ಹಿಂದು ಸಮಾಜ ಜಾಗೃತಗೊಳ್ಳಬೇಕು.

bkt-4-1
ಬಾಗಲಕೋಟೆ ನಗರದ ರೋಟರಿ ವೃತ್ತದ ಬಳಿ ದೀಪಂ ಕಾಲೋನಿಯಲ್ಲಿ ಸೇವಾ ಭಾರತಿ ಟ್ರಸ್ಟ್ ಅಡಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಆಶ್ರಧಾಮ ಹಾಗೂ ಆರ್‌ಎಸ್‌ಎಸ್ ಕಾರ್ಯಾಲಯ ಸಂಘದ ಮಿತ್ರ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟಿçÃಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ, ಪ್ರಭು ಸ್ವಾಮೀಜಿ ದೀಪ ಬೆಳಗಿಸಿದರು. ಆರ್‌ಎಸ್‌ಎಸ್ ಪ್ರಮುಖರಾದ ರಘು ಅಕಮುಂಜಿ, ಚಂದ್ರಶೇಖರ ದೊಡ್ಡಮನಿ ಇತರರು ಇದ್ದರು.
Published on

ಬಾಗಲಕೋಟೆ: ಹಿಂದು ಸಮಾಜ ಜಾಗೃತಗೊಳ್ಳಬೇಕು. ದೇಶ ಭಕ್ತಿ ಇಮ್ಮಡಿಗೊಳ್ಳಬೇಕು. ಪ್ರತಿ ಮನೆ, ಮನದಲ್ಲಿ ಅಸ್ಪÈಶ್ಯತೆ ಹೋಗಲಾಡಿಸುವ ನಿಟ್ಟಿನಲ್ಲಿ ರಾಷ್ಟಿçÃಯ ಸ್ವಯಂ ಸೇವಕ ಸಂಘ ಶ್ರಮಿಸುತ್ತಿದೆ ಎಂದು ರಾಷ್ಟಿçÃಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಹೇಳಿದರು.

ನಗರದ ರೋಟರಿ ವೃತ್ತದ ಬಳಿ ದೀಪಂ ಕಾಲೋನಿಯಲ್ಲಿ ಸೇವಾ ಭಾರತಿ ಟ್ರಸ್ಟ್ ಅಡಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಆಶ್ರಧಾಮ ಹಾಗೂ ಆರ್‌ಎಸ್‌ಎಸ್ ಕಾರ್ಯಾಲಯ ಸಂಘದ ಮಿತ್ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಿಂದು ಸಮಾಜವು ವಿಘಟನೆಯಿಂದ ಕೂಡಿರಬಾರದು. ಸಂಘಟನೆಯಿAದ ಕೂಡಿರಬೇಕು. ಮನೆಯಲ್ಲಿ ಸಮರಸದ ಜೀವನ ಇರಬೇಕು. ಮಾತೃ ಭಾಷೆಯ ಮೇಲೆ ಅಭಿಮಾನ ಹೆಚ್ಚಿಳವಾಗಬೇಕು. ಪ್ಲಾಸ್ಟಿಕ್ ಮುಕ್ತವಾಗಬೇಕು. ಮೀತವಾಗಿ ನೀರ ಬಳಕೆ ಮಾಡಬೇಕು. ಕುಟುಂಬ ವ್ಯವಸ್ಥೆ ಗಟ್ಟಿಯಾಗಬೇಕು. ಆದರ್ಶ ಜೀವನ ನಡೆಸಬೇಕು. ನೀಸರ್ಗ ಉಳಿಸುವ ಕೆಲಸವಾಗಬೇಕು ಅಂತ ಬಯಕೆ ಇಟ್ಟುಕೊಂಡು ಹೆಜ್ಜೆ ಇಡುತ್ತಿದೆ. ಸಮಾಜದಲ್ಲಿ ಅನೇಕ ಬದಲಾವಣೆ ಕಾರಣವಾಗಿದೆ ಎಂದರು.

ಚರಂತಿಮಠದ ಪ್ರಭು ಸ್ವಾಮೀಜಿ ಮಾತನಾಡಿ, ಸಂಘವು ನೊರೆಂಟು ಸವಾಲು, ಸಂಕಟ ಎದುರಿಸಿ ಬೆಳೆದು ನಿಂತಿದೆ. ಶತಮಾನ ಇತಿಹಾಸ ಹಿಂದೆ ಸಾವಿರಾರು ಜನರ ಶ್ರಮ, ಪರಿಶ್ರಮ, ತ್ಯಾಗ ಅಡಗಿದೆ. ಸಮಾಜದಲ್ಲಿ ಸಂಘವು ಹೇಳಿಕೊಟ್ಟ ಆದರ್ಶ ಪಾಲನೆ, ಪೋಷಣೆ, ಆಚರಣೆ ಮಾಡಬೇಕಿದೆ. ಮನೆಗಳಲ್ಲಿ ಶಾಂತಿ, ನೆಮ್ಮದಿ, ಬಂಧುತ್ವ ನೆಲಸಬೇಕಿದೆ. ಸ್ವದೇಶಿ ಪದ್ಧತಿ ನಿತ್ಯವು ಬದುಕಾಗಬೇಕು. ಎಲ್ಲರು ಸಂಘದ ಆಶಯಕ್ಕೆ ಅನುಗುಣವಾಗಿ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದರು.

ಗುಳೇದಗುಡ್ಡ ಅಮರೇಶ್ವರ ಮಠದ ಡಾ. ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ಹಂಸನೂರಿನ ಶಿವಾನಂದ ಮಠದ ಅಭಿನವ ಬಸವರಾಜೇಂದ್ರ ಸ್ವಾಮೀಜಿ, ಆಳಂದದ ಶ್ರೀಶೈಲ ಶಿವಾಚಾರ್ಯ ಸ್ವಾಮೀಜಿ, ಆರ್‌ಎಸ್‌ಎಸ್ ಪ್ರಮುಖರಾದ ರಘು ಅಕಮುಂಜಿ, ಚಂದ್ರಶೇಖರ ದೊಡ್ಡಮನಿ, ಡಾ.ಸುಭಾಸ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net