ಹದಗೆಟ್ಟ ಹಳೇ ಹೆರವಟ್ಟಾ ರಸ್ತೆ

8KMT1
Published on

ಕುಮಟಾ: ಪಟ್ಟಣದ ಹಳೇ ಹೆರವಟ್ಟಾದ ವಾಕರಸಾ ಡಿಪೋ ಪಕ್ಕದ ರಸ್ತೆ ಸರಿಪಡಿಸಬೇಕು ಎಂದು ಆಗ್ರಹಿಸಿ ಸ್ಥಳೀಯರು ಶಾಸಕ ದಿನಕರ ಶೆಟ್ಟಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಸಿದ್ದಾಪುರ ರಸ್ತೆಯಿಂದ ಹಳೇ ಹೆರವಟ್ಟಾ ಮೂಲಕ ಸಾಗುವ ಡಿಪೋ ಪಕ್ಕದ ರಸ್ತೆ ತೀರಾ ಹಾಳಾಗಿದೆ. 2018-19ರಲ್ಲಿ ಒಳಚರಂಡಿ ಯೋಜನೆಗಾಗಿ ಈ ರಸ್ತೆಯನ್ನು ಆಳವಾಗಿ ಅಗೆದು ಕಾಲುವೆ ತೋಡಿದ ಜಾಗಕ್ಕೆ ಮಾತ್ರ ತೇಪೆ ಹಾಕಿದ್ದರು. ಈಗ ಎಲ್ಲೆಡೆ ಕಿತ್ತುಹೋಗಿ ಮ್ಯಾನ್​ಹೋಲ್ ಮುಚ್ಚಳವೂ ಮೇಲೆದ್ದು ವಾಹನಗಳಿಗೆ ಅಪ್ಪಳಿಸುತ್ತಿದೆ. ಹೀಗಾಗಿ ಸಂಚಾರ ಕಷ್ಟವಾಗಿದೆ.

ಹಿಂದೆ ಈ ರಸ್ತೆಯನ್ನು ಡಾಂಬರೀಕರಣ ಮಾಡುವಾಗ ಹೆರವಟ್ಟಾದ ಸಿದ್ದಾಪುರ ರಸ್ತೆ ಕ್ರಾಸ್​ನಿಂದ ರಾ.ಹೆ. 66ರ ಡಿಪೋ ಕ್ರಾಸ್​ವರೆಗೆ ಪೂರ್ಣ ಪ್ರಮಾಣದಲ್ಲಿ ಮಾಡುತ್ತಿದ್ದರು. ಈ ವರ್ಷ ಅರ್ಧ ಕಾಮಗಾರಿ ಮಾತ್ರ ಮಾಡಲಾಗಿದೆ. ರಸ್ತೆ ತೀರಾ ಹದಗೆಟ್ಟ ಭಾಗವನ್ನು ಹಾಗೇ ಬಿಡಲಾಗಿದೆ. ರಸ್ತೆ ಕೆಲವು ಕಡೆ ತೀರಾ ಹದಗೆಟ್ಟಿದ್ದು ಇಕ್ಕಟ್ಟಾಗಿಯೂ ಇದೆ. ನಿತ್ಯ ಸಾವಿರಾರು ವಾಹನಗಳು ಓಡಾಡುವ ಈ ರಸ್ತೆಯನ್ನು ಕೂಡಲೆ ದುರಸ್ತಿ ಮಾಡಬೇಕು ಎಂದು ಮನವಿ ಪತ್ರದ ಮೂಲಕ ಸಾರ್ವಜನಿಕರು ಶಾಸಕರನ್ನು ಒತ್ತಾಯಿಸಿದರು.

ಶೀಘ್ರ ರಸ್ತೆ ದುರಸ್ತಿ ಮಾಡಿಸುವುದಾಗಿ ಶಾಸಕ ದಿನಕರ ಶೆಟ್ಟಿ ಭರವಸೆ ನೀಡಿದರು. ಈ ವೇಳೆ ಪುರಸಭೆ ಸದಸ್ಯರಾದ ಮೋಹಿನಿ ಗೌಡ, ಸೂರ್ಯಕಾಂತ ಗೌಡ, ಸ್ಥಳೀಯರಾದ ಸಿ.ಆರ್.ನಾಯ್ಕ, ಸುರೇಶ ನಾಯ್ಕ, ಅಮಿತಾ ನಾಯ್ಕ, ಮಾರುತಿ ಶೇಟ್, ಗೋಪಾಲ ಶೇಟ್, ಉಮಾ ನಾಯಕ, ಮೋಹನ ಗೌಡ, ವಿನಾಯಕ ಗೌಡ, ಅನಿಲ, ಸತೀಶ, ಮಹೇಶ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net