ಹರಳಹಳ್ಳಿಗೆ ವೈನ್‌ಸ್ಟೋರ್‌ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ

16krp-03
Published on

ಕೆ.ಆರ್.ಪೇಟೆ: ಪಟ್ಟಣದ ವೈನ್ ಸ್ಟೋರ್‌ಅನ್ನು ಶೀಳನೆರೆ ಹೋಬಳಿ ಹರಳಹಳ್ಳಿ ಗ್ರಾಮಕ್ಕೆ ಸ್ಥಳಾಂತರಿಸುತ್ತಿರುವುದನ್ನು ಗ್ರಾಮಸ್ಥರು ವಿರೋಧಿಸಿ ಪ್ರತಿಭಟನೆ ನಡೆಸಿದರು.


ಹರಳಹಳ್ಳಿ ಗ್ರಾಮದ ಮುಖಂಡ ನಿಂಗೇಗೌಡ, ಸ್ತ್ರೀ ಶಕ್ತಿ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ವೈನ್‌ಸ್ಟೋರ್ ಸ್ಥಳಾಂತರಗೊಳ್ಳುವುದರಿಂದ ಗ್ರಾಮದಲ್ಲಿ ಕುಡುಕರ ಹಾವಳಿ ಹೆಚ್ಚಾಗಿ ಅಶಾಂತಿ ಸೃಷ್ಟಿಯಾಗಲಿದೆ. ಸ್ಥಳಾಂತರ ಮಾಡುವ ಉದ್ದೇಶಿತ ಜಾಗದಲ್ಲಿ ಕಲ್ಯಾಣಿ ಇದೆ. ಹಬ್ಬ ಹರಿದಿನದಲ್ಲಿ ಗಂಗಾ ಪೂಜೆ, ದೇವರಿಗೆ ನೀರು ತರುವುದಕ್ಕೆ ಬಳಸಲಾಗುತ್ತಿದೆ. ಸುತ್ತಮುತ್ತಲೂ ಶಾಲೆ, ದೇವಸ್ಥಾನ, ಹಾಲಿನ ಡೇರಿ ಇದೆ. ಈ ರಸ್ತೆಯಲ್ಲಿ ದಿನ ಶಾಲಾ ಮಕ್ಕಳು, ಸಾರ್ವಜನಿಕರು, ಮಹಿಳೆಯರು ತಿರುಗಾಡುತ್ತಾರೆ. ಸುತ್ತಲೂ ವಾಸದ ಮನೆಗಳಿವೆ. ಆದ್ದರಿಂದ ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡುವುದು ಬೇಡ ಎಂದು ಒತ್ತಾಯಿಸಿದರು.


ಗ್ರಾಮಸ್ಥರಾದ ನಿಂಗೇಗೌಡ, ಮಂಜುಳಾ, ಶ್ವೇತಾ, ಸಾಕಮ್ಮ, ತರುಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net