

ಹಾವೇರಿ: ಜಿಲ್ಲೆಯಲ್ಲಿ ಭಾನುವಾರ ಇಬ್ಬರು ಖಾಸಗಿ ವೈದ್ಯರು, ಉಪನ್ಯಾಸಕ, ಲ್ಯಾಬ್ ಟೆಕ್ನಿಷಿಯನ್, ಪೊಲೀಸ್, ಇಲೆಕ್ಟ್ರಿಷಿಯನ್ ಸೇರಿ 48 ಜನರಿಗೆ ಸೋಂಕು ದೃಢಪಟ್ಟಿದೆ. ಒಬ್ಬರು ಮೃತಪಟ್ಟಿದ್ದಾರೆ. 6 ಜನ ಗುಣವಾಗಿ ಬಿಡುಗಡೆಗೊಂಡಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 760 ಕ್ಕೇರಿದ್ದು, 278 ಪ್ರಕರಣಗಳು ಸಕ್ರಿಯವಾಗಿವೆ. ಈವರೆಗೆ 458 ಜನರು ಗುಣವಾಗಿ ಬಿಡುಗಡೆಗೊಂಡಿದ್ದಾರೆ. ಒಟ್ಟು 24 ಜನ ಮೃತಪಟ್ಟಿದ್ದಾರೆ. ಬ್ಯಾಡಗಿ ತಾಲೂಕಿನ ನಾಲ್ವರು, ಶಿಗ್ಗಾಂವಿ ಹಾಗೂ ರಾಣೆಬೆನ್ನೂರ ತಾಲೂಕಿನ ತಲಾ ಒಬ್ಬರು ಗುಣವಾಗಿ ಬಿಡುಗಡೆಯಾಗಿದ್ದಾರೆ. ರಾಣೆಬೆನ್ನೂರ ಎಕೆಜಿ ಕಾಲನಿಯ 46 ವರ್ಷದ ಪುರುಷ ಮೃತಪಟ್ಟಿದ್ದಾರೆ.
ಹಾವೇರಿ ತಾಲೂಕು: ವಿದ್ಯಾನಗರದ 25 ವರ್ಷದ ಯುವಕ, ಬಸವೇಶ್ವರನಗರ ಸಿ ಬ್ಲಾಕ್ನ 51 ವರ್ಷದ ಹೊಸಮಠ ಕಾಲೇಜ್ ಅಧ್ಯಾಪಕ, ಎ ಬ್ಲಾಕ್ 13ನೇ ಕ್ರಾಸ್ನ 25 ವರ್ಷದ ಯುವಕ, ವಿದ್ಯಾನಗರದ 42 ವರ್ಷದ ಇಲೆಕ್ಟ್ರಿಕಲ್ ಕೆಲಸಗಾರ, 33 ವರ್ಷದ ಮಹಿಳೆ, ತಾಜನಗರದ ಇಲೆಕ್ಟ್ರಿಕಲ್ ಕೆಲಸಗಾರ 42 ವರ್ಷದ ಪುರುಷ, ಶಿವಾಜಿನಗರದ 4 ವರ್ಷದ ಬಾಲಕಿ ಹಾಗೂ 26 ವರ್ಷದ ಮಹಿಳೆ, ಹಾವೇರಿ ತಾಲೂಕು ಕನವಳ್ಳಿ ಗ್ರಾಮದ 35 ವರ್ಷದ ಮಹಿಳೆ, ನೀರಲಗಿಯ ಪೊಟ್ಟಣ್ಣನವರ ಓಣಿಯ 40 ವರ್ಷದ ಮಹಿಳೆ, ಬಜಾಜ್ ಫೈನಾನ್ಸ್ ಕಂಪನಿಯ ಕೆಲಸಗಾರ ಚಿಕ್ಕಲಿಂಗದಹಳ್ಳಿಯ 23 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ.
ರಾಣೆಬೆನ್ನೂರ ತಾಲೂಕು: ಸಿದ್ದೇಶ್ವರ ನಗರದ 74 ವರ್ಷದ ವೃದ್ಧ, ಉಮಾಶಂಕರ ನಗರದ 28 ವರ್ಷದ ಮಹಿಳೆ, 65 ವರ್ಷದ ವೃದ್ಧ, 31 ವರ್ಷದ ಪುರುಷ, ಸಂಗಮ ವೃತ್ತದ 42 ವರ್ಷದ ಮಹಿಳೆ, ಬೆಂಗಳೂರು ಪ್ರವಾಸ ಹಿನ್ನೆಲೆಯ ವಿಕಾಸನಗರದ 33 ವರ್ಷದ ಪುರುಷ, ಚೌಡೇಶ್ವರಿ ಬಡಾವಣೆಯ 48 ವರ್ಷದ ಪುರುಷ, ರಾಣೆಬೆನ್ನೂರ ತಾಲೂಕು ಅಂತರವಳ್ಳಿ ಗ್ರಾಮದ 60 ವರ್ಷದ ವೃದ್ಧ, ಇಟಗಿ ಗ್ರಾಮದ 40 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಶಿಗ್ಗಾಂವಿ ತಾಲೂಕು: ಗೌಳಿ ಓಣಿಯ 60 ವರ್ಷದ ವೃದ್ಧ, ಸರ್ಕಾರಿ ಆಸ್ಪತ್ರೆ ಲ್ಯಾಬ್ ಟೆಕ್ನಿಷಿಯನ್ 53 ವರ್ಷದ ಪುರುಷ, ಮೆಹಬೂಬ ನಗರದ 52 ವರ್ಷದ ಪುರುಷ, ಬಂಕಾಪುರ ಶಾಬಜಾರನ 37 ವರ್ಷದ ಪುರುಷ, ಕತೀಬ ಪ್ಲಾಟ್ನ ಖಾಸಗಿ ಆಸ್ಪತ್ರೆ ಬಿಎಚ್ಎಂಎಸ್ ವೈದ್ಯೆಯಾಗಿದ್ದ 48 ವರ್ಷದ ಮಹಿಳೆ ಹಾಗೂ 48 ವರ್ಷದ ಬಿಎಎಂಎಸ್ ವೈದ್ಯ, 18 ವರ್ಷದ ಯುವಕ, ಸದಾಶಿವ ಪೇಟೆಯ 65 ವರ್ಷದ ವೃದ್ಧ, ನಾರಾಯಣಪುರದ 45 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಸವಣೂರ ತಾಲೂಕು: ಹಾವಣಗಿ ಪ್ಲಾಟ್ನ 50 ವರ್ಷದ ಪುರುಷ, 65 ವರ್ಷದ ವೃದ್ಧ, ಅಂಬೇಡ್ಕರ್ ನಗರದ ಖಾಸಗಿ ಆಸ್ಪತ್ರೆಯ 28 ವರ್ಷದ ಸ್ಟಾಫ್ ನರ್ಸ್, ಸವಣೂರು ತಾಲೂಕು ಹಿರೇಮುಗದೂರ ಗ್ರಾಮದ 50 ವರ್ಷದ ಪುರುಷ, ಕುಣಿಮೆಳ್ಳಿಹಳ್ಳಿ ಗ್ರಾಮದ 31 ವರ್ಷದ ಮಹಿಳೆ, ಹಿರೇಮುಗದೂರ ಗ್ರಾಮದ 60 ವರ್ಷದ ವೃದ್ಧ, 50 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಹಾನಗಲ್ಲ ತಾಲೂಕು: ರಾಜಧಾನಿ ಕಾಲನಿಯ 31 ವರ್ಷದ ಮಹಿಳೆ, 37 ವರ್ಷದ ಪುರುಷ, ಹಾನಗಲ್ಲ ತಾಲೂಕು ಅಕ್ಕಿಆಲೂರಿನ ಹಾಳೂರ ಓಣಿಯ 38 ವರ್ಷದ ಪುರುಷ, 39 ವರ್ಷದ ಮಹಿಳೆ, 40 ವರ್ಷದ ಪುರುಷ, ಕರಗುದರಿ ಗ್ರಾಮದ 32 ವರ್ಷದ ಪುರುಷನಿಗೆ ಸೋಂಕು ತಗುಲಿದೆ.
ಬ್ಯಾಡಗಿ ಪಟ್ಟಣದ ತಳವಾರ ಓಣಿಯ 45 ವರ್ಷದ ಮಹಿಳೆ, ಭಟ್ಕಳ ಮಂಗಳೂರಿಗೆ ಹೋಗಿ ಬಂದು ಕ್ವಾರಂಟೈನ್ನಲ್ಲಿದ್ದ ಚಿಕ್ಕಬಾಸೂರ ಗ್ರಾಮದ ಗೌಡರ ಓಣಿಯ 42 ವರ್ಷದ ಪುರುಷ, 41 ವರ್ಷದ ಮಹಿಳೆಗೆ ಹಾಗೂ ಹಿರೇಕೆರೂರು ಸರ್ಕಲ್ ಇನ್ಸ್ಪೆಕ್ಟರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚಿಕ್ಕೇರೂರು ಗ್ರಾಮದ 39 ವರ್ಷದ ಪೊಲೀಸನಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ನಿವಾಸದ ಪ್ರದೇಶವನ್ನು ನಿಯಮಾನುಸಾರ ಕಂಟೇನ್ಮೆಂಟ್ ಜೋನ್ ಹಾಗೂ ಬಫರ್ ಜೋನ್ ಆಗಿ ಘೊಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.
ರಾಣೆಬೆನ್ನೂರಿನ ವ್ಯಕ್ತಿ ಸಾವು
ರಾಣೆಬೆನ್ನೂರ ನಗರದ ಏಕೆಜೆ ಕಾಲನಿ ಕೋರ್ಟ್ ಹಿಂಭಾಗದ 43 ವರ್ಷದ ಪುರುಷನನ್ನು ತೀವ್ರ ಉಸಿರಾಟದ ತೊಂದರೆಯಿಂದ ಜು. 24ರಂದು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಕರೆ ತರಲಾಗಿತ್ತು. ಜು. 25ರಂದು ಮೂಗಿನ ದ್ರವದ ಮಾದರಿಯನ್ನು ರ್ಯಾಪಿಡ್ ಆಕ್ಸಿಜನ್ ಕಿಟ್ ಮೂಲಕ ಪರೀಕ್ಷಿಸಿದಾಗ ಸೋಂಕು ದೃಢಪಟ್ಟಿತ್ತು. ಸೋಂಕಿತರು ಜು. 25ರಂದು ಮೃತಪಟ್ಟಿದ್ದಾರೆ.