್ರಿ ಜನಸಾಂದ್ರತೆ ಇರುವ ಸ್ಥಳದಲ್ಲಿಯೇ ಹಿಂದೂ ಕಾರ್ಯಕರ್ತ ಬರ್ಬರವಾಗಿ ಕೊಲೆ ಮಾಡಿದ್ದು ನಾಚಿಕೆಗೇಡಿನ ಸಂಗತಿ ಎಂದು ತಿಳಿಸಿದರು.
ಜಿ¯್ಲÁ ವಕ್ತಾರ ಸತ್ಯನಾರಾಯಣ ಹೇಮಾದ್ರಿ ಮಾತನಾಡಿ, ಹಿಂದೂಗಳ ಮೇಲೆ ನೀರತಂತರವಾಗಿ ನಡೆಯುತ್ತಿರುವ ಹ¯್ಲೆಗಳಿಗೆ ಸರ್ಕಾರವೇ ನೇರ ಹೊಣೆ ಎಂದರು.
ಮುಖಂಡರಾದ ಗುಂಡುರಾವ ಶಿಂಧೆ, ಡಾ.ಎಂ.ಎಸ್.ದಡ್ಡೆನ್ನವರ, ರಾಜು ರೇವಣಕರ, ಯಲ್ಲಪ್ಪ ನಾರಾಯಣಿ, ಸಾಗರ ಬಂಡಿ, ಬಸವರಾಜ ಅವರಾದಿ, ರಾಜು ಶಿಂತ್ರೆ, ಶಂಕರ ಗಲಗ, ಅಶೋಕ ಪವಾರ, ದೂಳಪ್ಪ ಕೋಪ್ಪದ, ರವಿ ನಾಯಕ, ಕಾಂತು ಖಾತೆದಾರ, ಆನಂದ ಕೋಟಗಿ, ಕಿರಣ ಭಾಗವಾಡಿ, ರಜತ ದಾವಗೇರಿ, ಹೊನ್ನಪ್ಪ ಅಂಬಿಗೇರ, ಶಿವು ಬೇವೂರ, ಸುರೇಶ ಮಜ್ಜಿಗಿ ಇದ್ದರು.