ಹತ್ಯೆ ಆರೋಪಿಗಳ ಶೀಘ್ರ ಬಂಧನ

ಫೋಟೋ ಶೀರ್ಷಿಕೆ 06 ಸಿಆರ್_ಪಿ-2 ಎ
ದಕ್ಷಿಣ ವಲಯ ಐಜಿಪಿ ಎಚ್.ಸಿ.ಬೋರಲಿಂಗಯ್ಯ
Published on

ಚನ್ನರಾಯಪಟ್ಟಣ: ತಾಲೂಕಿನ ಹೊನ್ನಮಾರನಹಳ್ಳಿ ಗ್ರಾಮದ ರೌಡಿಶೀಟರ್ ಮಾಸ್ತೀಗೌಡನನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪಿಗಳ ಪತ್ತೆಗಾಗಿ ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚನೆ ಮಾಡಿದ್ದು, ಶೀಘ್ರದಲ್ಲೆ ಎಲ್ಲ ಆರೋಪಿಗಳನ್ನು ಬಂಧಿಸಲಾಗುವುದು ಎಂದು ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ಎಚ್.ಸಿ.ಬೋರಲಿಂಗಯ್ಯ ತಿಳಿಸಿದರು.

ಕೊಲೆ ನಡೆದ ಧನಲಕ್ಷ್ಮೀ ಚಿತ್ರಮಂದಿರ ಬಳಿಯ ಸ್ಥಳಕ್ಕೆ ಬುಧವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಕಿರಿಯ ಪೊಲೀಸ್ ಅಧಿಕಾರಿಗಳೊಂದಿಗ ಸಭೆ ನಡೆಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಟ್ಟಣದಲ್ಲಿ ಎರಡು ಗ್ಯಾಂಗ್‌ವಾರ್ ಸಕ್ರಿಯವಾಗಿದ್ದು, ಒಬ್ಬರ ಮೇಲೊಬ್ಬರು ಆಗಾಗ್ಗೆ ಅಟ್ಯಾಕ್ ಮಾಡುತ್ತಿದ್ದಾರೆ. ಕೆಲವರನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡಲಾಗಿದೆ. ಕೆಲವರು ಕಾರಾಗೃಹದಲ್ಲಿದ್ದಾರೆ.
ಹಳೇ ದ್ವೇಷದ ಸಲುವಾಗಿ ಹೊರಗಿರುವ ಇಂತಹ ರೌಡಿಗಳು ತಮ್ಮ ನಡುವೆ ಜಗಳ, ಗಲಾಟೆಗಳನ್ನು ಮಾಡಿಕೊಂಡು, ಕೊಲೆಯ ಹಂತ ತಲುಪಿವೆ. ಮಾಸ್ತಿಗೌಡನ ಕೊಲೆಯಲ್ಲಿ 5 ಮಂದಿ ಭಾಗಿಯಾಗಿರುವ ಶಂಕೆ ಇದೆ. ಈಗಾಗಲೇ ಆರೋಪಿಗಳ ಪತ್ತೆಗೆ ಕ್ರಮ ವಹಿಸಲಾಗಿದೆ. ಇನ್ಮುಂದೆ ಪಟ್ಟಣದಲ್ಲಿ ಇಂತಹ ಪ್ರಕರಣಗಳು ಜರುಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದರು.

ಡಿವೈಎಸ್‌ಪಿ ಪಿ.ರವಿಪ್ರಸಾದ್, ಸಿಪಿಐ ವಸಂತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net