ಹರ್ ಘರ್ ತಿರಂಗಾ ಜಾಗೃತಿ ಜಾಥಾ

14 SBG -1 Har Ghar Tiranga (1)
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:8; brp_del_th:0.0027,0.0000; brp_del_sen:0.1000,0.0000; motionR: 0; delta:null; module: photo;hw-remosaic: false;touch: (0.29904786, 0.8045837);sceneMode: 2621440;cct_value: 0;AI_Scene: (-1, -1);aec_lux: 102.22456;aec_lux_index: 0;albedo: ;confidence: ;motionLevel: 0;weatherinfo: null;temperature: 32;
Published on

ಶ್ರವಣಬೆಳಗೊಳ: ಹರ್ ಘರ್ ತಿರಂಗಾ ಅಭಿಯಾನದ ಘೋಷಣೆಯಂತೆ ದೇಶದ ಪ್ರತಿಯೊಂದು ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸಬೇಕು. ಈ ಮೂಲಕ ರಾಷ್ಟ್ರಭಕ್ತಿ ಹೆಚ್ಚಿಸಿ, ಧ್ವಜದ ಗೌರವವನ್ನು ಜನಮಾನಸದಲ್ಲಿ ಗಟ್ಟಿಗೊಳಿಸುವುದಾಗಿದೆ ಎಂದು ಕೇಂದ್ರ ಪುರಾತತ್ವ ಇಲಾಖೆ ಹಾಸನ ಉಪ ವಿಭಾಗದ ಪುರಾತತ್ವ ಸಂರಕ್ಷಣಾಧಿಕಾರಿ ಸುನೀಲ್ ಕುಮಾರ್ ಹೇಳಿದರು.

ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದ ಮಹಾದ್ವಾರದಲ್ಲಿ ಪುರಾತತ್ವ ಇಲಾಖೆ ಹಾಗೂ ಅಂಬಿಕಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ ಹರ್ ಘರ್ ತಿರಂಗಾ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಕಾರ್ಯಕ್ರಮದಿಂದ ನಮ್ಮ ತ್ರಿವರ್ಣ ಧ್ವಜದ ಮಹತ್ವ ಮತ್ತು ಅದರ ಇತಿಹಾಸವನ್ನು ಜನರಿಗೆ ಪರಿಚಯಿಸುವುದಾಗಿದೆ. ರಾಷ್ಟ್ರೀಯ ಏಕತ್ನೆ ಬಲಪಡಿಸಿ, ವಿದ್ಯಾರ್ಥಿಗಳು ಹಾಗೂ ಯುವಕರಲ್ಲಿ ದೇಶಭಕ್ತಿ ಹೆಚ್ಚಿಸುವುದರೊಂದಿಗೆ ನಾಡು-ನುಡಿಗೆ ಗೌರವ ನೀಡಿ ಪ್ರತಿ ನಾಗರಿಕನ ಮನಸ್ಸಿನಲ್ಲಿ ರಾಷ್ಟ್ರಭಕ್ತಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಅಂಬಿಕಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಕುಮಾರ್ ಮಾತನಾಡಿ, ಹರ್ ಘರ್ ತಿರಂಗಾ ಅಭಿಯಾನದ ಮಹತ್ವವನ್ನು ವಿವರಿಸಿದರು.

ವಿಂಧ್ಯಗಿರಿ ಮಹಾದ್ವಾರದಿಂದ ಪ್ರಾರಂಭವಾಗಿ ಶ್ರೀಮಠದ ಬೀದಿ, ಬೆಂಗಳೂರು ರಸ್ತೆ ಮೂಲಕ ಚಂದ್ರಗಿರಿ ಬೆಟ್ಟದ ಮಹಾದ್ವಾರದ ವರೆಗೆ ಜಾಥಾ ಸಾಗಿತು. ಎಲ್ಲರೂ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ವಂದೇ ಮಾತರಂ, ಭಾರತ ಮಾತಾಕೀ ಜೈ ಘೋಷಣೆಗಳನ್ನು ಕೂಗುತ್ತಾ ಸಾಗಿದರು.

ಪುರಾತತ್ವ ಇಲಾಖೆ ಸಿಬ್ಬಂದಿ ಶ್ರೀನಿವಾಸ್, ಪ್ರಿಯಾಂಶು ದೀಕ್ಷಿತ್, ಸುರೇಂದ್ರ, ಮುರಳಿ, ಜ್ಞಾನೇಶ್, ಪ್ರವಾಸಿ ಮಿತ್ರರಾದ ಮಣಿಕಂಠ, ಕೃಷ್ಣಮೂರ್ತಿ, ಅಮಿತ್, ರಾಜಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net