

ಕಲಬುರಗಿ :ನಾಲ್ಕು ಲಕ್ಷ ರೂ.ನಗದು ಹಣವಿದ್ದ ಬ್ಯಾಗ್‌ನ್ನು ಬೈಕ್‌ನಲ್ಲಿ ಬಂದ ಸುಲಿಗೆಕೋರರು ಕಿತ್ತುಕೊಂಡು ಪರಾರಿಯಾದ ಘಟನೆ ಹಾಡಹಗಲೇ ನಗರದಲ್ಲಿ ನಡೆದಿದೆ.
ದಯಾನಂದ ಮದನಕರ್ ಎಂಬುವರೇ ಹಣ ಕಳೆದುಕೊಂಡವರು. ಆಳಂದ ತಾಲೂಕಿನ ವಿ.ಕೆ.ಸಲಗರ ಗ್ರಾಮದವರು. ಅಲ್ಲಿನ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು.
ದಯಾನಂದ ಅವರಿಗೆ ಪರಿಚಯವಿರುವ ದೀಪಕ್ ಖೇಡ್ಲ ಎಂಬುವರ ಬಳಿಕ ೯ ಲಕ್ಷ ರೂ. ಕೈಗಡ ಪಡೆದುಕೊಂಡಿದ್ದರು. ಅದರ ಪೈಕಿಯ ೪ ಲಕ್ಷ ರೂ.ಗಳನ್ನು ಕಲಬುರಗಿ ನಗರದ ಶಹಾಬಜಾರದ ಗಂಧಿಗುಡಿ ಲೇಔಟ್‌ನಲ್ಲಿರುವ ದೀಪಕ್ ಅವರ ದೊಡ್ಡಮ್ಮ ವಿಜಯಲಕ್ಷಿö್ಮÃ ಅವರ ಮನೆಯಿಂದ ತೆಗೆದುಕೊಂಡು ಬಂದಿದ್ದರು.
ಹಣದ ಚೀಲದೊಂದಿಗೆ ಸೂಪರ್ ಮಾರ್ಕೇಟ್‌ನಲ್ಲಿರುವ ಬಟ್ಟೆ ಅಂಗಡಿ ಬಳಿ ನಿಂತುಕೊAಡಿದ್ದಾಗ ಅಲ್ಲಿಗೆ ಬಂದ ದೀಪಕ್ ಅವರು ಮುಸ್ತಫಾನಿಗೆ ಆಳಂದ ಚೆಕ್‌ಪೋಸ್ಟ್ಗೆ ಬಿಟ್ಟು ಬರಲು ಹೇಳಿದ್ದಿಂದ ಬೈಕ್ ಮೇಲೆ ಹೋಗುವಾಗ ಕೆಟ್ಟಿತು. ಹೀಗಾಗಿ ಇಬ್ಬರು ಸೇರಿಕೊಂಡು ನಡೆದುಕೊಂಡು ಹೋಗುತ್ತಿರುವಾಗ ಶಾರದಾ ವಿವೇಕ ಕಾಲೇಜಿನ ಹತ್ತಿರದಲ್ಲಿ ಬೈಕ್ ಮೇಲೆ ವೇಗವಾಗಿ ಬಂದ ಆಗಂತುಕರು ಡಿಕ್ಕಿ ಹೊಡೆದಂತೆ ಮಾಡಿ, ಕೈಯಲ್ಲಿದ್ದ ಹಣದ ಚೀಲವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ. ಈ ಕುರಿತು ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.