

ಹಾವೇರಿ: ಜಿಲ್ಲೆಯಲ್ಲಿ ಮಂಗಳವಾರ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಮಹಾಸ್ಪೋಟವಾಗಿದ್ದು, ಒಟ್ಟು 200 ಜನರಿಗೆ ಪಾಸಿಟಿವ್ ದೃಢಪಟ್ಟಿದೆ. 17 ಜನ ಗುಣವಾಗಿ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 1,442 ಕರೊನಾ ಪಾಸಿಟಿವ್ ಪ್ರಕರಣಗಳು ದೃಢಗೊಂಡಿವೆ. 675 ಜನ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. 29 ಜನ ಮೃತಪಟ್ಟಿದ್ದಾರೆ. 738 ಪ್ರಕರಣಗಳು ಸಕ್ರಿಯವಾಗಿವೆ.
ಈವರೆಗೆ ಜಿಲ್ಲೆಯಲ್ಲಿ ಒಂದೇ ದಿನ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೋಂಕು ಪತ್ತೆಯಾಗಿರಲಿಲ್ಲ. ಮಂಗಳವಾರದ ಸೋಂಕಿತರಲ್ಲಿ ಹಾವೇರಿ ಜಿಲ್ಲಾಸ್ಪತ್ರೆ, ಬ್ಯಾಡಗಿ ತಾಲೂಕಾಸ್ಪತ್ರೆಯ ತಲಾ ಒಬ್ಬರು ವೈದ್ಯರು, ನಾಲ್ವರು ಪೊಲೀಸರು, ಒಬ್ಬರು ಶಿಕ್ಷಕರಿದ್ದಾರೆ.
ಹಾವೇರಿ ತಾಲೂಕು: ಹಾವನೂರ ಗ್ರಾಮದಲ್ಲಿ 14, ಗುತ್ತಲದಲ್ಲಿ 7, ಹರಳಹಳ್ಳಿ, ಕಂಚಾರಗಟ್ಟಿ 3, ಬಸಾಪುರ ಗ್ರಾಮದಲ್ಲಿ ತಲಾ 3, ಹಾವೇರಿ ಪುರದ ಓಣಿಯಲ್ಲಿ 5, ಪೊಲೀಸ್ ಕ್ವಾರ್ಟರ್ಸ್ನಲ್ಲಿ 2, ಮಕಾನಗಲ್ಲಿ, ಶಿವಾಜಿನಗರ 4ನೇ ಕ್ರಾಸ್, ದ್ಯಾಮವ್ವನಗುಡಿ ಓಣಿ, ಅಶ್ವಿನಿನಗರ, ದಾನೇಶ್ವರಿ ನಗರ, ಜಿಲ್ಲಾಸ್ಪತ್ರೆ ವಸತಿಗೃಹ, ಹೊಸನಗರ, ಶಿವಬಸವ ನಗರ, ಸುಭಾಸ ಸರ್ಕಲ್, ನಾಗೇಂದ್ರನಮಟ್ಟಿ, ಕೆರಿಮತ್ತಿಹಳ್ಳಿ ಪೊಲೀಸ್ ಕ್ವಾರ್ಟರ್ಸ್, ತಾಲೂಕಿನ ಬೂದಗುಂಪಿ, ಕುಳೇನೂರ, ಕಲ್ಲೇದೇವರು, ಮೈಲಾರ, ಅಗಡಿ, ಕೂರಗುಂದ, ಹಂದಿಗನೂರ ಗ್ರಾಮದಲ್ಲಿ ತಲಾ ಒಬ್ಬರಿಗೆ ಸೇರಿ ಒಟ್ಟು 55 ಜನರಿಗೆ ಸೋಂಕು ದೃಢಪಟ್ಟಿದೆ.
ಹಿರೇಕೆರೂರ ತಾಲೂಕು: ಹಿರೇಕೆರೂರ ಪಟ್ಟಣದಲ್ಲಿ 8, ರಟ್ಟಿಹಳ್ಳಿಯಲ್ಲಿ 9, ಮಾಸೂರನಲ್ಲಿ 7, ಮಾವಿನತೋಪದಲ್ಲಿ 3, ಜೋಗಿಹಳ್ಳಿಯಲ್ಲಿ 2, ಶಿರಗಂಬಿಯಲ್ಲಿ 4, ಕೋಡದಲ್ಲಿ 2, ಕಣವಿಸಿದ್ಧಗೇರಿಯಲ್ಲಿ 2, ಹೊಸವೀರಾಪುರ, ಚಿಕ್ಕೇರೂರ, ಮೈದೂರ, ಮಾವಿನಕೊಪ್ಪ, ಹೊಸಳ್ಳಿ, ತಾವರಗಿ, ಬಾಳಂಬೀಡ ಕ್ರಾಸ್, ಚನ್ನಳ್ಳಿ, ಚಿಕ್ಕಮೊರಬ, ಹುಲ್ಲತ್ತಿ, ಮೇದೂರ, ಸೊರಬ ತಾಲೂಕು ನೆಲ್ಲಿಕೊಪ್ಪದ ತಲಾ ಒಬ್ಬರಿಗೆ ಸೇರಿ ಒಟ್ಟು 51ಜನರಿಗೆ ಸೋಂಕು ದೃಢಪಟ್ಟಿದೆ.
ಹಾನಗಲ್ಲ ತಾಲೂಕು: ಹಾನಗಲ್ಲ ಪಟ್ಟಣದಲ್ಲಿ 3, ತಾಲೂಕಿನ ಅರಳೇಶ್ವರದ 5, ಮುಳಥಳ್ಳಿಯ 4, ಶ್ಯಾಡಗುಪ್ಪಿಯ 3, ಅಕ್ಕಿಆಲೂರನ 2, ಗಿರಿಶಿನಕೊಪ್ಪ, ನಿಟಗಿನಕೊಪ್ಪ, ಸುಗ್ನಳ್ಳಿ, ಕಾಡಶೆಟ್ಟಿಹಳ್ಳಿ, ಗೇರುಗುಡ್ಡ ಬಸಾಪುರ, ಹಿರೂರ, ಧ್ಯಾಮನಕೊಪ್ಪ, ಆಡೂರ, ಅಕ್ಕಿವಳ್ಳಿ, ಚಿಕ್ಕೇರಿಹೊಸಳ್ಳಿಯಲ್ಲಿ ತಲಾ ಒಬ್ಬರಿಗೆ ಸೇರಿ ಒಟ್ಟು 27ಜನರಿಗೆ ಸೋಂಕು ತಗುಲಿದೆ.
ರಾಣೆಬೆನ್ನೂರ ತಾಲೂಕು: ರಾಣೆಬೆನ್ನೂರ ನಗರದಲ್ಲಿ 12, ಸುಣಕಲ್ಲಬಿದರಿಯಲ್ಲಿ 5, ಇಟಗಿಯಲ್ಲಿ 2, ಗುಡ್ಡದಆನ್ವೇರಿ, ಬೆನಕನಹಾಳ, ಕುಮಾರಪಟ್ಟಣ, ತುಮ್ಮಿನಕಟ್ಟಿ, ಹಲಗೇರಿಯ ತಲಾ ಒಬ್ಬರಿಗೆ ಸೇರಿ ಒಟ್ಟು 24ಜನರಿಗೆ ಸೋಂಕು ತಗುಲಿದೆ.
ಸವಣೂರ ತಾಲೂಕು: ಸವಣೂರ ಪಟ್ಟಣದಲ್ಲಿ 9, ಯಲವಿಗಿಯಲ್ಲಿ 2, ಹತ್ತಿಮತ್ತೂರ, ಮೆಳ್ಳಾಗಟ್ಟಿ, ಮಂತ್ರೋಡಿ, ಮಂಟಗಣಿ, ಗುಂಡೂರ, ಕುರುಬರಮಲ್ಲೂರ ಗ್ರಾಮದಲ್ಲಿ ತಲಾ ಒಬ್ಬರಿಗೆ ಸೇರಿ 17ಜನರಿಗೆ ಸೋಂಕು ದೃಢಪಟ್ಟಿದೆ.
ಶಿಗ್ಗಾಂವಿ ತಾಲೂಕು: ಶಿಗ್ಗಾಂವಿ ಪಟ್ಟಣದಲ್ಲಿ 4, ಬಂಕಾಪುರದಲ್ಲಿ 6, ಬೆಳಗಲಿ ಗ್ರಾಮದಲ್ಲಿ 2, ಕುನ್ನೂರ, ಹಿರೇಮಲ್ಲೂರ, ಹುಲಗೂರ ಗ್ರಾಮದಲ್ಲಿ ತಲಾ ಒಬ್ಬರಿಗೆ ಸೇರಿ ಒಟ್ಟು 15ಜನರಿಗೆ ಸೋಂಕು ದೃಢಪಟ್ಟಿದೆ.
ಬ್ಯಾಡಗಿ ತಾಲೂಕು: ಬ್ಯಾಡಗಿ ಪಟ್ಟಣದಲ್ಲಿ 2, ಚಿಕ್ಕಬಾಸೂರ, ಬುಡಪನಹಳ್ಳಿಯಲ್ಲಿ ತಲಾ 3, ಮಲ್ಲೂರ 2, ಕಾಗಿನಲೆಯಲ್ಲಿ ಒಬ್ಬರಿಗೆ ಸೇರಿ ಒಟ್ಟು 11ಜನರಿಗೆ ಸೋಂಕು ಖಚಿತವಾಗಿದೆ.
17 ಜನ ಬಿಡುಗಡೆ: ಹಾವೇರಿ ತಾಲೂಕಿನ 8, ಹಿರೇಕೆರೂರ ತಾಲೂಕಿನ 7, ಸವಣೂರ ಹಾಗೂ ರಾಣೆಬೆನ್ನೂರ ತಾಲೂಕಿನ ತಲಾ ಒಬ್ಬರು ಸೇರಿ ಒಟ್ಟು 17 ಜನ ಗುಣವಾಗಿ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಆ. 1ರಿಂದ 4ರವರೆಗೆ 451ಜನರಿಗೆ ಸೋಂಕು ದೃಢಪಟ್ಟಿದೆ. ಜುಲೈ ಅಂತ್ಯದವರೆಗೆ 991ಜನರಲ್ಲಿ ಕಾಣಿಸಿಕೊಂಡಿದ್ದ ಸೋಂಕು ಸರಾಸರಿ ದಿನಕ್ಕೆ 48ಜನರ ಲೆಕ್ಕದಲ್ಲಿ ಕಾಣಿಸಿಕೊಂಡಿತ್ತು. ಆದರೆ ಆಗಸ್ಟ್ನಲ್ಲಿ ದಿನಕ್ಕೆ ಸರಾಸರಿ 110ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಳ್ಳತೊಡಗಿವೆ.
ತಾಲೂಕು
ಹಾವೇರಿ
ಹಿರೇಕೆರೂರ
ಹಾನಗಲ್ಲ
ರಾಣೆಬೆನ್ನೂರ
ಸವಣೂರ
ಶಿಗ್ಗಾಂವಿ
ಬ್ಯಾಡಗಿ
ಒಟ್ಟು
ಇಂದಿನ ಪಾಸಿಟಿವ್
55
51
27
24
17
15
11
200
ಒಟ್ಟು ಪಾಸಿಟಿವ್
344
195
144
300
137
256
66
1,442