ಹಿಂಗಾರು ಬಿತ್ತನೆಗೆ ಹಿನ್ನಡೆ...!

bkt-23-6
Published on

ಸಂತೋಷ ದೇಶಪಾಂಡೆ ಬಾಗಲಕೋಟೆ:

ಕಾಳು ಬಿತ್ತಿ ಆಕಾಶದತ್ತ ಮುಖ ಮಾಡಿ ಪ್ರಾರ್ಥಿಸಿದರು ಹನಿ ನೀರು ಭೂತಾಯಿ ಒಡಲು ಸೇರುವದಿಲ್ಲ. ಕೆಲವೊಂದು ಸಾರಿ ಸಾಕಪ್ಪ ಸಾಕು ಮಳೆಯಪ್ಪ. ಬಿತ್ತನೆಗೆ ಸ್ವಲ್ಪ ಅವಕಾಶ ಕೊಡು ಎನ್ನುವಷ್ಟು ವರುಣ ದೇವನ ಆರ್ಭಟ....!

ಹೌದು, ಆಗಿ ಬರ-ಹೋಗಿ ಬರ ಇದು ಜಿಲ್ಲೆಯ ಅನ್ನದಾತರ ಬದುಕಿನ ಪಯಣದ ಚಿತ್ರಣವಿದು. ಸಾವಿರಾರು ರೂ. ಖರ್ಚು ಮಾಡಿ ಅನ್ನದ ಬಟ್ಟಿಲು ತುಂಬಿಕೊಳ್ಳಲು ಹವಣಿಸುವ ಪರಿಸ್ಥಿತಿ ರೈತರಿಗೆ ಎದುರಾಗುತ್ತದೆ. ಕೆಲವೊಮ್ಮೆ ಮಲೆನಾಡಿನಿಗ್ಗಿಂತಲು ಹೆಚ್ಚು ಮಳೆ ಸುರಿದು ಹೊಲಕ್ಕೆ ಕಾಲಿಡಲಾಗದಷ್ಟು ದುಸ್ಥಿತಿ ನಿರ್ಮಾಣವಾಗುತ್ತದೆ. ಈ ಸಾರಿ ಹಿಂಗಾರು ಮಳೆ ತೀವ್ರ ಸ್ವರೂಪದಲ್ಲಿ ಕಾಡಿ ಅಕ್ಷರಶಃ ಅನ್ನದಾತರನ್ನು ಕಂಗಾಲಿಸಿದೆ.

ಬಿಳಿ ಜೋಳ ಬಿತ್ತನೆಗೆ ಭಾರಿ ಆಘಾತ..

ಈ ಸಾರಿ ಹಿಂಗಾರು ಮಳೆಗಳಲ್ಲಿ ಉತ್ತರಿ ಅಷ್ಟಾಗಿ ಕೈ ಹಿಡಿಯಲಿಲ್ಲ. ಅ.೧೫ ರೊಳಗೆ ಬಿತ್ತನೆಗೆ ಅವಕಾಶವಿತ್ತು, ಚಿತ್ತಿ ಮಳೆ ಭರಪೂರ ಸುರಿದ ಪರಿಣಾಮ ನಿಗಽಯ ಸಮಯಕ್ಕೆ ಬಿಳಿ ಜೋಳ ಬಿತ್ತನೆ ಆಗಿಲ್ಲ. ಚಿತ್ತಿ ಮಳೆಗೆ ಈರುಳ್ಳಿ ಬೆಳೆಗಾರರಿಗೆ ತೀವ್ರ ಸಂಕಷ್ಟ ಎದುರಿಸುವಂತೆ ಮಾಡಿದರೇ ಒಣ ಬೇಸಾಯ ಪದ್ಧತಿ ಮೂಲಕ ಬೆಳೆಯುವ ಬಿಳಿ ಜೋಳ ಬಿತ್ತನೆ ಈ ಸಾರಿ ಭಾರಿ ಆಘಾತ ಸೃಷ್ಟಿಸಿದೆ.

ಜಿಲ್ಲಾ ಕೇಂದ್ರ ಸ್ಥಾನ ಬಾಗಲಕೋಟೆ, ಮುಧೋಳ, ಜಮಖಂಡಿ, ತೇರದಾಳ, ರಬಕವಿ-ಬನಹಟ್ಟಿ, ಬಾದಾಮಿ, ಹುನಗುಂದ, ಇಳಕಲ್ಲ ಹಾಗೂ ಗುಳೇದಗುಡ್ಡ ಸೇರಿದಂತೆ ಎಲ್ಲೆಡೆ ಬಿಳಿ ಜೋಳ ಬಿತ್ತನೆ ಸಾಮಾನ್ಯ. ಈ ಸಾರಿ ೯೮ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿತ್ತು. ಈ ವರೆಗೆ ಕೇವಲ ೩೦ ಸಾವಿರ ಹೆಕ್ಟೇರ್ ಬಿತ್ತನೆ ಮಾತ್ರ ಆಗಿದೆ. ಇನ್ನು ಮುಂದೆ ಬಿತ್ತನೆ ಮಾಡುವವರು ಶೇ.೫೦ ಬೀಜ ಹೆಚ್ಚುವರಿಯಾಗಿ ಬಳಕೆ ಮಾಡಬೇಕು. ಇಲ್ಲವಾದಲ್ಲಿ -Àಸಲು ಕೈಗೆ ಬರುವ ಲಕ್ಷಣ ಕಾಣುವದಿಲ್ಲ.

ಬಿತ್ತನೆ ಪ್ರಮಾಣ ಶೇ.೫೦ ಕುಸಿತ:

ವಾಡಿಕೆಯಂತೆ ಸಪ್ಟೆಂಬರ್ ಕೊನೆವಾರದಿಂದ ಹಿಂಗಾರು ಬಿತ್ತನೆ ಸಿದ್ಧತೆ ಆರಂಭಗೊಳ್ಳುತ್ತದೆ. ಒಂದು ವಾರ ತಡವಾದರು ಅಕ್ಟೋಬರ್ ಮೊದಲ ವಾರದಿಂದ ಬಿತ್ತನೆ ಚುರುಕುಗೊಂಡಿತ್ತು. ನಂತರ ಸುರಿದ ಮಳೆಗೆ ಜೋಳ ಅಷ್ಟೆ ಅಲ್ಲದೆ ಕಡಲೆ, ಅಲಸಂದಿ, ಹುರುಳಿ ಬಿತ್ತನೆಗೂ ಹಿನ್ನಡೆ ಉಂಟಾಗಿದೆ. ಏಕ ದಳ ಧಾನ್ಯ ಹಿಂಗಾರಿ ಜೋಳ ೯೮೦೦೦ ಗುರಿ ಪೈಕಿ ೨೮೭೪೧ ಹೆಕ್ಟೇರ್ ಬಿತ್ತನೆಯಾಗಿದೆ, ಗೋವಿನ ಜೋಳ ೨೪೪೦೦ ಹೆಕ್ಟೇರ್ ಪೈಕಿ ೩೦೬೪ ಹೆಕ್ಟೇರ್, ಗೋಽ ೨೯೦೦೦ ಹೆಕ್ಟೇರ್ ಪೈಕಿ ೧೫೧೧, ದ್ವಿದಳ ಧಾನ್ಯಗಳು: ಕಡಲೆ ೧೦೯೦೦೦ ಹೆಕ್ಟೇರ್ ಪೈಕಿ ೨೮೬೯೦ ಹೆಕ್ಟೇರ್ , ಹುರುಳಿ ೧೦೦೦ ಹೆಕ್ಟೇರ್ ಪೈಕಿ ೧ ಹೆಕ್ಟೇರ್ ಬಿತ್ತನೆಯಾಗಿಲ್ಲ, ಅಲಸಂದಿ ೬೦೦ ಹೆಕ್ಟೇರ್ ಪೈಕಿ ೨೭ ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಇನ್ನು ಏಣೆ ಕಾಳು ಬೆಳೆಗಳು: ಸೂರ್ಯಕಾಂತಿ ೧೦೫೦೦ ಹೆಕ್ಟೇರ್ ಪೈಕಿ ೨೪೭ ಹೆಕ್ಟೇರ್, ಕುಸುಬಿ ೧೦೦೦ ಹೆಕ್ಟೇರ್ ಪೈಕಿ ೨೬೬ ಹೆಕ್ಟೇರ್, ಅಗಸಿ ೧೫೦೦ ಹೆಕ್ಟೇರ್ ಪೈಕಿ ೮೩ ಹೆಕ್ಟೇರ್ ಹಾಗೂ ವಾಣಿಜ್ಯ ಬೆಳೆಗಳು ಹತ್ತಿ ೪೦೦ ಹೆಕ್ಟೇರ್ ಪೈಕಿ ೩೫ ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net