

ಯಲ್ಲಾಪುರ: ಸಾರ್ವಜನಿಕ ಸ್ಥಳದಲ್ಲಿ ಒಣಗಿದ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ತಾಲೂಕಿನ ಮಂಚಿಕೇರಿ-ಬಿಳಕಿ ರಸ್ತೆಯ ಹಾಲವಾಡದ ಬಳಿ ಅಪರಾಧ ಪತ್ತೆ ದಳ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ಮೂಲಕ ಬಂಧಿಸಿದ್ದಾರೆ.
ಹಾಲಿ ಮಂಚಿಕೇರಿ ನಿವಾಸಿಯಾಗಿರುವ ರಾಜಸ್ಥಾನದ ಉದಯಪುರದ ರತನಲಾಲ್ ರಾಮಚಂದ್ರ ಶರ್ಮಾ ಬಂಧಿತ ವ್ಯಕ್ತಿ. ಈತ ಮಂಚಿಕೇರಿ-ಬಿಳಲಿ ರಸ್ತೆಯಲ್ಲಿ ಹಾಲವಾಡ ಕ್ರಾಸ್ ಬಳಿ ಒಣಗಿದ ಗಾಂಜಾವನ್ನು ಮಾರಾಟಕ್ಕೆಂದು ತಂದಿದ್ದ ವೇಳೆ ಅಪರಾಧ ಪತ್ತೆ ದಳದ ಸಿಬ್ಬಂದಿ ಹಾಗೂ ಯಲ್ಲಾಪುರ ಪೊಲೀಸರು ದಾಳಿ ನಡೆಸಿದ್ದಾರೆ. ಬಂಧಿತನಿಂದ 15,400 ರೂ. ಮೌಲ್ಯದ 744 ಗ್ರಾಂ. ಗಾಂಜಾ, ಒಂದು ಬೈಕ್ ಹಾಗೂ 3105 ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಎಸ್ಪಿ ಶಿವಪ್ರಕಾಶ ದೇವರಾಜು, ಡಿಎಸ್ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ಸುರೇಶ ಯಳ್ಳೂರು, ಎಎಸ್ಐ ವಿಠ್ಠಲ ಮಾಲವಾಡಕರ್, ಅಪರಾಧ ಪತ್ತೆ ದಳದ ಸಿಬ್ಬಂದಿ ಪ್ರಶಾಂತ ಪಾವಸ್ಕರ್, ಚಂದ್ರಪ್ಪ ಕೊರವ, ಸತೀಶ ನಾಯ್ಕ, ರಮೇಶ ಮುಚ್ಚಂಡಿ, ಪ್ರದೀಪ ರೇವಣಕರ್, ಯಲ್ಲಾಪುರ ಪೊಲೀಸ್ ಸಿಬ್ಬಂದಿ ಬಸವರಾಜ ಹಗರಿ, ಗಜಾನನ ನಾಯ್ಕ, ನಾಗಪ್ಪ ಲಮಾಣಿ, ಬಸವರಾಜ ವಡ್ಡರ್, ಪರಶುರಾಮ ಕಾಳೆ ಕಾರ್ಯಾಚರಣೆಯಲ್ಲಿದ್ದರು.